AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kim Jong Un: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 40 ದಿನಗಳಿಂದ ಕಾಣಿಸ್ತಿಲ್ವಂತೆ, ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೃಹತ್ ಸೇನಾ ಮೆರವಣಿಗೆಗೂ ಮುನ್ನ ಕಿಮ್ ನಾಪತ್ತೆಯಾಗಿದ್ದಾರೆ.

Kim Jong Un: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 40 ದಿನಗಳಿಂದ ಕಾಣಿಸ್ತಿಲ್ವಂತೆ, ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ನಯನಾ ರಾಜೀವ್
|

Updated on: Feb 07, 2023 | 11:00 AM

Share

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೃಹತ್ ಸೇನಾ ಮೆರವಣಿಗೆಗೂ ಮುನ್ನ ಕಿಮ್ ನಾಪತ್ತೆಯಾಗಿದ್ದಾರೆ. ಆದರೆ ಕಳೆದ 35 ದಿನಗಳಿಂದ ಅವರು ಕಾಣಿಸಿಕೊಂಡಿರಲಿಲ್ಲ. ಭಾನುವಾರ ನಡೆದ ಕಮ್ಯುನಿಸ್ಟ್ ಪಕ್ಷದ ಸಭೆಗೂ ಕಿಮ್ ಜಾಂಗ್ ಹಾಜರಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮತ್ತೆ ಆರೋಗ್ಯದ ಬಗ್ಗೆ ಊಹಾಪೋಹಗಳೆದ್ದಿವೆ. ಈ ಮಹತ್ವದ ಸಭೆಗೆ ಕಿಮ್ ಜಾಂಗ್ ಉನ್ ಗೈರಾಗಿರುವುದು ಇದು ಮೂರನೇ ಬಾರಿ. ಹೀಗಿರುವಾಗ ಅವರ ಆರೋಗ್ಯದ ಬಗ್ಗೆ ಈಗ ಚರ್ಚೆ ನಡೆದಿದೆ.

ಫೆಬ್ರವರಿ 8 ಕೊರಿಯನ್ ಪೀಪಲ್ಸ್ ಆರ್ಮಿ ಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ದಿನ ದೇಶದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈಗ ಕಿಮ್ ಜಾಂಗ್ ಈ ಪರೇಡ್ ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಿದೆ. ಕಿಮ್ ಜಾಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ಹೇಳಿವೆ.

ಮತ್ತಷ್ಟು ಓದಿ: North Korea: ಕೊರಿಯನ್ ಡ್ರಾಮಾ ವೀಕ್ಷಿಸಿದ್ದಕ್ಕೆ ಇಬ್ಬರು ಅಪ್ರಾಪ್ತರಿಗೆ ಮರಣದಂಡನೆ

ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ಫೆಬ್ರವರಿ 8 ರಂದು ನಡೆಯಲಿರುವ ಮಿಲಿಟರಿ ಪರೇಡ್‌ನಲ್ಲಿ ಕಿಮ್ ಜಾಂಗ್ ಉನ್ ಭಾಗವಹಿಸಬಹುದು. ಈ ಮೆರವಣಿಗೆಯೊಂದಿಗೆ, ಕಿಮ್ ತನ್ನ ಪರಮಾಣು ಸಾಮರ್ಥ್ಯವನ್ನು ಅಮೆರಿಕ ಮತ್ತು ಏಷ್ಯಾದ ಇತರ ಮಿತ್ರರಾಷ್ಟ್ರಗಳಿಗೆ ತೋರಿಸಲಿದ್ದಾರೆ.

ಉತ್ತರ ಕೊರಿಯಾ 2022 ರಲ್ಲಿ 70 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ವರದಿಗಳ ಪ್ರಕಾರ, ಈ ಕ್ಷಿಪಣಿಗಳನ್ನು ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಲು ಅಥವಾ ಯುಎಸ್ ಮುಖ್ಯ ಭೂಭಾಗವನ್ನು ತಲುಪಲು ವಿನ್ಯಾಸಗೊಳಿಸಲಾಗಿದೆ. ಕಿಮ್ ಜಾಂಗ್ ಉನ್ ಅವರ ಸೇನಾ ಕಾರ್ಯಾಚರಣೆಯನ್ನು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ನಿರಂತರವಾಗಿ ಪ್ರಶ್ನಿಸುತ್ತಿರುವುದಕ್ಕೆ ಇದೇ ಕಾರಣ.

ಕಿಮ್ ಜಾಂಗ್ ಉನ್ ಹಲವು ಬಾರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. 2014ರಲ್ಲಿ ಅವರು 40 ದಿನಗಳ ಕಾಲ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ. 2021 ರ ಅಂತ್ಯದ ವೇಳೆಗೆ, ಕಿಮ್ ಜೊಂಗ್ ಸುಮಾರು 30 ದಿನಗಳವರೆಗೆ ಕಾಣಿಸಲಿಲ್ಲ. ಮೇ 2021 ಮತ್ತು ಏಪ್ರಿಲ್ 2020 ರಲ್ಲಿ ಕಿಮ್ ಜಾಂಗ್ ಬಹಳ ಸಮಯದವರೆಗೆ ಕಾಣೆಯಾಗಿದ್ದರು. ಆಗಲೂ ಅವರ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ