Deadliest Earthquakes: ಜಗತ್ತಿನಲ್ಲಿ 2000ದಿಂದೀಚೆಗೆ ಸಂಭವಿಸಿರುವ ಭಯಾನಕ ಭೂಕಂಪಗಳ ಕುರಿತು ಮಾಹಿತಿ ಇಲ್ಲಿದೆ
ಟರ್ಕಿ ಹಾಗೂ ಸಿರಿಯಾದಲ್ಲಿ ಒಂದೇ ದಿನದಲ್ಲಿ 3 ಬಾರಿ ಭೂಮಿ ಕಂಪಿಸಿದ ಪರಿಣಾಮ 4 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಟರ್ಕಿ ಹಾಗೂ ಸಿರಿಯಾದಲ್ಲಿ ಒಂದೇ ದಿನದಲ್ಲಿ 3 ಬಾರಿ ಭೂಮಿ ಕಂಪಿಸಿದ ಪರಿಣಾಮ 4 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಶೀತ ಮತ್ತು ಹಿಮದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವ ಜನರ ಹುಡುಕಾಟವನ್ನು ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಠ 3800 4000 ಜನರು ಸಾವನ್ನಪ್ಪಿದ್ದಾರೆ ಮತ್ತು 15000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 10 ನಗರಗಳಲ್ಲಿ 1,700ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೀಡಾಗಿವೆ ಎಂದು ದೇಶದ ಉಪಾಧ್ಯಕ್ಷ ಫಿಯೆಟ್ ಒಕ್ಟೇ ಅವರನ್ನು ಉಲ್ಲೇಖಿಸಿ ವರದಿ ಹೇಳಿದೆ. ಅದೇ ಸಮಯದಲ್ಲಿ, ಸಿರಿಯಾದಲ್ಲಿ ಕನಿಷ್ಠ 783 ಜನರು ಸಾವನ್ನಪ್ಪಿದರು ಮತ್ತು 639 ಜನರು ಗಾಯಗೊಂಡರು. ಇಸ್ರೇಲ್ ಮತ್ತು ಲೆಬನಾನ್‌ನಲ್ಲಿ ಅನೇಕ ಸಾವುಗಳು ಸಂಭವಿಸುವ ಭಯವಿದೆ.
ಮತ್ತಷ್ಟು ಓದಿ: Turkey and Syria: ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರ; 1,900ಕ್ಕೂ ಹೆಚ್ಚು ಸಾವು, ಭೀಕರತೆಯ ಫೋಟೋಗಳು ಇಲ್ಲಿವೆ
2000ರಿಂದೀಚೆಗೆ ವಿಶ್ವದಲ್ಲಿ ಸಂಭವಿಸಿದ ಕೆಲವು ಮಾರಣಾಂತಿಕ ಭೂಕಂಪಗಳ ಕುರಿತು ಮಾಹಿತಿ ಇಲ್ಲಿದೆ
- ಜೂನ್ 22, 2022: ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿ 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
- ಆಗಸ್ಟ್ 14, 2021: ಹೈಟಿಯಲ್ಲಿ 7.2 ತೀವ್ರತೆಯ ಭೂಕಂಪವು 2,200 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.
- ಸೆಪ್ಟೆಂಬರ್ 28, 2018: ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪವು 4,300 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿತ್ತು.
- ಆಗಸ್ಟ್ 24, 2016: ಮಧ್ಯ ಇಟಲಿಯಲ್ಲಿ 6.2 ತೀವ್ರತೆಯ ಭೂಕಂಪದಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
- ಏಪ್ರಿಲ್ 25, 2015: ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪದಲ್ಲಿ 8,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
- ಆಗಸ್ಟ್ 3, 2014: ಚೀನಾದ ವೆನ್ಪಿಂಗ್ ಬಳಿ 6.2 ತೀವ್ರತೆಯ ಭೂಕಂಪವು 700 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.
- ಸೆಪ್ಟೆಂಬರ್ 24, 2013: ನೈಋತ್ಯ ಪಾಕಿಸ್ತಾನದಲ್ಲಿ 7.7 ತೀವ್ರತೆಯ ಭೂಕಂಪವು 800 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.
- ಮಾರ್ಚ್ 11, 2011: ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ 9.0 ತೀವ್ರತೆಯ ಭೂಕಂಪವು ಸುನಾಮಿಯನ್ನು ಪ್ರಚೋದಿಸಿತ್ತು, 20,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
- ಫೆಬ್ರವರಿ 27, 2010: ಚಿಲಿಯಲ್ಲಿ 8.8 ತೀವ್ರತೆಯ ಭೂಕಂಪವು ಸುನಾಮಿಯನ್ನು ಪ್ರಚೋದಿಸಿತ್ತು ಮತ್ತು 524 ಜನರು ಬಲಿಯಾಗಿದ್ದರು.
- ಜನವರಿ 12, 2010: ಸರ್ಕಾರಿ ಅಂದಾಜಿನ ಪ್ರಕಾರ, ಹೈಟಿಯಲ್ಲಿ 7.0 ತೀವ್ರತೆಯ ಭೂಕಂಪವು 316,000 ಜನರನ್ನು ಸಾವಿನ ಮನೆಗೆ ದೂಡಿತ್ತು.
- ಸೆಪ್ಟೆಂಬರ್ 30, 2009: ಇಂಡೋನೇಷ್ಯಾದ ದಕ್ಷಿಣ ಸುಮಾತ್ರಾದಲ್ಲಿ 7.5 ತೀವ್ರತೆಯ ಭೂಕಂಪವು 1,100 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.
- ಏಪ್ರಿಲ್ 6, 2009: ಇಟಲಿಯ ಎಲ್’ಅಕ್ವಿಲಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪದಿಂದ 300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
- ಮೇ 12, 2008: ಚೀನಾದ ಪೂರ್ವ ಸಿಚುವಾನ್‌ನಲ್ಲಿ 7.9 ತೀವ್ರತೆಯ ಭೂಕಂಪ ಸಂಭವಿಸಿತು, ಇದರ ಪರಿಣಾಮವಾಗಿ 87,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
- ಆಗಸ್ಟ್ 15, 2007: ಮಧ್ಯ ಪೆರುವಿನ ಕರಾವಳಿಯಲ್ಲಿ 8.0 ತೀವ್ರತೆಯ ಭೂಕಂಪದಿಂದ 500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
- ಮೇ 26, 2006: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ 6.3 ತೀವ್ರತೆಯ ಭೂಕಂಪವು 5,700 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.
- ಅಕ್ಟೋಬರ್ 8, 2005: ಪಾಕಿಸ್ತಾನದ ಕಾಶ್ಮೀರ ಪ್ರದೇಶದಲ್ಲಿ 7.6 ತೀವ್ರತೆಯ ಭೂಕಂಪವು 80,000 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು.
- ಮಾರ್ಚ್ 28, 2005: ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ 8.6 ತೀವ್ರತೆಯ ಭೂಕಂಪ ಸುಮಾರು 1,300 ಜನರ ಸಾವಿಗೆ ಕಾರಣವಾಗಿತ್ತು.
- ಡಿಸೆಂಬರ್ 26, 2004: ಇಂಡೋನೇಷ್ಯಾದಲ್ಲಿ 9.1 ತೀವ್ರತೆಯ ಭೂಕಂಪವು ಹಿಂದೂ ಮಹಾಸಾಗರದಲ್ಲಿ ಸುನಾಮಿಯನ್ನು ಪ್ರಚೋದಿಸಿತ್ತು, ಹನ್ನೆರಡು ದೇಶಗಳಲ್ಲಿ 230,000 ಜನರು ಸಾವನ್ನಪ್ಪಿದ್ದರು.
- ಡಿಸೆಂಬರ್ 26, 2003: ಆಗ್ನೇಯ ಇರಾನ್‌ನಲ್ಲಿ 6.6 ತೀವ್ರತೆಯ ಭೂಕಂಪವು 50,000 ಜನರನ್ನು ಹತ್ಯೆ ಮಾಡಿತ್ತು.
- ಮೇ 21, 2003: ಅಲ್ಜೀರಿಯಾದಲ್ಲಿ 6.8 ತೀವ್ರತೆಯ ಭೂಕಂಪದಲ್ಲಿ 2,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
- ಮಾರ್ಚ್ 25, 2002: ಉತ್ತರ ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪವು ಸುಮಾರು 1,000 ಜನರನ್ನು ಕೊಂದಿತ್ತು.
- ಜನವರಿ 26, 2001: ಭಾರತದ ಗುಜರಾತ್‌ನಲ್ಲಿ 7.7 ತೀವ್ರತೆಯ ಭೂಕಂಪವು 20,000 ಜನರನ್ನು ಬಲಿತೆಗೆದುಕೊಂಡಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ