Gun Shot: ಚಲಿಸುವ ಕಾರಿನಲ್ಲಿ ಸ್ವಂತ ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ

US State of Florida: ಅಮೆರಿಕದ ಫ್ಲೋರಿಡಾದ ನಾರ್ತ್ ಪೋರ್ಟ್​ನಲ್ಲಿ ಕಾರು ಚಲಾಯಿಸುತ್ತಿದ್ದ 57 ವರ್ಷದ ಮಹಿಳೆ ಮೇಲೆ ಆಕೆಯ 6 ವರ್ಷದ ಮೊಮ್ಮಗಳು ಹಿಂಬದಿ ಸೀಟಿನಿಂದ ಗುಂಡು ಹೊಡೆದ ಘಟನೆ ಫೆ. 16ರಂದು ನಡೆದಿದೆ.

Gun Shot: ಚಲಿಸುವ ಕಾರಿನಲ್ಲಿ ಸ್ವಂತ ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ
ಚಲಿಸುವ ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 18, 2023 | 3:21 PM

ಫ್ಲೋರಿಡಾ: ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಶೂಟೌಟ್ ಘಟನೆಗಳು (US Shootout) ನಡೆಯುತ್ತಿರುವುದು ವರದಿಯಾಗುತ್ತಲೇ ಇದೆ. ಇದೀಗ ಫ್ಲೋರಿಡಾ ರಾಜ್ಯದಲ್ಲಿ 6 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ಅಜ್ಜಿಯ ಮೇಲೆ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಮುಕ್ತವಾಗಿ ಗನ್ ಲೈಸೆನ್ಸ್ (Gun License) ನೀಡುವ ಬಗ್ಗೆ ಸಾಕಷ್ಟು ಚರ್ಚೆ, ವಾದ ಪ್ರತಿವಾದಗಳು ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್, ಮೊಮ್ಮಗಳಿಂದ ಗುಂಡು ಬಡಿದ ಮಹಿಳೆಗೆ ಪ್ರಾಣಾಪಾಯವಾಗಿಲ್ಲ. 57 ವರ್ಷದ ಈಕೆಗೆ ಬೆನ್ನಿನ ಕೆಳಭಾಗದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫ್ಲೋರಿಡಾದ ನಾರ್ತ್ ಪೋರ್ಟ್ ನಗರದಲ್ಲಿ ಫೆಬ್ರುವರಿ 16ರಂದು ಈ ದುರಂತ ಸಂಭವಿಸಿದೆ. 6 ವರ್ಷದ ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈಕೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು ಎಂಬ ವಿಚಾರ ಸದ್ಯಕ್ಕೆ ಗೊತ್ತಾಗಿದೆ.

ದುರಂತ ನಡೆದಾಗ 57 ವರ್ಷದ ಮಹಿಳೆ ಕಾರು ಚಲಾಯಿಸುತ್ತಿದ್ದರು. ಹಿಂಬದಿ ಸೀಟಿನಲ್ಲಿ 6 ವರ್ಷದ ಆಕೆಯ ಮೊಮ್ಮಗಳಿದ್ದಳು. ಕಾರಿನ ಬ್ಯಾಕ್​ಸೀಟಿನಲ್ಲಿದ್ದ ಪಿಸ್ತೂಲನ್ನು ಬಾಲಕಿ ಕೈಯಲ್ಲಿಡಿದುಕೊಂಡಿದ್ದಾಳೆ. ಗನ್ ಲೋಡ್ ಆಗಿತ್ತೋ ಇಲ್ಲವೋ ತಿಳಿದಿಲ್ಲ, ಟ್ರಿಗರ್ ಒತ್ತಿದಾಗ ಡ್ರೈವರ್ ಸೀಟಿನ ಹಿಂಬದಿಯಿಂದ ಗುಂಡು ಸೀಳಿಹೋಗಿ ವೃದ್ಧೆಯ ಬೆನ್ನ ಕೆಳಭಾಗಕ್ಕೆ ಹೊಕ್ಕಿದೆ.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದಕ್ಕೆ 17ರ ಬಾಲಕಿ ಮೇಲೆ ಆ್ಯಸಿಡ್ ದಾಳಿ, ಮಿಂಟೋದಲ್ಲಿ ಬಾಲಕಿಯ ಆರೋಗ್ಯ ವಿಚಾರಿಸಿದ ಸಚಿವ ಹಾಲಪ್ಪ ಆಚಾರ್

ತೀವ್ರವಾಗಿ ಗಾಯಗೊಂಡ ಈ ಮಹಿಳೆ ಹಾಗೂ ಹೀಗೂ ಕಾರನ್ನು ಮನೆಯವರೆಗೆ ಚಲಾಯಿಸಿಕೊಂಡು ಹೋಗಿ ಎಮರ್ಜನ್ಸಿ ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡಿದ್ದಾರೆ. ಆ ಬಳಿಕ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳ ಕೈಗೆ ಪಿಸ್ತೂಲು, ಗನ್​ನಂತಹ ಶಸ್ತ್ರಗಳು ಸಿಕ್ಕದಂತೆ ಎಚ್ಚರ ವಹಿಸಬೇಕಾದ್ದು ಪೋಷಕರ ಕರ್ತವ್ಯ. ಈ ಘಟನೆ ಎಲ್ಲರಿಗೂ ಎಚ್ಚರಿಕೆ ಕರೆಗಂಟೆ ಎಂದು ನಾರ್ತ್ ಪೋರ್ಟ್ ಪೊಲೀಸ್ ಮುಖ್ಯಸ್ಥ ಟಾಡ್ ಗ್ಯಾರಿಸನ್ ಹೇಳಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ