ಚುನಾವಣೆ ಹೊತ್ತಲ್ಲೇ ಒಂದೂವರೆ ತಿಂಗಳಲ್ಲೇ 7,361 ಪಾತಕಿಗಳಿಗೆ ರೌಡಿಪಟ್ಟಿಯಿಂದ ಮುಕ್ತಿ: ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್​ ಸಮೀಪಿಸುತ್ತಿದ್ದಂತೆಯೇ ಕೆಲ‌ ರೌಡಿ‌‌ಶೀಟರ್ ಗಳು ಫುಲ್ ಆಕ್ಟಿವ್ ಆಗಿದ್ದಾರೆ. ಚುನಾವಣೆ ಅಖಾಡಕ್ಕಿಳಿಯಲು ಕಸರತ್ತು ನಡೆಸಿದ್ದಾರೆ. ಹೀಗಾಗಿ ಕೆಲ ರೌಡಿಗಳು ಲಾಬಿ ನಡೆಸಿ ರೌಡಿ ಪಟ್ಟಿಯಿಂದ ಮುಕ್ತಿ ಪಡೆದುಕೊಂಡಿದ್ದಾರೆ.

ಚುನಾವಣೆ ಹೊತ್ತಲ್ಲೇ ಒಂದೂವರೆ ತಿಂಗಳಲ್ಲೇ 7,361 ಪಾತಕಿಗಳಿಗೆ ರೌಡಿಪಟ್ಟಿಯಿಂದ ಮುಕ್ತಿ: ಯಾವ ಜಿಲ್ಲೆಯಲ್ಲಿ ಎಷ್ಟು?
ಪ್ರಾತಿನಿಧಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on:Feb 18, 2023 | 7:47 PM

ಬೆಂಗಳೂರು: ಚುನಾವಣೆಗಳು(Elections) ಬಂದರೆ ಸಾಕು ರೌಡಿಶೀಟರ್​ಗಳನ್ನ ಕಾಯುವುದು ಪೊಲೀಸ್​ ಇಲಾಖೆಗೆ(Police Department) ಒಂದು ದೊಡ್ಡ ಸವಾಲು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಎಲೆಕ್ಷನ್ ಸಮಯದಲ್ಲಿ ರೌಡಿಶೀಟರ್​ಗಳ ಪರೇಡ್ ನಡೆಸಿ ಎಚ್ಚರಿಕೆ ಕೊಡಲಾಗುತ್ತೆ. ಇನ್ನು ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಚುನಾವಣೆ ಮುಗಿಯುವವರೆಗೆ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಆದ್ರೆ, ಈಗ ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಪೊಲೀಸ್​ ಇಲಾಖೆ 7,361 ಪಾತಕಿಗಳನ್ನು (criminals) ರೌಡಿಪಟ್ಟಿಯಿಂದ (rowdy sheeter) ಕೈಬಿಟ್ಟಿದೆ.

ಇದನ್ನೂ ಓದಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿಗಳ ಮೇಲೆ ಪೊಲೀಸರ ಹದ್ದಿನಕಣ್ಣು: 35 ರೌಡಿಶೀಟರ್​ಗಳು ಮತ್ತೆ ಜೈಲಿಗೆ

ಹೌದು… 7,361 ಪಾತಕಿಗಳಿಗೆ ರೌಡಿಪಟ್ಟಿಯಿಂದ ಮುಕ್ತಿ ಸಿಕ್ಕಿದೆ. ಪೊಲೀಸ್ ಇಲಾಖೆ ಒಂದೂವರೆ ತಿಂಗಳಲ್ಲೇ(2023ರ ಜನವರಿ ಹಾಗೂ ಫೆಬ್ರವರಿ ತಿಂಗಳು) 7361 ಪಾತಕಿಗಳನ್ನು ರೌಡಿಪಟ್ಟಿಯಿಂದ ತೆಗೆದಿದೆ. ರಾಜ್ಯ ಸರ್ಕಾರವೇ ಒದಗಿಸಿದ ಅಧಿಕೃತ ಮಾಹಿತಿಯಲ್ಲಿ ಬಹಿರಂಗವಾಗಿದೆ.

ರೌಡಿಪಟ್ಟಿಯಿಂದ ಹೆಸರು ಹಿಂತೆಗೆದವರಲ್ಲಿ ಮಂಗಳೂರು, ಮಂಡ್ಯ, ಉತ್ತರ ಕನ್ನಡ ಹಾಗೂ ಬೀದರ್ ಜಿಲ್ಲೆಗಳೇ ಸಿಂಹಪಾಲು. ಮಂಗಳೂರಲ್ಲಿ 781 ಪಾತಕಿಗಳನ್ನು ರೌಡಿಪಟ್ಟಿಯಿಂದ ಕೈಬಿಟ್ಟಿರುವ ಪೊಲೀಸ್ ಇಲಾಖೆ, ಮಂಡ್ಯ ಜಿಲ್ಲೆ 610, ಉತ್ತರ ಕನ್ನಡ ಜಿಲ್ಲೆ 529, ಬೀದರ್ ಜಿಲ್ಲೆ 519, ಬೆಂಗಳೂರಿನಲ್ಲಿ 17 ಮಂದಿಯನ್ನ ರೌಡಿಪಟ್ಟಿಯಿಂದ ಕೈಬಿಡಲಾಗಿದೆ. ಇನ್ನು ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು ಮಂದಿಯನ್ನು ರೌಡಿಪಟ್ಟಿಯಿಂದ ಬಿಡಲಾಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?

ಮಂಗಳೂರು ನಗರ -781 ರೌಡಿಗಳ ಹೆಸರು ರೌಡಿ ಪಟ್ಟಿಯಿಂದ ಹಿಂಪಡೆಯಲಾಗಿದೆ.ಮಂಡ್ಯ – 610, ಉತ್ತರ ಕನ್ನಡ – 529, ಬೀದರ್​ – 519 , ಮೈಸೂರು – 350 , ಹಾಸನ – 350, ಚಿತ್ರದುರ್ಗ – 319, ಉಡುಪಿ – 292, ಹಾವೇರಿ – 266, ವಿಜಯಪುರ – 215, ಶಿವಮೊಗ್ಗ ಜಿಲ್ಲೆಯುಲ್ಲಿ 207 ಮಂದಿಯನ್ನು ರೌಡಿಶೀಟ್​ನಿಂದ ಮುಕ್ತಿಗೊಳಿಸಲಾಗಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ರೌಡಿಶೀಟರ್​ಗಳು ಆ್ಯಕ್ಟಿವ್ ಆಗಿದ್ದಾರೆ. ಸಮಾಜ ಸೇವಕ ಎಂದು ಮುಖ ಇಟ್ಟುಕೊಂಡು ಚುನಾವಣೆ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಕೆಲ ಕ್ಷೇತ್ರಗಳಲ್ಲಿ ವರ್ಕೌಟ್ ಶುರು ಮಾಡುತ್ತಿದ್ದಾರೆ. ಇನ್ನು ರೌಡಿ ಹಣೆಪಟ್ಟಿ ಇರುವುದರಿಂದ ಪಕ್ಷಗಳ ಬಿ ಫಾರಂ ಪಡೆದುಕೊಳ್ಳುವುದು ಕಷ್ಟ. ಹೀಗಾಗಿ ಕೆಲ ರೌಡಿಗಳು ರೌಡಿಶೀಟರ್ಸ್ ಗಳು ಲಾಬಿ ನಡೆಸಿ ರೌಡಿ ಪಟ್ಟಿಯಿಂದ ಮುಕ್ತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಾಮರಾಜಪೇಟೆಯಲ್ಲಿ ರೌಡಿ ಸೈಲೆಂಟ್ ಸುನೀಲ್​ ಓಣಿ ಓಣಿಗಳಲ್ಲಿ ಬ್ಯಾನರ್​ ಹಾಕಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಸದ್ದಿಲ್ಲದೇ ಕೆಲ ರೌಡಿಶೀಟರ್​ಗಳು ಅಖಾಡಕ್ಕಿಳಿಯಲು ಮುಂದಾಗಿದ್ದು, ಇದಕ್ಕೆ ರಾಜಕೀಯ ಪಕ್ಷಗಳು ಮಣೆ ಹಾಕುತ್ತಾವೆಯೇ ಎನ್ನುವುದನ್ನು ಕಾದುನೋಡಬೇಕಿದೆ.

Published On - 5:58 pm, Sat, 18 February 23

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!