AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಗೆ ಮಾತ್ರ ಒಳ್ಳೆಯದಾಗ್ಲಿ ಎಂದು ಕೇಳಿದ್ರೆ, ನಿಮ್ಮಪ್ಪನಾಣೆಗೂ ದೇವರು ಒಳ್ಳೆಯದು ಮಾಡಲ್ಲ ಎಂದ ಸಿದ್ದರಾಮಯ್ಯ

ಯಲಬುರ್ಗಾದಲ್ಲಿ ನಡೆದ ಕುರುಬ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸ್ವಾರ್ಥಕ್ಕಾಗಿ ದೇವರ ಪೂಜೆ ಮಾಡಿದ್ರೆ ದೇವರು ಒಲಿಯಲ್ಲ. ದೇವರ ಬಳಿ ನನಗೆ ಒಳ್ಳೆಯದಾಗಲಿ ಎಂದು ಕೇಳಿದ್ರೆ, ದೇವರು ನಿಮ್ಮಪ್ಪನಾಣೆಗೂ ಒಳ್ಳೆಯದು ಮಾಡಲ್ಲ ಎಂದಿದ್ದಾರೆ.

ನಮಗೆ ಮಾತ್ರ ಒಳ್ಳೆಯದಾಗ್ಲಿ ಎಂದು ಕೇಳಿದ್ರೆ, ನಿಮ್ಮಪ್ಪನಾಣೆಗೂ ದೇವರು ಒಳ್ಳೆಯದು ಮಾಡಲ್ಲ ಎಂದ ಸಿದ್ದರಾಮಯ್ಯ
ಕೊಪ್ಪಳ ಕುರುಬ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Feb 18, 2023 | 7:25 PM

Share

ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಕುರುಬ ಸಮಾವೇಶದಲ್ಲಿ ‘ನನ್ನ ತಂದೆ-ತಾಯಿ ಕುರುಬರಾಗಿದ್ರು, ನಾನು ಕುರುಬನಾಗಿ ಹುಟ್ಟಿದ್ದೀನಿ. ಸ್ವಾರ್ಥಕ್ಕಾಗಿ ದೇವರ ಪೂಜೆ ಮಾಡಿದ್ರೆ ದೇವರು ಒಲಿಯಲ್ಲ. ದೇವರ ಬಳಿ ನನಗೆ ಒಳ್ಳೆಯದಾಗಲಿ ಎಂದು ಕೇಳಿದ್ರೆ, ದೇವರು ನಿಮ್ಮಪ್ಪನಾಣೆಗೂ ಒಳ್ಳೆಯದು ಮಾಡಲ್ಲ. ನಾವು ಸಮಾಜದಲ್ಲಿ ಬೇರೆಯವರಿಗೆ ಕೆಡಕನ್ನು ಬಯಸಬಾರದು, ಒಳ್ಳೆಯದನ್ನೆ ಬಯಸಬೇಕು. ಇನ್ನೊಬ್ಬರನ್ನು ಮನುಷ್ಯರಾಗಿ ಕಂಡ್ರೆ ಅದೇ ದೇವ್ರು. ಅವನ್ಯಾರೋ ಟಿಪ್ಪು ರೀತಿ ನನ್ನನ್ನ ಮುಗಿಸಿ ಅಂತಾನೆ, ನಿಮಗೆ ಒಪ್ಪಿಗೆ ಇದ್ರೆ ನನಗೂ ಒಪ್ಪಿಗೆನಪ್ಪಾ ಎಂದು ಜನರ ಬಳಿ ಕೇಳಿದ ಸಿದ್ದರಾಮಯ್ಯ, ಕಾನೂನು ಪಾಲನೆ ಮಾಡಬೇಕಾದ ಸಚಿವರೆ ಹೀಗೆ ಹೇಳ್ತಾರೆ. ಇದು ಸಂಸ್ಕೃತಿ ಏನ್ರೀ‌ ಎಂದು ಸಚಿವ ಡಾ.ಅಶ್ವತ್ಥ್​ ನಾರಾಯಣ್ ವಿರುದ್ಧ ಸಿದ್ದರಾಮಯ್ಯ ಮತ್ತೆ ಕಿಡಿಕಾರಿದ್ದಾರೆ.

ರಾಯಣ್ಣನ ಸಾಹಸಮಯ ಇತಿಹಾಸವನ್ನು ಸ್ಮರಿಸಿದ ಸಿದ್ದರಾಮಯ್ಯ

ಎಲ್ಲಾ ಕಾಲದಲ್ಲೂ ಕುತಂತ್ರಿಗಳು ಇದ್ದಾರೆ ಎಂದ ಸಿದ್ದರಾಮಯ್ಯ. ಮೋಸ ಮಾಡಿ ಸಂಗೊಳ್ಳಿ ರಾಯಣ್ಣನನ್ನು ಹಿಡಿದುಕೊಟ್ಟರು, ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಸಂಗೊಳ್ಳಿ ಗ್ರಾಮ ಅಭಿವೃದ್ಧಿ ಹಾಗೂ ರಾಕ್ ಗಾರ್ಡನ್ ನಿರ್ಮಾಣ, 282 ಕೋಟಿ ಹಣ ಕೊಟ್ಟು ಸೈನಿಕ ಶಾಲೆ ಪ್ರಾರಂಭ ಮಾಡಿದ್ದೇವೆ. ರಾಯಣ್ಣ ಯುವಕರಿಗೆಲ್ಲ ಸ್ಪೂರ್ತಿಯಾಗಲಿ ಎಂದು ಇದನ್ನ ಮಾಡಲಾಗಿದೆ. ನಾನು ಯಾವಾಗಲೂ ಸತ್ಯವನ್ನೇ ಹೇಳ್ತೀನಿ ಎಂದಿದ್ದಾರೆ.

ದೇವನೊಬ್ಬ ನಾಮ ಹಲವು, ಎಲ್ಲ ದೇವರು ಒಂದೇ ಎಂದ ಸಿದ್ದರಾಮಯ್ಯ

ಸತ್ಯವೇ ದೇವರು, ಸತ್ಯ ಹೇಳೊದನ್ನ ಅಳವಡಿಸಿಕೊಂಡ್ರೆ ಅದೆ ದೇವರು, ಆಚಾರವೇ ಸ್ವರ್ಗ ಅನಾಚಾರವೇ ನರಕ ಅಂತ ಬಸವಾದಿ ಶರಣರು ಹೇಳಿದ್ದಾರೆ. ಇದೆಲ್ಲವನ್ನ ಅರ್ಥ ಮಾಡ್ಕೊಂಡ್ರೆ ನಾವು ಒಂದೆ ತಾಯಿಯ ಮಕ್ಕಳು ಇದ್ದಂತೆ. ಸರ್ಕಾರ ರಾಜ್ಯದ ಜನರ ಅಭಿವೃದ್ಧಿಗೆ ಇರತ್ತೆ, ಇದನ್ನ ಪ್ರತಿಯೊಬ್ಬರು ಅರ್ಥ ಮಾಡ್ಕೊಳ್ಳಬೇಕಾಗತ್ತೆ. ಸಮಾಜಕ್ಕೆ ಯಾರು ಒಳ್ಳೆಯದನ್ನ ಮಾಡ್ತಾರೆ ಅವರ ಜೊತೆ ಇರಿ, ಕೆಟ್ಟದ್ದನ್ನ ಮಾಡೋರ ಜೊತೆ ಇರಬೇಡಿ, ನಾನು ಸಮಾಜಕ್ಕೆ ಒಳ್ಳೆಯದ ಮಾಡಿದ್ರೆ ನನ್ನ ಜೊತೆ ಇರಿ, ನಾನು ಕೆಟ್ಟದನ್ನ ಮಾಡಿದ್ರೆ ಇರಬೇಡಿ ಎಂದು ಹೇಳಿದರು.

ಇದನ್ನೂ ಓದಿ: ಕೊಪ್ಪಳ: ಕುರುಬರ ಸಮಾವೇಶದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದಿದ್ದಕ್ಕೆ ಕೆಲವರಿಂದ ವಿರೋಧ, ಗೆಟ್ ಔಟ್ ಎಂದ ಭೈರತಿ

ರಾಜಕಾರಣಿಗಳು ನಮ್ಮ ಮದ್ಯ ಒಡಕು ತಂದಿಡ್ತಾರೆ. ಮನುಷ್ಯ ಮನುಷ್ಯನನ್ನ ದ್ವೇಷ ಮಾಡೋರು ರಾಕ್ಷಸರು‌, ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು, ಅದರ ಜೊತೆ ನಾಡು ನುಡಿ ನೆಲ ಜಲವನ್ನ ಪ್ರೀತಿ ಮಾಡಬೇಕು. ಕಿತ್ತೂರು ಚನ್ನಮ್ಮ ಜಯಂತಿ ಮಾಡಿದ್ದು ನಾವು, ಕೆಂಪೆಗೌಡ ಜಯಂತಿ ಮಾಡಿದ್ದು ಸಿದ್ದರಾಮಯ್ಯ, ದೇವೆಗೌಡ, ಕುಮಾರಸ್ವಾಮಿ, ಕೆಂಗಲ್ ಹನಮಂತಯ್ಯ ಅಲ್ಲ, ಚನ್ನಮ್ಮ ಜಯಂತಿ ಮಾಡಿದ್ದು ಬೊಮ್ಮಾಯಿ ಅಲ್ಲ, ನಿಜಲಿಂಗಪ್ಪ ಅಲ್ಲ, ಸಿದ್ದರಾಮಯ್ಯ ಮಾಡಿದ್ದು . ಸತ್ಯ ಹೇಳಿದ್ದರೆ ಯಾಕೆ ಕೋಪ ಮಾಡ್ಕೋತಿರಾ, ನಾನು ಯಾವಾಗ್ಲೂ ಸತ್ಯವನ್ನ ಹೇಳ್ತಿನಿ. ನಾನು 7 kg ಉಚಿತ ಅಕ್ಕಿ ಕೊಟ್ಟಿದ್ದೆ, ಜಾತಿ ಮೇಲೆ ಕೊಟ್ಟಿದ್ನಾ. ಈಗ್ಯಾಕೆ 5 ಕೆ.ಜಿ ಮಾಡಿದ್ದೀರಾ ಎಂದು ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 pm, Sat, 18 February 23