AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಪ್ರಶಾಂತ ದೇವರು ಲಿಂಗಾಯತರಲ್ಲ: ಭುಗಿಲೆದ್ದ ಗರಗ ಮಡಿವಾಳೇಶ್ವರ ಕಲ್ಮಠ ಉತ್ತರಾಧಿಕಾರ ವಿವಾದ

ಗರಗದ ಶ್ರೀ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಮಹಾಸ್ವಾಮೀಜಿಯವರು ಇದೇ ತಿಂಗಳ ಫೆ.12 ರಂದು ನಿಧನರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮಠದ ಉತ್ತರಾಧಿಕಾರಿ ನೇಮಕ ವಿಚಾರ ಮುನ್ನೆಲೆಗೆ ಬಂದಿದೆ.

ಧಾರವಾಡ: ಪ್ರಶಾಂತ ದೇವರು  ಲಿಂಗಾಯತರಲ್ಲ:  ಭುಗಿಲೆದ್ದ ಗರಗ ಮಡಿವಾಳೇಶ್ವರ ಕಲ್ಮಠ ಉತ್ತರಾಧಿಕಾರ ವಿವಾದ
ಪ್ರಶಾಂತ ದೇವರು ಲಿಂಗಾಯತರಲ್ಲ: ಭುಗಿಲೆದ್ದ ಗರಗ ಮಡಿವಾಳೇಶ್ವರ ಕಲ್ಮಠ ಉತ್ತರಾಧಿಕಾರ ವಿವಾದ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 18, 2023 | 5:15 PM

Share

ಧಾರವಾಡ: ಗರಗದ ಶ್ರೀ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಮಹಾಸ್ವಾಮೀಜಿಯವರು ಇದೇ ತಿಂಗಳ ಫೆ.12 ರಂದು ನಿಧನರಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮಠದ ಉತ್ತರಾಧಿಕಾರಿ ನೇಮಕ ವಿಚಾರ ಮುನ್ನೆಲೆಗೆ ಬಂದಿದೆ. ಈಗಾಗಲೇ ಪ್ರಶಾಂತ ದೇವರು ನಾನೇ ಉತ್ತರಾಧಿಕಾರಿಯಾಗಿ ಎಂದು ಹೇಳಿಕೊಂಡಿದ್ದಾರೆ. ಇದೀಗ ಪ್ರಶಾಂತ ದೇವರ ನೇಮಕಕ್ಕೆ ಕೆಲ ಲಿಂಗಾಯತ ಮಠಾಧೀಶರು, ಲಿಂಗಾಯತ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಉತ್ತರಾಧಿಕಾರಿಯಾಗಿ ನೇಮಕವಾದ ಪ್ರಶಾಂತ ದೇವರು ಲಿಂಗಾಯತರಲ್ಲ, ಬೇರೆ ಸಮುದಾಯಕ್ಕೆ ಸೇರಿದವರು. ಲಿಂಗಾಯತರು ಮಾತ್ರ ಉತ್ತರಾಧಿಕಾರಿ ಆಗಬೇಕೆಂದು ಲಿಂಗಾಯತ ಸ್ವಾಮಿಗಳ ಪರ ಬೆಂಡವಾಡ ವಿರಕ್ತಮಠದ ಶ್ರೀ ಗುರುಸಿದ್ದ ಸ್ವಾಮೀಜಿಯವರು ಧಾರವಾಡದಲ್ಲಿ ಆಗ್ರಹಿಸಿದ್ದಾರೆ.

ನಾನೇ ಉತ್ತರಾಧಿಕಾರಿ ಎಂದು ಹೇಳಿಕೊಂಡ ಪ್ರಭು ರಾಜೇಂದ್ರ ದೇವರು

ಬೆಳಗಾವಿ ಜಿಲ್ಲೆಯ ಹೋಳಿ ಹೊಸೂರು ಗ್ರಾಮದ ಪ್ರಭು ರಾಜೇಂದ್ರ ದೇವರು ಲಿಂಗೈಕ್ಯ ಚನ್ನಬಸವ ದೇವರೇ ನನ್ನನ್ನು ಕರೆದುಕೊಂಡು ಬಂದಿದ್ದರು. ನನ್ನನ್ನೇ ಉತ್ತರಾಧಿಕಾರಿ ಮಾಡುವುದಾಗಿ ಹೇಳಿದ್ದರು. ನನ್ನ ಹೆಸರನ್ನು ಸ್ವಾಮೀಜಿಯೇ ಬದಲಿಸಿದ್ದರು. ನನಗೆ ಹೋಳಿ ಹೊಸೂರು ಶಾಖಾ ಮಠಕ್ಕೆ ಕಳಿಸಿದ್ದರು. ಅದನ್ನು ದಾಖಲು ಮಾಡಿದ್ದರಾ ಅನ್ನೋದು ಗೊತ್ತಿಲ್ಲ. ಈಗ ಬೇರೆಯವರಿಗೆ ಪಟ್ಟ ಕಟ್ಟುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಧಾರವಾಡದಲ್ಲಿ ಪ್ರಭುರಾಜೇಂದ್ರ ದೇವರು ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ