Pralhad Joshi: ಹೆಚ್.ಡಿ. ಕುಮಾರಸ್ವಾಮಿಯದ್ದು ಬಾಲಿಶ ಹೇಳಿಕೆ ಎಂದ ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿಯನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಬಾಲಿಶ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ: ಪ್ರಲ್ಹಾದ್ ಜೋಶಿಯನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ (HD Kumaraswamy) ಬಾಲಿಶ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಹೇಳಿದ್ದಾರೆ. ಶತಮಾನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಂತಹ ನಾಯಕರು ಸಿಗುತ್ತಾರೆ. ಅವರ ಕೈಕೆಳಗೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಜಿಮಖಾನಾ ಮೈದಾನದಲ್ಲಿ ನಿರ್ಮಿಸಲಾಗಿರುವ ಕೇದಾರನಾಥ ಮಾದರಿಯ ಶಿವಲಿಂಗ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಿವರಾತ್ರಿ ಹಬ್ಬದ ಶುಭಾಶಯ ತಿಳಿಸಿದರು. ಬಳಿಕ ಪ್ರಧಾನಿ ಮೋದಿ ಕೈಕೆಳಗೆ ಕೆಲಸ ಮಾಡೋದು ನನ್ನ ಸೌಭಾಗ್ಯ. ಶತಮಾನಕ್ಕೊಮ್ಮೆ ಮೋದಿ ಅಂತ ನಾಯಕರು ಸಿಗ್ತಾರೆ. ಅವರ ಕೈ ಕೆಳಗೆ ಕೆಲಸ ಮಾಡೋದು ನನ್ನ ಸೌಭಾಗ್ಯ. ಜಗತ್ತು ಮೋದಿ ಸ್ವೀಕಾರ ಮಾಡಿದೆ, ಅವರ ಕೈ ಕೆಳಗೆ ಕೆಲಸ ಮಾಡೋದು ನನ್ನ ಸೌಭಾಗ್ಯ.ಇಂತಹ ಬಾಲಿಶ, ಅಪ್ರಬುದ್ಧ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಶಾಸಕ ಎಸ್ ಆರ್ ಶ್ರೀನಿವಾಸ್ ಸಂಬಂಧಿಯಿಂದ ಕುಕ್ಕರ್ ಗಿಫ್ಟ್: ಮತದಾರ ಘೆರಾವ್
ಕಿವಿಯಲ್ಲಿ ಹೂವು ಇಟ್ಟುಕೊಂಡು ಕಾಂಗ್ರೆಸ್ಸಿಗರು ಲೇವಡಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಡವರ ಸ್ನೇಹಿ, ರೈತ ಸ್ನೇಹಿ ಬಜೆಟ್ ಮಂಡಿಸಿದ್ದಾರೆ. ಚುನಾವಣೆ ವೇಳೆ ಕಾಲೆಳೆಯೋದು ಹಕ್ಕು ಎಂದು ಭಾವಿಸುತ್ತಾರೆ. ಆದರೆ ದೌರ್ಭಾಗ್ಯದಿಂದ ವೈಯಕ್ತಿಕ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ಮೇಲೆ ಜನ ಹೂವು ಇಟ್ಟಿದ್ದಾರೆ. ಜನ ಹೂವು ಇಟ್ಟಿದ್ದು ನೋಡಿದರೆ ಕಾಂಗ್ರೆಸ್ ಎದ್ದು ಬರಲು ಆಗಲ್ಲ. ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾವೇ ಅಂತ ಜನರ ಮೇಲೆ ಹೂ ಇಟ್ಟಿದ್ದರು. ಈಗ ಕಾಂಗ್ರೆಸ್ನವರೇ ಹೂವು ಇಟ್ಟುಕೊಂಡಿರುವುದು ಸಂತೋಷ ಎಂದು ಹೇಳಿದರು.
ಜೋಶಿ ಕಚೇರಿಯಲ್ಲಿ ಬ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿದ ಅವರು ನಾನು ಈ ಬಗ್ಗೆ ಈಗಲೇ ಸ್ಪಷ್ಟಪಡಿಸಿದ್ದೇನೆ. ನಾನು ಈ ಕುರಿತು ಲೀಗಲ್ ನೋಟಿಸ್ ಕೊಡುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Sat, 18 February 23