Kannada News Photo gallery Dharwad Worms found in school meal they are pieces of alasande grain says Officials at Dharwad news in Kannada
ಧಾರವಾಡ: ತಟ್ಟೆಯಲ್ಲಿ ಹುಳಗಳನ್ನು ನೋಡಿ ಊಟ ಬಿಟ್ಟ ಶಾಲಾ ಮಕ್ಕಳು, ಅಲಸಂದೆ ಕಾಳಿನ ಸ್ಪಷ್ಟನೆ ನೀಡಿದ ಅಧಿಕಾರಿಗಳು
ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಅಕ್ಷರ ದಾಸೋಹದ ಊಟದಲ್ಲಿ ಹುಳಗಳು ಪತ್ತೆಯಾಗುತ್ತಿರುವ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವೊಂದು ಶಾಲೆಯಗಳ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಇದೀಗ ನವಲಗುಂದ ತಾಲೂಕಿನ ಶಾಲೆಗಳಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡ: ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಅಕ್ಷರ ದಾಸೋಹದ ಊಟದಲ್ಲಿ ಹುಳಗಳು ಪತ್ತೆಯಾಗುತ್ತಿರುವ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಕೆಲವೊಂದು ಶಾಲೆಯಗಳ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ಇದೀಗ ನವಲಗುಂದ ತಾಲೂಕಿನ ಶಾಲೆಗಳಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
1 / 5
ನವಲಗುಂದ ತಾಲೂಕಿನ ಬೆಳವಟಗಿ, ಕಡದಳ್ಳಿ, ಗುಡಿಸಾಗರ, ನಾಗನೂರ ಮಾರ್ಗದ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟದಲ್ಲಿ ಹುಳಗಳು ಪತ್ತೆಯಾಗಿವೆ. ತಮ್ಮ ತಟ್ಟೆಯಲ್ಲಿ ಹುಳನ್ನು ನೋಡಿದ ವಿದ್ಯಾರ್ಥಿಗಳು ಊಟ ಮಾಡದೆ ಹಾಗೇ ಬಿಟ್ಟಿದ್ದಾರೆ.
2 / 5
ಈ ಶಾಲೆಗಳಿಗೆ ಎನ್ಜಿಒದಿಂದ ನಿತ್ಯ ಊಟ ಬರುತ್ತದೆ ಎಂದು ಜನರು ಆರೋಪಿಸುತ್ತಿದ್ದಾರೆ. ಹುಳ ಪತ್ತೆಯಾದ ಊಟ ಶಾಲೆಗಳಲ್ಲಿ ಹಾಗೇ ಉಳಿದಿದೆ.
3 / 5
ಇನ್ನು ಊಟದಲ್ಲಿ ಹುಳಗಳು ಪತ್ತೆಯಾದ ಬಗ್ಗೆ ಸ್ಪಷ್ಟನೆ ನೀಡಿದ ಎನ್ಜಿಓ ಹಾಗೂ ಅಧಿಕಾರಿಗಳು, ಅಲಸಂದೆ ಬೀಜದ ಮೊಳಕೆ ಮುರಿದು ಹುಳದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
4 / 5
ಅಧಿಕಾರಿಗಳು ಅಲಸಂದೆ ಮೊಳಕೆ ತುಂಡುಗಳು ಅಂತ ಹೇಳಿ ಆತ ಎಡವಟ್ಟಿನಿಂದ ತಪ್ಪಿಸಿಕೊಳ್ಳಲು ಸ್ಪಷ್ಟನೆ ನೀಡಿದ್ದಾರೆ. ಆದರೆ ಇದನ್ನು ಗ್ರಾಮಸ್ಥರು ನಂಬಬೇಕೇ? ಹುಳಗಳನ್ನು ಅಲಸಂಡೆ ಎಂದ ಅಧಿಕಾರಿಗಳ ಮಾತನ್ನು ಗ್ರಾಮಸ್ಥರು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಊಟವನ್ನು ಮರಳಿ ಕಳಿಸಿದ್ದಾರೆ.