ಉತ್ತರ ಕೊರಿಯಾದಲ್ಲಿ ಕೋವಿಡ್ ಉಲ್ಬಣವಾಗಿದ್ದಾಗ ತೀವ್ರ ಅಸ್ವಸ್ಥರಾಗಿದ್ದರು ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ ನಾಯಕ ಜ್ವರದಿಂದ ಬಳಲುತ್ತಿದ್ದರು ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೂ ಜನರ ಮೇಲಿನ ಕಾಳಜಿಯಿಂದಾಗಿ ಕಿಮ್ ಒಂದು ಕ್ಷಣವೂ ಮಲಗಲು ಸಾಧ್ಯವಾಗಲಿಲ್ಲ ಎಂದು ಕಿಮ್ ಯೋ ಜಾಂಗ್ ಭಾಷಣದಲ್ಲಿ..

ಉತ್ತರ ಕೊರಿಯಾದಲ್ಲಿ ಕೋವಿಡ್ ಉಲ್ಬಣವಾಗಿದ್ದಾಗ ತೀವ್ರ ಅಸ್ವಸ್ಥರಾಗಿದ್ದರು ಕಿಮ್ ಜಾಂಗ್ ಉನ್
ಕಿಮ್ ಜಾಂಗ್ ಉನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 11, 2022 | 12:57 PM

ಸಿಯೋಲ್: ಇತ್ತೀಚಿಗೆ ಕೊವಿಡ್ (Covid 19) ಉಲ್ಬಣಗೊಂಡಾಗ ಉತ್ತರ ಕೊರಿಯಾದ (North Korea)ನಾಯಕ ಕಿಮ್ ಜಾಂಗ್ ಉನ್ (Kim Jong Un) ಅವರಿಗೆ ತೀವ್ರ ಜ್ವರ ಇತ್ತು ಎಂದು ಅವರ ಪ್ರಭಾವಿ ಸಹೋದರಿ ಬಹಿರಂಗಪಡಿಸಿದ್ದಾರೆ. ಪ್ರಚಾರ ಕರಪತ್ರಗಳನ್ನು ಗಡಿ ದಾಟಲು ಅವಕಾಶ ನೀಡಿದರೆ ದಕ್ಷಿಣ ಕೊರಿಯಾದ ನಾಯಕರನ್ನು “ನಿರ್ಮೂಲನೆ” ಮಾಡುವುದಾಗಿ ಈಕೆ ಪ್ರತಿಜ್ಞೆ ಮಾಡಿದ್ದಾರೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಕೊವಿಡ್ ಏರಿಕೆ ಉಂಟಾಗಿದ್ದಕ್ಕೆ ಕರಪತ್ರಗಳೇ ಕಾರಣ ಎಂಬ ಸಂಶಯಾಸ್ಪದ ಹೇಳಿಕೆಗಳನ್ನು ಪುನರಾವರ್ತಿಸಿದ ಕಿಮ್ ಯೋ ಜಾಂಗ್, ದಕ್ಷಿಣ ಕೊರಿಯಾದ ಬೊಂಬೆಗಳು ಬಲೂನ್‌ಗಳ ಮೂಲಕ ಸಾಗಿಸುವ ಕರಪತ್ರಗಳಲ್ಲಿ ಗಡಿಯುದ್ದಕ್ಕೂ ಕೊಳಕು ವಸ್ತುಗಳನ್ನು ಸಾಗಿಸಿವೆ ಎಂದು ದೂಷಿಸಿರುವುದಾಗಿ ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (KCNA) ಗುರುವಾರ ವರದಿ ಮಾಡಿದೆ. ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಈ ಈ ರೀತಿ ಬಹಿರಂಗ ಪಡಿಸಿರುವುದು ಇದೇ ಮೊದಲು. ಜನರು ಎದುರಿಸುತ್ತಿರುವ ಅದೇ ಸಮಸ್ಯೆಗಳನ್ನು ಅವರೂ ಎದುರಿಸಿದ್ದಾರೆ ಎಂದು ತೋರಿಸುವುದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದು ಸಾಮಾನ್ಯವಾಗಿ ಇದನ್ನು ರಾಜಕೀಯ ಉದ್ದೇಶಗಳಿಗಾಗಿ ಮಾಡಲಾಗುತ್ತದೆ.

ಉತ್ತರ ಕೊರಿಯಾದ ನಾಯಕ ಜ್ವರದಿಂದ ಬಳಲುತ್ತಿದ್ದರು ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೂ ಜನರ ಮೇಲಿನ ಕಾಳಜಿಯಿಂದಾಗಿ ಕಿಮ್ ಒಂದು ಕ್ಷಣವೂ ಮಲಗಲು ಸಾಧ್ಯವಾಗಲಿಲ್ಲ ಎಂದು ಕಿಮ್ ಯೋ ಜಾಂಗ್ ಭಾಷಣದಲ್ಲಿ ಹೇಳಿರುವುದಾಗಿ ಕೆಸಿಎನ್ಎ ವರದಿ ಮಾಡಿದೆ.ಅಂದಹಾಗೆ ಯಾವ ದಿನ ಅವರು ಅನಾರೋಗ್ಯಕ್ಕೆ ಒಳಗಾದರು ಎಂಬುದನ್ನು ಆಕೆ ವಿವರಿಸಿಲ್ಲ.

ಅಧಿಕ ತೂಕ ಮತ್ತು ಧೂಮಪಾನಿ ಆಗಿರುವ ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಬಗ್ಗೆ ವರ್ಷಗಳಿಂದ ಊಹಾಪೋಹಗಳು ಕೇಳಿ ಬರುತ್ತಲೇ ಇರುತ್ತವೆ. ಪ್ಯೊಂಗ್ಯಾಂಗ್‌ನಲ್ಲಿನ ನಿರಂಕುಶಾಧಿಕಾರ ಮತ್ತು ರಹಸ್ಯ ಆಡಳಿತದ ಒಳನೋಟಗಳಿಗಾಗಿ ಅವರ ಸಾರ್ವಜನಿಕ ಪ್ರದರ್ಶನಗಳನ್ನು ನಿಕಟವಾಗಿ ಟ್ರ್ಯಾಕ್ ಮಾಡಲಾಗುತ್ತದೆ.

ಉತ್ತರ ಕೊರಿಯಾದಲ್ಲಿ ಲಕ್ಷಾಂತರ ಜ್ವರ ಪ್ರಕರಣಗಳಿದ್ದರೂ ಅದನ್ನು ಕೋವಿಡ್ ಎಂದು ಕರೆಯಲಿಲ್ಲ. ಬಹುಶಃ ಈ ದೇಶದಲ್ಲಿ ಕೊರೊನಾವೈರಸ್​​ನಿಂದ ಪ್ರಕರಣಗಳು ಉಂಟಾಗಿವೆ ಎಂದು ಖಚಿತಪಡಿಸಲು ಸಾಕಷ್ಟು ಪರೀಕ್ಷಾ ಕಿಟ್‌ಗಳನ್ನು ಹೊಂದಿಲ್ಲದಿರಬಹುದು. ಇದು ವಿಶ್ವ ಆರೋಗ್ಯ ಸಂಸ್ಥೆಯಿಂದ ಬೆಂಬಲಿತವಾದ ಕೋವಾಕ್ಸ್‌ನ ನಿಯಮಗಳನ್ನು ಅನುಸರಿಸಲು ಇಷ್ಟವಿಲ್ಲದ ಕಾರಣ ಯೋಜಿತ ಲಸಿಕೆ ಸಾಗಣೆಗೆ ತಡೆಯೊಡ್ಡಿದ್ದು, ಹೊರ ರಾಷ್ಟ್ರಗಳಿಂದ ಲಸಿಕೆ ಪಡೆಯುವುದನ್ನು ನಿರಾಕರಿಸಿದೆ.

ಉತ್ತರ ಕೊರಿಯಾದ ಒತ್ತಡದ ಪ್ರಚಾರದ ಮುಖವಾಗಿರುವ ಕಿಮ್ ಯೋ ಜಾಂಗ್ ಅವರ ಹೇಳಿಕೆಗಳು, ವಾಷಿಂಗ್ಟನ್ ಮತ್ತು ಸಿಯೋಲ್ ವಿರುದ್ಧ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಸರ್ಕಾರದ ವಿರುದ್ಧ ಮೊದಲ ಬೆದರಿಕೆಯನ್ನು ಒಳಗೊಂಡಿತ್ತು.

ನಮ್ಮ ಗಣರಾಜ್ಯಕ್ಕೆ ವೈರಸ್ ಅನ್ನು ಪರಿಚಯಿಸುವಂತಹ ಅಪಾಯಕಾರಿ ಕೆಲಸವನ್ನು ಶತ್ರುಗಳು ಮುಂದುವರಿಸಿದರೆ, ನಾವು ವೈರಸ್ ಅನ್ನು ನಿರ್ಮೂಲನೆ ಮಾಡುವ ಮೂಲಕ ಪ್ರತಿಕ್ರಿಯಿಸುತ್ತೇವೆ. ಅದರ ಜತೆಗೆ ಆದರೆ ದಕ್ಷಿಣ ಕೊರಿಯಾದ ಅಧಿಕಾರಿಗಳನ್ನು ಸಹ ನಿರ್ಮೂಲನೆ ಮಾಡುತ್ತೇವೆ ಎಂದು ಜಾಂಗ್ ಎಚ್ಚರಿಕೆ ನೀಡಿದ್ದಾರೆ. ಸಿಯೋಲ್ ವಿರುದ್ಧ ಉತ್ತರ ಕೊರಿಯಾದ ಹೆಚ್ಚುತ್ತಿರುವ ವಾಗ್ದಾಳಿಗಳು ಇತ್ತೀಚಿನ ತಿಂಗಳುಗಳಲ್ಲಿ ನಿಧಾನಗೊಂಡ ಮಿಲಿಟರಿ ಪ್ರಚೋದನೆಗಳ ಪುನರಾರಂಭಕ್ಕೆ ವೇದಿಕೆಯಾಗಬಲ್ಲದು. ಉತ್ತರ ಕೊರಿಯಾ 2017 ರಿಂದ ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಲು ಸಿದ್ಧವಾಗಿದೆ ಎಂದು ಜಪಾನ್, ದಕ್ಷಿಣ ಕೊರಿಯಾ ಮತ್ತು ಯುಎಸ್ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Thu, 11 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್