Nuclear Disaster Fear: ಉಕ್ರೇನ್​ ಅಣು ಸ್ಥಾವರದ ಮೇಲೆ ರಾಕೆಟ್ ದಾಳಿ; ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ, ವಿಕಿರಣ ಸೋರಿಕೆ ಭೀತಿಯಲ್ಲಿ ಜಗತ್ತು

Zaporizhzhia: ಯೂರೋಪ್​ನ ಅತಿದೊಡ್ಡ ಅಣುಸ್ಥಾವರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ ಅಣುವಿಕರಣ ಸೋರಿಕೆಯ ಭೀತಿ ಎದುರಾಗಿದೆ.

Nuclear Disaster Fear: ಉಕ್ರೇನ್​ ಅಣು ಸ್ಥಾವರದ ಮೇಲೆ ರಾಕೆಟ್ ದಾಳಿ; ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ, ವಿಕಿರಣ ಸೋರಿಕೆ ಭೀತಿಯಲ್ಲಿ ಜಗತ್ತು
ಉಕ್ರೇನ್​ನ ಝಪೊರಿಖ್​​ಝಿಯಾ ಅಣು ಸ್ಥಾವರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 12, 2022 | 8:47 AM

ನ್ಯೂಯಾರ್ಕ್: ರಷ್ಯಾ ವಶದಲ್ಲಿರುವ ಉಕ್ರೇನ್​ನ (Russia Ukraine Crisis) ಝಪೊರಿಖ್​​ಝಿಯಾ (Zaporizhzhia) ಅಣು ಸ್ಥಾವರದ (Nuclear Reactor) ಮೇಲೆ ರಾಕೆಟ್ ದಾಳಿ ನಡೆದಿದೆ. ಯೂರೋಪ್​ನ ಅತಿದೊಡ್ಡ ಅಣುಸ್ಥಾವರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ ಅಣುವಿಕರಣ (Nuclear Radiation) ಸೋರಿಕೆಯ ಭೀತಿ ಎದುರಾಗಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯು (United Nations Security Council – UNSC) ತುರ್ತು ಸಭೆ ಕರೆದು, ಉಕ್ರೇನ್ ಮತ್ತು ರಷ್ಯಾ ತಕ್ಷಣ ಇಲ್ಲಿ ಮಿಲಿಟರಿ ಕಾರ್ಯಾಚಚರಣೆ ನಿಲ್ಲಿಸಬೇಕು ಎಂದು ತಾಕೀತು ಮಾಡಿತು. ವಿಶ್ವ ಸಮುದಾಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ವಿಕಿರಣ ದುರಂತಕ್ಕೆ ಜಗತ್ತು ಸಾಕ್ಷಿಯಾಗಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಅಣುಸ್ಥಾವರದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಉಕ್ರೇನ್ ಮತ್ತು ರಷ್ಯಾ ದೇಶಗಳು ಪರಸ್ಪರರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.

‘ಗಂಭೀರ ದುರಂತವೊಂದು ನಮಗೆ ಎದುರಾಗುವಂಥ ಸನ್ನಿವೇಶ ಇದು’ ಎಂದು ವಿಶ್ವ ಅಣುಶಕ್ತಿ ಸಂಸ್ಥೆಯ (International Atomic Energy Agency – IAEA) ಮುಖ್ಯಸ್ಥರಾದ ರಫೇಲ್ ಗ್ರೊಸಿ ಭದ್ರತಾ ಮಂಡಳಿಯನ್ನು ಎಚ್ಚರಿಸಿದರು. ವಿಶ್ವ ಅಣುಶಕ್ತಿ ಸಂಸ್ಥೆಗೆ ತುರ್ತಾಗಿ ಝಪೊರಿಖ್​​ಝಿಯಾ ಅಣುಸ್ಥಾವರ ಭೇಟಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಅಣುಸ್ಥಾವರದ ಮೇಲಿನ ದಾಳಿ ಕುರಿತು ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ, ರಷ್ಯಾ ಪಡೆಗಳು ಇಡೀ ಜಗತ್ತಿಗೆ ’ಅಣುವಿಕಿರಣದ ಬೆದರಿಕೆ’ (Nuclear Blackmail) ಹಾಕಿವೆ. ಝಪೊರಿಖ್​​ಝಿಯಾ ಆಕ್ರಮಿಸಿಕೊಂಡಿರುವವರನ್ನು ಹೊರದಬ್ಬಲು ವಿಶ್ವ ಸಮುದಾಯವು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ಕರೆ ನೀಡಿದ್ದಾರೆ. ‘ಉಕ್ರೇನ್​ನಿಂದ ರಷ್ಯನ್ನರು ಸಂಪೂರ್ಣವಾಗಿ ಹಿಂದೆ ಸರಿಯುವುದು ಮಾತ್ರವೇ ಯೂರೋಪ್​ಗೆ ಅಣುವಿಕಿರಣ ದುರಂತದಿಂದ ರಕ್ಷಣೆ ನೀಡುವ ಖಾತ್ರಿ ಸಿಗಲು ಸಾಧ್ಯ’ ಎಂದು ಝೆಲೆನ್​ಸ್ಕಿ ವಿಡಿಯೊ ಸಂದೇಶದಲ್ಲಿ ತಿಳಿಸಿದರು.

ಝಪೊರಿಖ್​​ಝಿಯಾ ಅಣುಸ್ಥಾವರದ ಮೇಲಿನ ದಾಳಿಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಉಕ್ರೇನ್​ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿವೆ. ಕಳೆದ ಐದು ತಿಂಗಳಿನಿಂದ ನಡೆಯುತ್ತಿರುವ ಉಕ್ರೇನ್ ಸಂಘರ್ಷದಲ್ಲಿ ಇದು ಅತ್ಯಂತ ಅಪಾಯಕಾರಿ ಸನ್ನಿವೇಶ ಎಂದು ವಿಶ್ಲೇಷಿಸಲಾಗಿದೆ. ಅಣುಸ್ಥಾವರದಲ್ಲಿ ರೇಡಿಯೊ ವಿಕಿರಣ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಪ್ರದೇಶದಲ್ಲಿ ಎರಡೂ ಪಡೆಗಳು ರಾಕೆಟ್ ದಾಳಿ ಮಾಡಿವೆ. ತುಸು ಹೆಚ್ಚುಕಡಿಮೆಯಾದರೂ ವಿಕಿರಣ ಸೋರಿಕೆಯಾಗಿ ಇಡೀ ಜಗತ್ತು ಅಪಾಯದಲ್ಲಿ ಸಿಲುಕಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಶೆಲ್ ದಾಳಿಯ ನಂತರ ಸ್ಥಾವರದ ಆರು ರಿಯಾಕ್ಟರ್​ಗಳಿಂದ ಅಧಿಕ ಪ್ರಮಾಣದ ಹೊಗೆ ಹೊರಬರುತ್ತಿದೆ. ವಿಕರಣಗಳನ್ನು ಅಳೆಯುವ ಹಲವು ಸೆನ್ಸಾರ್​ಗಳು ಹಾಳಾಗಿವೆ. ಉಕ್ರೇನ್​ ದಾಳಿಯೇ ಇದಕ್ಕೆ ಕಾರಣ ಎಂದು ರಷ್ಯಾ ಪರ ಗುರುತಿಸಿಕೊಂಡಿರುವ ಪ್ರಾದೇಶಿಕ ಆಡಳಿತ ಮಂಡಳಿಯ ಸದಸ್ಯ ವ್ಲಾದಿಮಿರ್ ರೊಗೊವ್ ಹೇಳಿದ್ದಾರೆ.

ಉಕ್ರೇನ್ ಸರ್ಕಾರದ ನಿರ್ವಹಣೆಯಲ್ಲಿದ್ದ ಈ ಅಣು ಸ್ಥಾವರವು ಪ್ರಸ್ತುತ ರಷ್ಯಾ ಪಡೆಗಳ ನಿಯಂತ್ರಣದಲ್ಲಿವೆ. ಇದೇ ಸ್ಥಾವರದಲ್ಲಿ ರಷ್ಯಾ ದೇಶವು ತನ್ನ ಪಡೆಗಳು ಮತ್ತು ಯುದ್ಧೋಪಕರಣಗಳನ್ನು ಇರಿಸಿದೆ ಎಂದು ಉಕ್ರೇನ್ ಆರೋಪ ಮಾಡಿದೆ.

Published On - 8:47 am, Fri, 12 August 22

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ