AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಸಿಕೋ ಅಧ್ಯಕ್ಷರು ವಿಶ್ವ ಕದನ ವಿರಾಮಕ್ಕೆ ಪ್ರಸ್ತಾಪಿಸಿದ ತ್ರಿಸದಸ್ಯ ಸಮಿತಿಯಲ್ಲಿ ಪ್ರಧಾನಿ ಮೋದಿ ಹೆಸರು

ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೂವರು ವ್ಯಕ್ತಿಗಳ ಸಮಿತಿಯನ್ನು ಪ್ರಸ್ತಾಪಿಸಲು ಅವರು ನಿರ್ಧರಿಸಿದ್ದಾರೆ

ಮೆಕ್ಸಿಕೋ ಅಧ್ಯಕ್ಷರು ವಿಶ್ವ ಕದನ ವಿರಾಮಕ್ಕೆ ಪ್ರಸ್ತಾಪಿಸಿದ ತ್ರಿಸದಸ್ಯ ಸಮಿತಿಯಲ್ಲಿ ಪ್ರಧಾನಿ ಮೋದಿ ಹೆಸರು
ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 10, 2022 | 8:10 PM

Share

ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಮಧ್ಯೆ, ವಿಶ್ವದಾದ್ಯಂತ ಯುದ್ಧಗಳಿಲ್ಲದೆ ಐದು ವರ್ಷಗಳ ಕದನ ವಿರಾಮವನ್ನು ಉತ್ತೇಜಿಸಲು ಆಯೋಗವನ್ನು ಸ್ಥಾಪಿಸಬೇಕು ಎಂದು ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (Andres Manuel Lopez Obrador) ವಿಶ್ವಸಂಸ್ಥೆಗೆ (UN) ಪ್ರಸ್ತಾವನೆಯನ್ನು ಸಲ್ಲಿಸಲು ಉದ್ದೇಶಿಸಿದ್ದಾರೆ. ನಾನು ಪ್ರಸ್ತಾವನೆಯನ್ನು ಲಿಖಿತ ರೂಪದಲ್ಲಿ ಮಾಡುತ್ತೇನೆ, ನಾನು ಅದನ್ನು ವಿಶ್ವಸಂಸ್ಥೆಯ ಮುಂದೆ ಮಂಡಿಸುತ್ತೇನೆ. ನಾನು ಅದನ್ನು ಹೇಳುತ್ತಲೇ ಇದ್ದೇನೆ ಮತ್ತು ಅದನ್ನು ಪ್ರಸಾರ ಮಾಡಲು ಮಾಧ್ಯಮಗಳು ನಮಗೆ ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರಿಗೆ ಅನುಕೂಲವಾಗದಿದ್ದಾಗ ಅವರು ಮಾತನಾಡುವುದಿಲ್ಲ ಎಂದು ಲೋಪೆಜ್ ಒಬ್ರಡಾರ್ ಹೇಳಿರುವುದಾಗಿ ಎಂಎಸ್ಎನ್ ಡಾಟ್ ಕಾಂ ಉಲ್ಲೇಖಿಸಿದೆ.  ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಮೂವರು ವ್ಯಕ್ತಿಗಳ ಸಮಿತಿಯನ್ನು ಪ್ರಸ್ತಾಪಿಸಲು ಅವರು ನಿರ್ಧರಿಸಿದ್ದಾರೆ ಎಂದು ಮೆಕ್ಸಿಕನ್ ಅಧ್ಯಕ್ಷರು ಹೇಳಿರುವುದಾಗಿ ವರದಿಯಲ್ಲಿದೆ.  ಒಬ್ರಡಾರ್ ಪ್ರಕಾರ, ಮೂವರೂ ಒಟ್ಟಾಗಿ ಸೇರುವುದು, ಪ್ರಪಂಚದಾದ್ಯಂತ ಯುದ್ಧವನ್ನು ಕೊನೆಗೊಳಿಸಲು ಯೋಜನೆಯನ್ನು ತ್ವರಿತವಾಗಿ ಸಲ್ಲಿಸುವುದು ಮತ್ತು ಕನಿಷ್ಠ ಐದು ವರ್ಷಗಳ ಕಾಲ ಕದನ ವಿರಾಮಕ್ಕಾಗಿ ತಿಳುವಳಿಕೆಗೆ ಬರುವುದು ಗುರಿಯಾಗಿದೆ. ಯುದ್ಧದಂತಹ ಪರಿಸ್ಥಿತಿಗಳನ್ನು ಕೊನೆಗೊಳಿಸಲು ಮತ್ತು ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡಲು ಯುಎಸ್, ಚೀನಾ ಮತ್ತು ರಷ್ಯಾದೇಶಗಳು ಪ್ರಯತ್ನಗಳನ್ನು ಮಾಡುವಂತೆ ಒಬ್ರಡಾರ್ ಒತ್ತಾಯಿಸಿದ್ದಾರೆ.

ದಾಖಲೆಯ ಹಣದುಬ್ಬರ ಮತ್ತು ಪೂರೈಕೆ ಸರಪಳಿ ಸಮಸ್ಯೆಗಳಿಂದ ಬಳಲುತ್ತಿರುವ ಜಗತ್ತು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶಗಳು ತಮ್ಮ ವ್ಯಾಪಾರ ಸಂಘರ್ಷಗಳನ್ನು ನಿಲ್ಲಿಸಬೇಕು. ತಮ್ಮ ಸಂಬಂಧಿತ ಬದ್ಧತೆಗಳ ಬಗ್ಗೆ ನಿಗಾ ಇಡಲು ವಿಶ್ವಸಂಸ್ಥೆಯ ಚೌಕಟ್ಟನ್ನು ಬಳಸಬೇಕು ಎಂದು ಅವರು ಹೇಳಿದರು. ಕದನ ವಿರಾಮದ ಸಮಯದಲ್ಲಿ, ರಾಷ್ಟ್ರಗಳು ಹಿಂದುಳಿದವರಿಗೆ ಸೇವೆ ಸಲ್ಲಿಸಲು ಮತ್ತು ಜಗತ್ತಿನಾದ್ಯಂತ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಲು ಸಹಕರಿಸಬೇಕು ಎಂದು ಒಬ್ರಡಾರ್ ಮನವಿ ಮಾಡಿದ್ದಾರೆ .

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ