ISRO Space Tourism: 2030ರಲ್ಲಿ ಇಸ್ರೋದಿಂದ ಬಾಹ್ಯಾಕಾಶ ಪ್ರವಾಸ ಯೋಜನೆ: ಟಿಕೆಟ್ ದರ ಅಬ್ಬಾ ಇಷ್ಟೊಂದಾ!
ಅಮೆರಿಕ, ಚೀನಾ, ಜಪಾನ್, ಭಾರತವು ಬಾಹ್ಯಾಕಾಶ ಪ್ರವಾಸೋದ್ಯಮದ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಗಳು 2030 ರ ವೇಳೆಗೆ ಬಾಹ್ಯಾಕಾಶ ಪ್ರಯಾಣವನ್ನು ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ, ಚೀನಾ, ಜಪಾನ್, ಭಾರತವು ಬಾಹ್ಯಾಕಾಶ ಪ್ರವಾಸೋದ್ಯಮದ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಗಳು 2030 ರ ವೇಳೆಗೆ ಬಾಹ್ಯಾಕಾಶ ಪ್ರಯಾಣವನ್ನು ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಮಾತನಾಡಿ, ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಸುಮಾರು 6 ಕೋಟಿ ವೆಚ್ಚ ತಗುಲಬಹುದು ಎಂದು ಹೇಳಿದ್ದಾರೆ.
ಪ್ರಯಾಣಿಸುವ ಜನರು ತಮ್ಮನ್ನು ತಾವು ಗಗನಯಾತ್ರಿಗಳು ಎಂದು ಕರೆಯಲು ಸಾಧ್ಯವಾಗುತ್ತದೆ ಎಂದು ಸೋಮನಾಥ್ ಹೇಳಿದರು. ಈ ಪ್ರವಾಸದಲ್ಲಿ ಉಪ ಕಕ್ಷೆಗೆ( ಸುಮಾರು 100 ಕಿ.ಮೀ ಎತ್ತರದ ಬಾಹ್ಯಾಕಾಶದ ಅಂಚು) ಅಥವಾ ಕಕ್ಷೆಗೆ(400 ಕಿ.ಮೀ) ಕರೆದೊಯ್ಯಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಪ್ರವಾಸಿಗರು ಬಾಹ್ಯಾಕಾಶದ ಅಂಚಿನಲ್ಲಿ 25 ನಿಮಿಷ ಕಳೆಯಲಿದ್ದಾರೆ ಹಾಗೂ ಗುರುತ್ವಾಕರ್ಷಣೆ ವಾತಾವರಣದ ಅನುಭವ ಪಡೆಯಲಿದ್ದಾರೆ.
ಮತ್ತಷ್ಟು ಓದಿ: Gaganyaan: 2024ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ್’; ಕೇಂದ್ರ
ಏರೋಸ್ಪೇಸ್ ಇಂಜಿನಿಯರ್ ಮತ್ತು ಹಣಕಾಸು ವಿಶ್ಲೇಷಕ ಡೆನ್ನಿಸ್ ಟಿಟೊ 2001 ರಲ್ಲಿ 60 ವರ್ಷ ವಯಸ್ಸಿನವನಾಗಿದ್ದಾಗ ಅವರು ಮೊದಲ ಪಾವತಿಸುವ ಬಾಹ್ಯಾಕಾಶ ಪ್ರವಾಸಿಯಾದರು. ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಹಾರಲು ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಒಂದು ವಾರ ಕಳೆಯಲು ಅವರು ರಷ್ಯಾಕ್ಕೆ 20 ಮಿಲಿಯನ್ ಡಾಲರ್ ಪಾವತಿಸಿದರು. ಅಲ್ಲಿಂದೀಚೆಗೆ, ಬ್ಲೂ ಒರಿಜಿನ್, ವರ್ಜಿನ್ ಗ್ಯಾಲಕ್ಟಿಕ್ ಮತ್ತು ಸ್ಪೇಸ್‌ಎಕ್ಸ್ ಸೇರಿದಂತೆ ಹಲವಾರು ಕಂಪನಿಗಳು ಬಾಹ್ಯಾಕಾಶ ಪ್ರವಾಸಕ್ಕೆ ಮುಂದಾಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ