ಅಮೆರಿಕ: ಅಧ್ಯಕ್ಷೀಯ ಸ್ಪರ್ಧೆಯಿಂದ ಜೋ ಬೈಡನ್ ಹಿಂದಕ್ಕೆ; ಕಮಲಾ ಹ್ಯಾರಿಸ್ ಈಗ ಅಧಿಕೃತ ಸ್ಪರ್ಧಿ?

|

Updated on: Jul 22, 2024 | 11:09 AM

US Presidential Elections: Donald Trump vs Kamala Harris: ಅಮೆರಿಕ ಅಧ್ಯಕ್ಷ ಜೋ ಬೈಡನ್ ಬದಲು ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಅಭ್ಯರ್ಥಿಯಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಬೈಡನ್, ಅಧಿಕೃತ ಅಭ್ಯರ್ಥಿಯಾಗಲು ಕಮಲಾ ಹೆಸರು ಶಿಫಾರಸು ಮಾಡಿದ್ದಾರೆ. ಈಗ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಾ ಕಣದಲ್ಲಿ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್, ರಾಬರ್ಟ್ ಕೆನಡಿ ಜೂನಿಯರ್ ಹಾಗೂ ಇತರ ಮೂವರಿದ್ದಾರೆ.

ಅಮೆರಿಕ: ಅಧ್ಯಕ್ಷೀಯ ಸ್ಪರ್ಧೆಯಿಂದ ಜೋ ಬೈಡನ್ ಹಿಂದಕ್ಕೆ; ಕಮಲಾ ಹ್ಯಾರಿಸ್ ಈಗ ಅಧಿಕೃತ ಸ್ಪರ್ಧಿ?
ಜೋ ಬೈಡನ್, ಕಮಲಾ ಹ್ಯಾರಿಸ್
Follow us on

ನವದೆಹಲಿ, ಜುಲೈ 22: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ಬಾರಿಯ ಅಮೆರಿಕನ್ ಅಧ್ಯಕ್ಷೀಯ ಸ್ಪರ್ಧೆಯ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ನಿರೀಕ್ಷೆಯಂತೆ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಾಟ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಶಿಫಾರಸು ಮಾಡಿದ್ದಾರೆ. ಇದರೊಂದಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್​ಗೆ ಪ್ರಮುಖ ಎದುರಾಳಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗುವ ಸಾಧ್ಯತೆ ಇದೆ.

ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ಹೊಸ ಇತಿಹಾಸ

ತಮಿಳುನಾಡು ಮೂಲದ ಕುಟುಂಬದಲ್ಲಿ ಜನಿಸಿದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿದ್ದಾರೆ. ಆ ಸ್ಥಾನಕ್ಕೆ ಏರಿದ ಭಾರತ ಮೂಲದ ಮೊದಲ ವ್ಯಕ್ತಿ ಎಂಬ ದಾಖಲೆ ಅವರಿಗಿದೆ. ಈಗ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆ ಮಾಡಲಿರುವ ಮೊದಲ ಭಾರತ ಮೂಲದ ವ್ಯಕ್ತಿ ಎಂಬ ದಾಖಲೆ ಅವರಿಗೆ ಸಿಗಲಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಗೆದ್ದರೆ ದೊಡ್ಡ ಇತಿಹಾಸ ಅಧ್ಯಾಯವೇ ಆರಂಭವಾಗಲಿದೆ. ಭಾರತ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಅತ್ಯುಚ್ಚ ಪಟ್ಟ ಅಲಂಕರಿಸಿದ ದಾಖಲೆ ಅವರದ್ದಾಗುತ್ತದೆ.

ಇದನ್ನೂ ಓದಿ: ಬಾಂಗ್ಲಾದೇಶ ಹಿಂಸಾಚಾರ: ಮೀಸಲಾತಿ ಕಡಿಮೆಗೊಳಿಸಿದ ಸುಪ್ರೀಂಕೋರ್ಟ್; ಪ್ರತಿಭಟನೆ ಬಿಟ್ಟು ತರಗತಿಗೆ ಮರಳುವಂತೆ ವಿದ್ಯಾರ್ಥಿಗಳಿಗೆ ಆದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ಆರು ಮಂದಿ

ಅಮೆರಿಕದಲ್ಲಿ ಎರಡು ಪ್ರಮುಖ ಪಕ್ಷಗಳಿರುವುದು. ಡೆಮಾಕ್ರಾಟ್ ಮತ್ತು ರಿಪಬ್ಲಿಕನ್. ಡೆಮಾಕ್ರಾಟ್ ಪಕ್ಷದಿಂದ ಕಮಲಾ ಹ್ಯಾರಿಸ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದಿಂದ ಕಣದಲ್ಲಿದ್ದಾರೆ. ಪಕ್ಷೇತರರಾಗಿ ನಾಲ್ಕು ಮಂದಿ ಇದ್ದಾರೆ.

  1. ಕಮಲಾ ಹ್ಯಾರಿಸ್: ಡೆಮಾಕ್ರಾಟ್ ಅಭ್ಯರ್ಥಿ (ಸಂಭಾವ್ಯ)
  2. ಡೊನಾಲ್ಡ್ ಟ್ರಂಪ್: ರಿಪಬ್ಲಿಕನ್ ಅಭ್ಯರ್ಥಿ
  3. ರಾಬರ್ಟ್ ಕೆನಡಿ ಜೂನಿಯರ್: ಪಕ್ಷೇತರ ಅಭ್ಯರ್ಥಿ
  4. ಕಾರ್ನೆಲ್ ವೆಸ್ಟ್: ಪಕ್ಷೇತರ ಅಭ್ಯರ್ಥಿ
  5. ಜಿಲ್ ಸ್ಟೇನ್: ಪಕ್ಷೇತರ ಅಭ್ಯರ್ಥಿ
  6. ಓಲಿವರ್ ಚೇಸ್: ಪಕ್ಷೇತರ ಅಭ್ಯರ್ಥಿ

ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ರಾಬರ್ಟ್ ಕೆನಡಿ ಜೂನಿಯರ್ ತಾನು ಡೊನಾಲ್ಡ್ ಟ್ರಂಪ್​ಗೆ ನಿಜವಾಗಿಯೂ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಎಂದು ಹೇಳಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಸಂಬಂಧಿ ಮತ್ತು ಮಾಜಿ ಅಟಾರ್ನಿ ಜನರಲ್ ರಾಬರ್ಟ್ ಕೆನಡಿ ಅವರ ಮಗ ಇವರು.

ಇದನ್ನೂ ಓದಿ: ಅಮೆರಿಕದ ಅಧ್ಯಕ್ಷ ಜೋ ಬೈಡನ್​ಗೆ ಕೊರೊನಾ ಸೋಂಕು

ಕಮಲಾ ಹ್ಯಾರಿಸ್​ಗೆ ಭಾರತ ಮೂಲದ ಸಂಸದರ ಬೆಂಬಲ?

ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ಸಂಸದರು ಹೆಚ್ಚಿನ ಬೆಂಬಲ ನೀಡಿದ್ದರು. ಈಗ ಭಾರತ ಮೂಲದವರೇ ಆದ ಕಮಲಾ ಹ್ಯಾರಿಸ್ ಅವರೇ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವುದರಿಂದ ಇವರಿಗೆ ಆ ಬೆಂಬಲ ಮುಂದುವರಿದಿದೆ.

ಹಾಗೆಯೇ, ಕಮಲಾ ಹ್ಯಾರಿಸ್ ಅವರು ಡೆಮಾಕ್ರಾಟ್ ಅಭ್ಯರ್ಥಿ ಆಗಬಹುದು ಎಂಬುದು ಬಹಿರಂಗಗೊಳ್ಳುತ್ತಿದ್ದಂತೆಯೇ ಫಂಡಿಂಗ್​ಗಳು ಹರಿದುಬರತೊಡಗಿವೆ. ಆಕ್ಟ್​ಬ್ಲೂ ಪ್ಲಾಟ್​ಫಾರ್ಮ್ ಮೂಲಕ ಕಮಲಾ ಹ್ಯಾರಿಸ್ ಬೆಂಬಲಿಗರು 46.7 ಮಿಲಿಯನ್ ಡಾಲರ್ ಫಂಡ್ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಪರಸ್ಪರ ಅನ್​ಫಾಲೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿಯೇ ಪತಿಗೆ ತಲಾಖ್ ನೀಡಿದ ದುಬೈ ರಾಜಕುಮಾರಿ

ಜೋ ಬೈಡನ್ ಯಾಕೆ ಸ್ಪರ್ಧೆ ಇಲ್ಲ?

ಜೋ ಬೈಡನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದರಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿರುವ ಸಂಗತಿ. ಆದರೆ, ಡೊನಾಲ್ಡ್ ಟ್ರಂಪ್ ಜೊತೆ ಡಿಬೇಟ್ ನಡೆಯುವ ಸಂದರ್ಭವೊಂದರಲ್ಲಿ ಜೋ ಬೈಡನ್ ತಡವರಿಸಿದರು ಎನ್ನುವ ನೆಗಟಿವ್ ವಿಚಾರ ವ್ಯಾಪಕವಾಗಿ ಹರಡಿತ್ತು. ಈ ಕಾರಣಕ್ಕೆ ಬೈಡನ್ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದರಾ ಎಂಬ ಅನುಮಾನವೂ ಇದೆ.

ಈಗ ಬೈಡನ್ ಅವರು ಚುನಾವಣೆ ಮುಗಿಯುವವರೆಗೂ ಅಮೆರಿಕ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಕಮಲಾ ಹ್ಯಾರಿಸ್ ಅವರು ಅಧಿಕೃತ ಅಭ್ಯರ್ಥಿಯಾಗುವುದು ಇನ್ನೂ ಖಚಿತಗೊಂಡಿಲ್ಲ. ಡೆಮಾಕ್ರಾಟ್ ಪಕ್ಷದ ಸಭೆಯು ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:57 am, Mon, 22 July 24