ಅಮೆರಿಕ ಕ್ಯಾಪಿಟಲ್ ದಾಳಿ ಪ್ರಕರಣ: 100ಕ್ಕೂ ಹೆಚ್ಚು ಜನರ ಬಂಧನ, 200 ಶಂಕಿತರ ಗುರುತು ಪತ್ತೆ

|

Updated on: Jan 15, 2021 | 3:09 PM

ಈಗಾಗಲೇ 200 ಶಂಕಿತರನ್ನು ಪತ್ತೆಹಚ್ಚಲಾಗಿದ್ದು, ಸದ್ಯದಲ್ಲೇ ಎಫ್​ಬಿಐ ಏಜೆಂಟ್​ರು ಅವರನ್ನು ಬಂಧಿಸಲಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡವರನ್ನು ಕಂಡುಹಿಡಿಯಲು 1,40,000 ಸಲಹೆಗಳು ಸಲ್ಲಿಕೆಯಾಗಿವೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಅಮೆರಿಕ ಕ್ಯಾಪಿಟಲ್ ದಾಳಿ ಪ್ರಕರಣ: 100ಕ್ಕೂ ಹೆಚ್ಚು ಜನರ ಬಂಧನ, 200 ಶಂಕಿತರ ಗುರುತು ಪತ್ತೆ
ಅಮೆರಿಕದ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ನಡೆದ ಘರ್ಷಣೆ ದೃಶ್ಯ
Follow us on

ವಾಷಿಂಗ್ಟನ್: ಜನವರಿ 6 ರಂದು ನಡೆದ ಅಮೆರಿಕಾ ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಗೆ ಸಂಬಂಧಿಸಿ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಎಫ್​ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ತಿಳಿಸಿದ್ದಾರೆ. ಅಲ್ಲದೇ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅಧಿಕಾರ ಗ್ರಹಣ ನಡೆಯುವವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಸಂವಾದ, ಚರ್ಚೆಗಳ ಮೇಲೆ ನಿಗಾ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಮೈಕ್ ಫೆನ್ಸ್ ಜತೆಗಿನ ಸಭೆಯ ನಂತರ ಪ್ರತಿಕ್ರಿಯಿಸಿದ ಕ್ರಿಸ್ಟೋಫರ್ ವ್ರೇ, ಕ್ಯಾಪಿಟಲ್ ಕಟ್ಟಡದ ದಾಳಿಯಲ್ಲಿ ಭಾಗವಹಿಸಿದ ಇನ್ನಷ್ಟು ಜನರ ಹುಡುಕಾಟ ಮುಂದುವರೆದಿದೆ. ಅಪರಾಧ ಹಿನ್ನೆಲೆಯ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಕ್ಕೆ ಕೈಹಾಕುವವರಿಗೆ ಎಫ್​ಬಿಐ ನಡೆ ಎಚ್ಚರಿಕೆಯಾಗಲಿದೆ ಎಂದು ಅವರು ತಿಳಿಸಿದರು.

200 ಶಂಕಿತರ ಗುರುತು ಪತ್ತೆ
ಈಗಾಗಲೇ 200 ಶಂಕಿತರನ್ನು ಪತ್ತೆ ಹಚ್ಚಲಾಗಿದ್ದು, ಸದ್ಯದಲ್ಲೇ ಎಫ್​ಬಿಐ ಏಜೆಂಟ್​ರು ಅವರನ್ನು ಬಂಧಿಸಲಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡವರನ್ನು ಕಂಡುಹಿಡಿಯಲು ಈಗಾಗಲೇ 1,40,000 ಸಲಹೆಗಳು ಸಲ್ಲಿಕೆಯಾಗಿವೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ದಾಳಿಗೆ ಸಂಬಂಧಿಸಿ 200 ಪ್ರಕರಣಗಳನ್ನು ದಾಖಲಿಸಿ ಚುರುಕು ಕಾರ್ಯಾಚರಣೆ ನಡೆಸುತ್ತಿರುವ ಎಫ್​ಬಿಐ ಕುರಿತು ಅಮೆರಿಕ ಉಪಾಧ್ಯಕ್ಷ ಮೈಕ್ ಫೆನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೋ ಬೈಡೆನ್ ಅಧಿಕಾರ ಗ್ರಹಣ ನಡೆಸಲಿರುವ ಜನವರಿ 20 ರಂದೇ ಡೊನಾಲ್ಡ್ ಟ್ರಂಪ್ ಅಮೆರಿಕ ಸಂಸತ್​ನಲ್ಲಿ ವಿಚಾರಣೆ ಎದುರಿಸಲಿದ್ದಾರೆ.

ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು

 

Published On - 2:39 pm, Fri, 15 January 21