ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಂದಲ್ಲ, ಎರಡಲ್ಲ, ಮೂರು ಮದುವೆಯಾಗಿದ್ದಾರೆ. ಹಾಗೇನೆ ಲೆಕ್ಕವಿಲ್ಲದಷ್ಟು ಹುಡುಗಿಯರ ಜೊತೆ ಡೇಟಿಂಗ್, ರೋಮಾನ್ಸ್ ಕೂಡಾ ಮಾಡಿದ್ದಾರೆ. ಆದರೆ ಅದೆಲ್ಲವನ್ನೂ ಸರಾಗವಾಗಿ ಹ್ಯಾಂಡಲ್ ಮಾಡಿದ ಟ್ರಂಪ್‌ಗೆ, ಈಗ ಮುದ್ದಿನ ಮಗಳು ಇವಾಂಕಾ ಟ್ರಂಪ್ ಹಾಗೂ ಹಾಲಿ ಪತ್ನಿ ಮೆಲಾನಿಯಾ ಟ್ರಂಪ್ ಅವರ ಕಿತ್ತಾಟ ಹ್ಯಾಂಡಲ್ ಮಾಡೋದೇ ಒಂದು ದೊಡ್ಡ ಸವಾಲಾಗಿದೆ.
ಹೌದು, ಟ್ರಂಪ್ ಅವರ ಮೂರನೆ ಪತ್ನಿ ಮೆಲಾನಿಯಾ ಮತ್ತು ಮುದ್ದಿನ ಮಗಳು ಇವಾಂಕಾ ನಡುವಿನ ಕಿರಿಕ್ ಮತ್ತು ಕಿತ್ತಾಟ ಈಗ ಮತ್ತೊಮ್ಮೆ ಬಟಾಬಯಲಾಗಿದೆ. ಅಮೆರಿಕದ ಅಧ್ಯಕ್ಷಗಿರಿಯ ಎರಡನೇ ಅವಧಿಗೆ ಅಧಿಕೃತವಾಗಿ ನಾಮಾಂಕಿತಗೊಳ್ಳಲು ನಡೆದ ರಿಪಬ್ಲಿಕನ್ ಪಾರ್ಟಿಯ ಸಮಾವೇಶದ ಮೂರನೇ ದಿನ ತಂದೆಯನ್ನು ಸಭೆಗೆ ಪರಿಚಯಿಸಿದ ಇವಾಂಕಾ, ವಾಪಸ್ ಸ್ಟೇಜ್‌ನಿಂದ ಹೋಗುವಾಗ ಪಪ್ಪಾ ಟ್ರಂಪ್ ಜತೆ ಮಮ್ಮಿ ಮೆಲಾನಿಯಾ ಎದುರಾಗಿದ್ದಾರೆ. ಆಗ ಇವಾಂಕಾರನ್ನು ನೋಡಿದ ಮೆಲಾನಿಯ ನನ್ನ ಮಲಮಗಳು ಅಪ್ಪಟ ಚಿನ್ನ ಅನ್ನೋ ಹಾಗೆ ಸ್ವೀಟ್ ಸ್ಮೈಲ್ ನೀಡಿದ್ದಾಳೆ.
ಇದೇನಪ್ಪ ಮಲತಾಯಿಯಾದ್ರೂ ಮಲಮಗಳ ಮೇಲೆ ಇದೆಂಥಾ ಸಕ್ಕರೆಯಂಥ ಪ್ರೀತಿ ಅಂತಾ ನೋಡಿದವರು ಭಲೆ ಅಂತಾ ಮೆಚ್ಚುಗೆ ವ್ಯಕ್ತಪಡಿಸುತ್ತಿರವಾಗಲೇ ಮೆಲಾನಿಯಾಳ ಅಸಲಿ ಬಣ್ಣ ಬಯಲಾಗಿದೆ. ಇವಾಂಕಾ ಮುಂದೆ ಸಾಗುತ್ತಿದ್ದಂತೆ, ಸಧ್ಯ ತೊಲಗಿತು ಪೀಡೆ ಅಂತಾ ಕಣ್ಣು ದೊಡ್ಡದು ಮಾಡಿ ನಿರುಮ್ಮಳವಾದ ಉಸಿರು ಬಿಟ್ಟಿದ್ದಾಳೆ. ಇದನ್ನು ನೋಡಿದ ಕೋಟ್ಯಂತರ ಜನರೇ ಅಲಲಾ ಕಿಲಾಡಿ ಹೆಣ್ಣೆ ಅಂತಾ ಮೆಚ್ಚುಗೆಯ ಭಾವದಿಂದ ಜಾರಿ ಅಚ್ಚರಿಗೊಳಪಟ್ಟಿದ್ದಾರೆ.
ಇಷ್ಟೇ ಮೆಲಾನಿಯಾಳ ಈ ಚಾಲಾಕಿ ಗೋಸುಂಬೆ ಬಣ್ಣ ಬಯಲು ಮಾಡುವ ಈ ವಿಡಿಯೋ ಕ್ಷಣಾರ್ದದಲ್ಲಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಅದ್ಯಾವ ಪರಿಯೆಂದ್ರೆ ಕೇವಲ ಮೂರು ತಾಸುಗಳಲ್ಲಿ ಆರು ಮಿಲಿಯನ್ ಜನರು ವೀಕ್ಷಣೆ ಮಾಡಿ ಕಿಲಾಡಿ ಮೆಲಾನಿಯಾಳ ಅಸಲಿ ಬಣ್ಣವನ್ನ ನೋಡಿ ದಂಗಾಗಿದ್ದಾರೆ.
This was so weird. #RNC2020 pic.twitter.com/YHReTl0bfT
— Dana Goldberg (@DGComedy) August 28, 2020
Did Melania just roll her eyes at Ivanka? @ProjectLincoln pic.twitter.com/EBFRheqOtD
— Art Santiago ???? (@SantiG08) August 28, 2020
Published On - 2:27 pm, Fri, 28 August 20