ನವದೆಹಲಿ: ಇಸ್ಲಾಂ ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿದೆ. ಈ ಧರ್ಮ ಜಾಗತಿಕವಾಗಿ 2 ಬಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಜಗತ್ತಿನಲ್ಲಿ ಕ್ರಿಶ್ಚಿಯನ್ ಧರ್ಮದ ನಂತರ ಎರಡನೇ ಅತಿದೊಡ್ಡ ಧರ್ಮ ಇಸ್ಲಾಂ ಆಗಿದೆ. ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಾದ್ಯಂತ ಇಸ್ಲಾಂ ಧರ್ಮ ಬಹಳ ಪ್ರಾಬಲ್ಯ ಹೊಂದಿರುವ ಧರ್ಮವಾಗಿದೆ. ಇಂಡೋನೇಷ್ಯಾ ಮತ್ತು ಭಾರತದಂತಹ ದೇಶಗಳಲ್ಲಿ ಕೂಡ ಮುಸ್ಲಿಮರು ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೆ, ಈ ಒಂದು ದೇಶದಲ್ಲಿ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಲಾಗಿದೆ, ಇಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮಾತನಾಡುವುದು ಸಾವಿಗೆ ಕಾರಣವಾಗಬಹುದು!
ಸಾಮಾನ್ಯವಾಗಿ, ಮುಸ್ಲಿಮರು ಪ್ರಾಥಮಿಕವಾಗಿ ಅರಬ್ ಪ್ರಪಂಚ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ವಾಸಿಸುತ್ತಾರೆ. ಇಂಡೋನೇಷ್ಯಾ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಅದಾದ ನಂತರದ ಸ್ಥಾನದಲ್ಲಿ ಭಾರತ ಇದೆ. ಭಾರತವನ್ನು ಹಿಂದೂ ಪ್ರಾಬಲ್ಯವಿರುವ ದೇಶ ಎಂದು ಹೇಳಲಾಗುತ್ತದೆಯಾದರೂ ಇಲ್ಲಿ ಮುಸ್ಲಿಮರ ಜನಸಂಖ್ಯೆಯೂ ಅಷ್ಟೇ ಇದೆ. ಆದರೆ, ಮುಸ್ಲಿಮರೇ ಇಲ್ಲದ ದೇಶಗಳು ಕೂಡ ಇವೆ ಎಂಬುದು ನಿಮಗೆ ಗೊತ್ತಾ? ಈ ಕೆಲವು ರಾಷ್ಟ್ರಗಳಲ್ಲಿ ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ದೇಶದಲ್ಲಿ ಇಸ್ಲಾಂ ನಿಷೇಧ:
ಅಂತಹ ಒಂದು ದೇಶ ಉತ್ತರ ಕೊರಿಯಾ. ಇದು ತನ್ನ ಸರ್ವಾಧಿಕಾರಿ ಕಿಮ್ ಜಾಂಗ್-ಉನ್‌ನಿಂದಾಗಿ ಆಗಾಗ ಸುದ್ದಿಯಲ್ಲಿ ಇರುತ್ತದೆ. ಇದು ಯುನೈಟೆಡ್ ಸ್ಟೇಟ್ಸ್ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ತನ್ನ ದೊಡ್ಡ ಶತ್ರುಗಳಾಗಿ ನೋಡುತ್ತದೆ. ಕೇವಲ 2.6 ಕೋಟಿ ಜನಸಂಖ್ಯೆಯನ್ನು ಹೊಂದಿದ್ದರೂ ಜಾಗತಿಕ ಮಟ್ಟದಲ್ಲಿ ಉತ್ತರ ಕೊರಿಯಾವನ್ನು ಮಹತ್ವದ ಸೇನಾ ಶಕ್ತಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಚೀನಾದ ಜತೆ ಭಾರತದ ಸಂಬಂಧ ಹೇಗಿದೆ? ವಿವರಿಸಿದ ಸಚಿವ ಎಸ್ ಜೈಶಂಕರ್
ನ್ಯೂಸ್ 18 ವರದಿಯ ಪ್ರಕಾರ, ಉತ್ತರ ಕೊರಿಯಾ ನಾಸ್ತಿಕ ರಾಷ್ಟ್ರವಾಗಿದ್ದು, ತನ್ನ ನಾಗರಿಕರು ಯಾವುದೇ ಧರ್ಮವನ್ನು ಅನುಸರಿಸಬಹುದು ಎಂಬ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ ಈ ಸ್ವಾತಂತ್ರ್ಯವು ಧಾರ್ಮಿಕ ನಂಬಿಕೆಗಳು ದೇಶ, ಸಮಾಜ ಅಥವಾ ಅದರ ಸಾಮಾಜಿಕ ವ್ಯವಸ್ಥೆಯನ್ನು ಅಡ್ಡಿಪಡಿಸಬಾರದು ಎಂಬ ಷರತ್ತನ್ನು ಹಾಕುತ್ತದೆ. ಉತ್ತರ ಕೊರಿಯಾದ ಹೆಚ್ಚಿನ ಜನರು ಕೊರಿಯನ್ ಶಾಮನಿಸಂ ಮತ್ತು ಚಾಂಗ್ರಿಯೊನಿಸಂ ಅನ್ನು ಅನುಸರಿಸುತ್ತಾರೆ. ಇದು ಈ ದೇಶದ ಸಾಂಪ್ರದಾಯಿಕ ಸಿದ್ಧಾಂತಗಳಾಗಿವೆ. ಇವುಗಳನ್ನು ಕಿಮ್ ಜೊಂಗ್-ಉನ್ ಅವರ ಸರ್ಕಾರವು ಭಾರೀ ಪ್ರಚಾರ ಮಾಡುತ್ತದೆ. ಇಲ್ಲಿನ ಜನಸಂಖ್ಯೆಯ ಒಂದು ಸಣ್ಣ ಭಾಗವು ಬೌದ್ಧ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಸಹ ಅನುಸರಿಸುತ್ತದೆ.
ಕೊರಿಯನ್ ಶಾಮನಿಸಂ ಒಂದು ಪುರಾತನ ಧಾರ್ಮಿಕ ಸಂಪ್ರದಾಯವಾಗಿದ್ದು, ಕೊರಿಯಾದಲ್ಲಿ ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ. ಚಾಂಗ್ರಿಯೊನಿಸಂ ಜಪಾನ್‌ನಲ್ಲಿ ಉತ್ತರ ಕೊರಿಯಾದ ವಲಸಿಗರನ್ನು ಪ್ರತಿನಿಧಿಸುವ ಜಪಾನ್‌ನಲ್ಲಿನ ಕೊರಿಯನ್ ನಿವಾಸಿಗಳ ಜನರಲ್ ಅಸೋಸಿಯೇಷನ್‌ನ ಚೊಂಗ್ರಿಯನ್‌ನ ಆಲೋಚನೆಗಳು ಮತ್ತು ತತ್ವಗಳನ್ನು ಆಧರಿಸಿದೆ.
ಉತ್ತರ ಕೊರಿಯಾ ಕಿಮ್ ಜೊಂಗ್-ಉನ್ ಆಳ್ವಿಕೆಯಲ್ಲಿ ವಿದೇಶಿ ಧರ್ಮಗಳ ಆಚರಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ವಿಶೇಷವಾಗಿ ಇಸ್ಲಾಂ ಧರ್ಮವನ್ನು ಇಲ್ಲಿ ಯಾರೂ ಅನುಸರಿಸುವಂತಿಲ್ಲ. ಈ ದೇಶವು ಅಧಿಕೃತವಾಗಿ ನಾಸ್ತಿಕವಾಗಿದ್ದರೂ ಧಾರ್ಮಿಕ ಆಚರಣೆಗಳು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಬಾರದು ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಬಾರದು ಎಂದು ಕಾನೂನು ಷರತ್ತು ವಿಧಿಸುತ್ತದೆ.
ಇದನ್ನೂ ಓದಿ: ಬಾಂಗ್ಲಾದೇಶದ ಢಾಕಾದಲ್ಲಿ ಇಸ್ಕಾನ್ ದೇವಾಲಯಕ್ಕೆ ಬೆಂಕಿ, ವಿಗ್ರಹಗಳ ನಾಶ
ಒಂದೇ ಒಂದು ಮಸೀದಿ:
ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಕೊರಿಯಾದಲ್ಲಿ ಪ್ರಸ್ತುತ ಕೇವಲ 3,000 ಮುಸ್ಲಿಮರಿದ್ದಾರೆ. ಅವರಿಗೆ ನಮಾಜ್ ಮಾಡಲು ಯಾವುದೇ ಮಸೀದಿಗಳಿಲ್ಲ. ಉತ್ತರ ಕೊರಿಯಾದ ರಾಜಧಾನಿ ಪಯೋಂಗ್ಯಾಂಗ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿಯ ಸಂಕೀರ್ಣದೊಳಗೆ ಒಂದೇ ಒಂದು ಮಸೀದಿ ಇದೆ. ಇದನ್ನು ರಾಯಭಾರ ಕಚೇರಿಯಲ್ಲಿ ವಾಸಿಸುವ ಇರಾನಿಯನ್ನರು ಮಾತ್ರ ಬಳಸಬಹುದು.
ಉತ್ತರ ಕೊರಿಯಾವು ಕಮ್ಯುನಿಸ್ಟ್ ದೇಶ ಎಂದು ಹೇಳಿಕೊಳ್ಳುತ್ತದೆ, ಅಲ್ಲಿ ಧರ್ಮವನ್ನು ಕಮ್ಯುನಿಸಂನ ತತ್ವಗಳ ಅಡಿಯಲ್ಲಿ ಗುರುತಿಸಲಾಗಿಲ್ಲ. ಈ ದೇಶ ಕಮ್ಯುನಿಸಂನ ವೇಷ ಧರಿಸಿರುವ ಸರ್ವಾಧಿಕಾರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ದೇಶವು ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಕಡಿತಗೊಂಡಿದೆ. ಇಲ್ಲಿ ವೈಯಕ್ತಿಕ ಸ್ವಾತಂತ್ರ್ಯಗಳು ಬಹುತೇಕ ಅಸ್ತಿತ್ವದಲ್ಲಿಲ್ಲ. ಇಲ್ಲಿ ನಾಗರಿಕರು ಮುಕ್ತವಾಗಿ ವರ್ತಿಸಲು ಸಾಧ್ಯವಿಲ್ಲ, ಅವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ನೋಡುವುದನ್ನು ಸಹ ಸರ್ಕಾರವು ನಿಯಂತ್ರಿಸುತ್ತದೆ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮವನ್ನು ಅಭ್ಯಾಸ ಮಾಡುವುದನ್ನು ಇಲ್ಲಿ ನಿಷೇಧಿಸಲಾಗಿದೆ. ಸರ್ವಾಧಿಕಾರಿಯನ್ನು ವಿರೋಧಿಸುವ ಅಥವಾ ಈ ದೇಶದ ನಾಯಕನ ಆದೇಶಗಳನ್ನು ಧಿಕ್ಕರಿಸುವವರಿಗೆ ಮರಣದಂಡನೆಯನ್ನು ಕೂಡ ವಿಧಿಸಿದ ಉದಾಹರಣೆಗಳಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ