Russia Jet Crash: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಸಾವು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಬ್ಯುಜಿನೆಸ್ ಜೆಟ್ ವಿಮಾನವು ಮಾಸ್ಕೋದ ವಾಯುವ್ಯ ಭಾಗದಲ್ಲಿ ಪತನಗೊಂಡಿದೆ, ಪರಿಣಾಮ ವಿಮಾನದಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ

Russia Jet Crash: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಸಾವು
ಯೆವ್ಗೆನಿ ಪ್ರಿಗೋಜಿನ್

Updated on: Aug 24, 2023 | 8:01 AM

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಡಾಯವೆದ್ದಿದ್ದ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್(Yevgeny Prigozhin) ವಿಮಾನ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಬ್ಯುಜಿನೆಸ್ ಜೆಟ್ ವಿಮಾನವು ಮಾಸ್ಕೋದ ವಾಯುವ್ಯ ಭಾಗದಲ್ಲಿ ಪತನಗೊಂಡಿದೆ, ಪರಿಣಾಮ ವಿಮಾನದಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ವರದಿ ಮಾಡಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ 7 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಇದ್ದರು. ರಷ್ಯಾದ ಖಾಸಗಿ ಸೈನ್ಯದ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಎರಡು ತಿಂಗಳ ಹಿಂದೆ ಪುಟಿನ್ ಮತ್ತು ರಷ್ಯಾ ವಿರುದ್ಧ ಬಂಡಾಯವೆದ್ದಿದ್ದರು. ಹೀಗಿರುವಾಗ ಈ ವಿಮಾನ ಅಪಘಾತದ ಅವಘಡವನ್ನು ಪುಟಿನ್ ಸೇಡು ತೀರಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಪ್ರಿಗೋಜಿನ್ ಯಾರು?
ಯೆವ್ಗೆನಿ ಪ್ರಿಗೊಜಿನ್ ಅವರು 1961 ರಲ್ಲಿ ಲೆನಿನ್ಗ್ರಾಡ್ (ಸೇಂಟ್ ಪೀಟರ್ಸ್ಬರ್ಗ್) ನಲ್ಲಿ ಜನಿಸಿದರು. 20 ನೇ ವಯಸ್ಸಿನಲ್ಲಿ, ಪ್ರಿಗೋಜಿನ್ ಆಕ್ರಮಣ, ದರೋಡೆ ಮತ್ತು ವಂಚನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇದರ ನಂತರ ಅವರಿಗೆ 13 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಆದಾಗ್ಯೂ, ಅವರು 9 ವರ್ಷಗಳ ನಂತರ ಬಿಡುಗಡೆಯಾದರು.

ಪ್ರಿಗೋಜಿನ್ ಮುಖ್ಯವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಹುಕಾಲದ ಮಿತ್ರ. ಪ್ರಿಗೋಜಿನ್ ಮತ್ತು ಪುಟಿನ್ ಇಬ್ಬರೂ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಲೆನಿನ್ಗ್ರಾಡ್ನಲ್ಲಿ ಜನಿಸಿದ್ದರು ಎನ್ನುವುದು ಕೂಡ ರಷ್ಯನ್ನರಿಗೆ ಗೊತ್ತಿರುವ ಸಂಗತಿ.

ಮತ್ತಷ್ಟು ಓದಿ: Russia coup: ವೊರೊನೆಜ್ ಹೆದ್ದಾರಿಯಲ್ಲಿ ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್‌ಗಳಿಂದ ಗುಂಡಿನ ದಾಳಿ

ಪ್ರಿಗೋಜಿನ್ ಕ್ರೆಮ್ಲಿನ್ ಬೆಂಬಲಿತ ಕೂಲಿ ಪಡೆ ವ್ಯಾಗ್ನರ್ ಗ್ರೂಪ್ ಅನ್ನು ಸಹ ಹೊಂದಿದ್ದಾರೆ. ಪ್ರಪಂಚದಾದ್ಯಂತದ ರಷ್ಯಾಗೆ ಯಾವುದೇ ಕ್ಷಣದಲ್ಲಿ ತೊಂದರೆಗೊಳಗಾದಾಗ ಅವುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉಕ್ರೇನ್‌ ವಿರುದ್ಧ ಹೋರಾಡುವಲ್ಲಿ ಕೂಡ ಪ್ರಿಗೋಜಿನ್‌ನ ಸೈನಿಕರು ಪ್ರಮುಖ ಶಕ್ತಿಯಾಗಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us