AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia coup: ವೊರೊನೆಜ್ ಹೆದ್ದಾರಿಯಲ್ಲಿ ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್‌ಗಳಿಂದ ಗುಂಡಿನ ದಾಳಿ

ತೈಲ ಡಿಪೋದಲ್ಲಿ ಉರಿಯುತ್ತಿರುವ ಇಂಧನ ಟ್ಯಾಂಕ್ ಅನ್ನು ನಂದಿಸಲು ತುರ್ತು ಸೇವೆಗಳು ಪ್ರಯತ್ನಿಸುತ್ತಿವೆ ಎಂದು ರಷ್ಯಾದ ವೊರೊನೆಜ್ ಪ್ರದೇಶದ ಗವರ್ನರ್ ಹೇಳಿದ ಸ್ವಲ್ಪ ಸಮಯದ ನಂತರ ಈ ಘಟನೆ ವರದಿ ಆಗಿದೆ

Russia coup: ವೊರೊನೆಜ್ ಹೆದ್ದಾರಿಯಲ್ಲಿ ವ್ಯಾಗ್ನರ್ ಗುಂಪಿನ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್‌ಗಳಿಂದ ಗುಂಡಿನ ದಾಳಿ
ರಷ್ಯಾದಲ್ಲಿ ದಂಗೆImage Credit source: Twitter/@GoldingBF
ರಶ್ಮಿ ಕಲ್ಲಕಟ್ಟ
|

Updated on:Jun 24, 2023 | 6:15 PM

Share

ಶನಿವಾರ ವೊರೊನೆಜ್ ನಗರದ ಹೊರಗಿನ M4 ಹೆದ್ದಾರಿಯಲ್ಲಿ ವ್ಯಾಗ್ನರ್ ಮಿಲಿಟರಿ ( Wagner mercenary) ಬೆಂಗಾವಲು ಪಡೆಯ ಮೇಲೆ ರಷ್ಯಾ ಸೇನಾ (Russian Army) ಹೆಲಿಕಾಪ್ಟರ್‌ಗಳು ಗುಂಡು ಹಾರಿಸಿವೆ ಎಂದು ವರದಿಯಾಗಿದೆ. ರೋಸ್ಟೊವ್‌ನಿಂದ ಮಾಸ್ಕೋಗೆ (Moscow) ನಡುವಿನ 1,100-ಕಿಮೀ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.ತೈಲ ಡಿಪೋದಲ್ಲಿ ಉರಿಯುತ್ತಿರುವ ಇಂಧನ ಟ್ಯಾಂಕ್ ಅನ್ನು ನಂದಿಸಲು ತುರ್ತು ಸೇವೆಗಳು ಪ್ರಯತ್ನಿಸುತ್ತಿವೆ ಎಂದು ರಷ್ಯಾದ ವೊರೊನೆಜ್ ಪ್ರದೇಶದ ಗವರ್ನರ್ ಹೇಳಿದ ಸ್ವಲ್ಪ ಸಮಯದ ನಂತರ ಈ ಘಟನೆ ವರದಿ ಆಗಿದೆ. ಪ್ರಸ್ತುತ ಸ್ಥಳದಲ್ಲಿ 100 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಮತ್ತು 30 ಯುನಿಟ್ ಉಪಕರಣಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯಪಾಲ ಅಲೆಕ್ಸಾಂಡರ್ ಗುಸೆವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ರಷ್ಯಾದ ಭದ್ರತಾ ಮೂಲವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಮಾಸ್ಕೋದಿಂದ ಸುಮಾರು 500 ಕಿಮೀ ದಕ್ಷಿಣದಲ್ಲಿರುವ ವೊರೊನೆಜ್ ನಗರದಲ್ಲಿನ ಮಿಲಿಟರಿ ಸೌಲಭ್ಯಗಳನ್ನು ವ್ಯಾಗ್ನರ್ ಹೋರಾಟಗಾರರು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಇದನ್ನು ದೃಢೀಕರಿಸಲಾಗಿಲ್ಲ.

ಇದನ್ನೂ ಓದಿ: ಇದು ರಷ್ಯಾಕ್ಕೆ ಮಾಡಿದ ದೇಶದ್ರೋಹ: ವ್ಯಾಗ್ನರ್ ಗ್ರೂಪ್ ವಿರುದ್ಧ ವ್ಲಾಡಿಮಿರ್ ಪುಟಿನ್ ವಾಗ್ದಾಳಿ

ರಷ್ಯಾದ ಸಂಪೂರ್ಣ ಆಕ್ರಮಣ ಪಡೆಗೆ ವ್ಯವಸ್ಥಾಪನಾ ಕೇಂದ್ರವಾಗಿ ಕಾರ್ಯನಿರ್ವಹಿಸುವ ರೋಸ್ಟೊವ್‌ನಲ್ಲಿ, ಶಸ್ತ್ರಸಜ್ಜಿತ ವಾಹನಗಳು ಮತ್ತು ಯುದ್ಧ ಟ್ಯಾಂಕ್‌ಗಳಲ್ಲಿ ವ್ಯಾಗ್ನರ್ ಹೋರಾಟಗಾರರು ಇರುವುದನ್ನು ಅಲ್ಲಿನ ನಿವಾಸಿಗಳು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದರು. ಮಾಸ್ಕೋ ಬೀದಿಗಳಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜಿಸಿದ್ದು, ರೆಡ್ ಸ್ಕ್ವೇರ್ ನ್ನು ಲೋಹದ ಬ್ಯಾರಿಯರ್​​ನಿಂದ  ತಡೆಯೊಡ್ಡಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Sat, 24 June 23

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?