ರಷ್ಯಾದ ನಾಯಕತ್ವವನ್ನು ಕಿತ್ತೊಗೆಯಲು ಮೆರವಣಿಗೆ ಮಾಡಲಿಲ್ಲ ಎಂದ ವ್ಯಾಗ್ನರ್ ಗುಂಪಿನ ಮುಖ್ಯಸ್ಥ
ವ್ಯಾಗ್ನರ್ ಗುಂಪಿನ ಸೈನಿಕರು ಮಾಸ್ಕೋಗೆ ಕೇವಲ 200 ಕಿಲೋಮೀಟರ್ಗಳಷ್ಟು ದೂರದಲ್ಲಿದ್ದರೆ, 'ರಕ್ತಪಾತ'ವನ್ನು ತಪ್ಪಿಸುವುದಕ್ಕಾಗಿ ತಾನು ಹಿಂತಿರುಗಲು ನಿರ್ಧರಿಸಿದ್ದೇನೆ ಎಂದು ಪ್ರಿಗೋಜಿನ್ ಹೇಳಿದ್ದಾರೆ.
ರಷ್ಯಾದಲ್ಲಿ (Russia) ಸ್ಥಗಿತಗೊಂಡ ದಂಗೆಯ ನಂತರ ಮೊದಲ ಬಾರಿ ಸಂದೇಶ ರವಾನಿಸಿರು ವ್ಯಾಗ್ನರ್ ಗುಂಪಿನ (Wagner group) ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ (Yevgeny Prigozhin), ರಷ್ಯಾದ ನಾಯಕತ್ವವನ್ನು ಕಿತ್ತೊಗೆಯಲು ನಮ್ಮ ಗುಂಪು ಮೆರವಣಿಗೆ ನಡೆಸಲಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಬಿಡುಗಡೆಯಾದ ತನ್ನ 11-ನಿಮಿಷದ ಆಡಿಯೊದಲ್ಲಿ, ಉಕ್ರೇನ್‌ನಲ್ಲಿನ ಯುದ್ಧದ ವಿರುದ್ಧ ಪ್ರತಿಭಟನೆ ದಾಖಲಿಸಲು ಗುಂಪು ಉದ್ದೇಶಿಸಿತ್ತು ಎಂದು ಪ್ರಿಗೋಜಿನ್ ಹೇಳಿದ್ದಾರೆ.
ಅನ್ಯಾಯದ ಬಗ್ಗೆ ನಾವು ನಮ್ಮ ಮೆರವಣಿಗೆ ನಡೆಸಿದ್ದೇವೆ ಎಂದು ಹೇಳಿದ ಪ್ರಿಗೋಜಿನ್, ತಾವು ಎಲ್ಲಿದ್ದಾರೆ ಅಥವಾ ಭವಿಷ್ಯದ ಯೋಜನೆಗಳ ಬಗ್ಗೆ ವಿವರಗಳನ್ನು ನೀಡಲಿಲ್ಲ. ಶನಿವಾರ ರಷ್ಯಾದ ರಾಜಧಾನಿ ಮಾಸ್ಕೋಗೆ ಮೆರವಣಿಗೆಯನ್ನು ನಿಲ್ಲಿಸಿದ ನಂತರ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.
ವ್ಯಾಗ್ನರ್ ಗುಂಪಿನ ಸೈನಿಕರು ಮಾಸ್ಕೋಗೆ ಕೇವಲ 200 ಕಿಲೋಮೀಟರ್ಗಳಷ್ಟು ದೂರದಲ್ಲಿದ್ದರೆ, ‘ರಕ್ತಪಾತ’ವನ್ನು ತಪ್ಪಿಸುವುದಕ್ಕಾಗಿ ತಾನು ಹಿಂತಿರುಗಲು ನಿರ್ಧರಿಸಿದ್ದೇನೆ ಎಂದು ಪ್ರಿಗೋಜಿನ್ ಹೇಳಿದ್ದಾರೆ. ಕ್ರೆಮ್ಲಿನ್ ಬೆಲರೂಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರ ಸಹಾಯದಿಂ ವ್ಯಾಗ್ನರ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲು ಯಶಸ್ವಿಯಾಯಿತು.
ಇದನ್ನೂ ಓದಿ: ನಿನ್ನೆ ವೈಲೆಂಟ್ ಆಗಿದ್ದ ವ್ಯಾಗ್ನಾರ್ ಸೈನ್ಯ ಇಂದು ಸೈಲೆಂಟ್, ಪುಟಿನ್ ಎಚ್ಚರಿಕೆಗೆ ದಂಗೆ ಕೈಬಿಟ್ಟ ಪ್ರಿಗೋಝಿನ್
ಇದಕ್ಕಿಂತ ಮುನ್ನ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ವ್ಯಾಗ್ನರ್ ದಂಗೆಯನ್ನು ‘ದ್ರೋಹ’ ಮತ್ತು ‘ದೇಶದ್ರೋಹ’ ಎಂದು ಕರೆದಿದ್ದು, ಬಂಡುಕೋರರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಹೇಳಿದ್ದರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ