Deepavali: ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿದ ನ್ಯೂಯಾರ್ಕ್
ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ(Deepavali) ಹಬ್ಬಕ್ಕೆ ಶಾಲೆಗಳಿಗೆ ರಜೆ ಘೊಷಿಸುವ ಮೂಲಕ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ(Deepavali) ಹಬ್ಬಕ್ಕೆ ಶಾಲೆಗಳಿಗೆ ರಜೆ ಘೊಷಿಸುವ ಮೂಲಕ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿಂದೆ 2021 ಮತ್ತು 2022ರಲ್ಲಿ ಎರಡು ಬಾರಿ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಲಾಗಿತ್ತು. ಎರಡೂ ವಿಫಲವಾಗಿತ್ತು. ಈ ಮಸೂದೆಯನ್ನು ವಿಧಾನಸಭೆಯ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಮಂಡಿಸಿ, ಮಸೂದೆ ಅಂಗೀಕಾರವಾದಾಗ ದಕ್ಷಿಣ ಏಷ್ಯಾದ ಸಮುದಾಯದ ಕನಸನ್ನು ನನಸು ಮಾಡಿದೆ ಎಂದು ಹೇಳಿದ್ದರು.
ನ್ಯೂಯಾರ್ಕ್ನಲ್ಲಿ ಹಿಮದೂಗಳ ಹಬ್ಬಕ್ಕೆ ಸಾಲೆಗೆ ರಜೆ ಘೋಷಿಸಿರುವುದು ಸಂತಸದ ಸಂಗತಿಯಾಗಿದೆ. ಈ ಕುರಿತು ನ್ಯೂಯಾರ್ಕ್ ಮೇಯರ್ ಎರಿಕ್ ಆಡವ್ಸ್ ಹೇಳಿಕೆ ನೀಡಿದ್ದು, ಎಲ್ಲಾ ಸದಸ್ಯರ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ಸಮುದಾಯ ಸೇರಿದಂತೆ ನಗರದ ನಿವಾಸಿಗಳಿಗೆ ಇದು ವಿಜಯ ಎಂದು ಅಧಿಕಾರಿಗಳು ಬಣ್ಣಿಸಿದರು. ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಅವರು ಸ್ಟೇಟ್ ಹೌಸ್ ಮತ್ತು ಸ್ಟೇಟ್ ಸೆನೆಟ್ ನ್ಯೂಯಾರ್ಕ್ ಸಿಟಿ ಪಬ್ಲಿಕ್ ಶಾಲೆಗಳನ್ನು ದೀಪಾವಳಿಯಂದು ಮುಚ್ಚಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳಿಗೆ ಈ ವರ್ಷ ದೀಪಾವಳಿ ರಜೆ ಇರುತ್ತದೆ. ನ್ಯೂಯಾರ್ಕ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ್ ಮಾತನಾಡಿ, ಎರಡು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಏಷ್ಯಾ ಮತ್ತು ಇಂಡೋ-ಕೆರಿಬಿಯನ್ ಸಮುದಾಯವು ಈ ಕ್ಷಣಕ್ಕಾಗಿ ಹೋರಾಡಿದೆ. ನ್ಯೂಯಾರ್ಕ್ ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕನ್ ಮಹಿಳೆ ಜೆನ್ನಿಫರ್.
ಮತ್ತಷ್ಟು ಓದಿ: ದೀಪಾವಳಿ ಹಬ್ಬಕ್ಕೆ ಶಾಲಾ ರಜಾದಿನ ಘೋಷಣೆ ಮಾಡಲು ನ್ಯೂಯಾರ್ಕ್ ನಗರ ಚಿಂತನೆ: ವರದಿ
ಹಲವು ವರ್ಷಗಳಿಂದ ನ್ಯೂಯಾರ್ಕ್ನಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಘೊಷಿಸಬೇಕು ಎನ್ನುವ ಒತ್ತಾಯವಿತ್ತು. ವೈಟ್ ಹೌಸ್ ನಲ್ಲೂ ಈ ಹಿಂದೆ ದೀಪಾವಳಿ ಆಚರಿಸಲಾಗಿತ್ತ. ಕತ್ತಲೆ ಮೇಲೆ ಬೆಳಕಿನ ವಿಜಯದ ಸಂಕೇತ ದೀಪಾವಳಿ ಎಂದು ಮೇಯರ್ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಯುಎಸ್ ಕಾಂಗ್ರೆಸ್ ಮಹಿಳೆ ಗ್ರೇಸ್ ಮೆಂಗ್ ಅವರು ದೀಪಾವಳಿಯನ್ನು ಫೆಡರಲ್ ರಜಾದಿನವೆಂದು ಘೋಷಿಸುವ ಮಸೂದೆಯನ್ನು ಮಂಡಿಸಿದರು. ಒಂದು ವೇಳೆ ಜಾರಿಗೆ ಬಂದರೆ, ದೀಪಾವಳಿ ಅಮೆರಿಕದಲ್ಲಿ 12 ನೇ ಫೆಡರಲ್ ಮಾನ್ಯತೆ ಪಡೆದ ರಜಾದಿನವಾಗುತ್ತದೆ ಎಂದು ವರದಿ ಹೇಳಿದೆ. ಇದಾದ ನಂತರ ಈ ಬೆಳವಣಿಗೆ ನಡೆದಿದೆ.
ಏಪ್ರಿಲ್‌ನಲ್ಲಿ, ಪೆನ್ಸಿಲ್ವೇನಿಯಾ ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಘೋಷಣೆ ಮಾಡಿತ್ತು. ಸೆನೆಟರ್ ನಿಕಿಲ್ ಸವಾಲ್ ಅವರು ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಗುರುತಿಸಲು ಸೆನೆಟ್ ಸರ್ವಾನುಮತದಿಂದ ಮತ ಹಾಕಿತು. ಈ ಬೆಳಕು ಮತ್ತು ಸಂಬಂಧದ ಹಬ್ಬವನ್ನು ಆಚರಿಸುವ ಎಲ್ಲಾ ಪೆನ್ಸಿಲ್ವೇನಿಯನ್ನರಿಗೆ ಸ್ವಾಗತ, ನಿಮ್ಮನ್ನು ಪರಿಗಣಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ