ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಘೋಷಿಸಿದ ಅಮೆರಿಕಾದ ಪೆನ್ಸಿಲ್ವೇನಿಯಾ
ರಾಜ್ಯ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ಸೆನೆಟರ್ ನಿಕಿಲ್ ಸವಾಲ್ ಈ ವರ್ಷದ ಫೆಬ್ರವರಿಯಲ್ಲಿ ಪೆನ್ಸಿಲ್ವೇನಿಯಾದಲ್ಲಿ ದೀಪಾವಳಿಯನ್ನು ಅಧಿಕೃತ ರಾಜ್ಯ ರಜಾದಿನವನ್ನಾಗಿ ಮಾಡಲು ಶಾಸನವನ್ನು ಪರಿಚಯಿಸಿದರು ಎಂದು ಮೈ ಟ್ವಿನ್ ಟೈರ್ಸ್ ವರದಿ ಮಾಡಿದೆ.
ಫೆಬ್ರವರಿಯಲ್ಲಿ ನವ ಯಾರ್ಕ್ ದೀಪಾವಳಿಯನ್ನು ರಾಜ್ಯ ರಾಜಾ ದಿನವೆಂದು ಘೋಷಿಸಿತು. ಇದೀಗ ಅಮೆರಿಕಾದ ಪೆನ್ಸಿಲ್ವೇನಿಯಾ (Pennsylvania) ಹಿಂದೂ ಹಬ್ಬ ದೀಪಾವಳಿಯನ್ನು (Deepavali) ರಾಜ್ಯದ ರಜಾದಿನವೆಂದು (State Festival) ಘೋಷಿಸಿದೆ ಎಂದು ಸೆನೆಟರ್ ನಿಕಿಲ್ ಸವಾಲ್ ಬುಧವಾರ (April 26) ಟ್ವೀಟ್ ಮಾಡಿದ್ದಾರೆ. “ದೀಪಾವಳಿಯನ್ನು ಅಧಿಕೃತ ರಜಾದಿನವೆಂದು ಗುರುತಿಸಲು ಸೆನೆಟ್ ಸರ್ವಾನುಮತದಿಂದ ಮತ ಹಾಕಿದೆ! ಈ ಬೆಳಕಿನ ಹಬ್ಬವನ್ನು ಆಚರಿಸುವ ಎಲ್ಲಾ ಪೆನ್ಸಿಲ್ವೇನಿಯರೇ: ನಿಮಗೆ ಇಲ್ಲಿ ಮಹತ್ವವಿದೆ. ಈ ಆಚರಣೆಯನ್ನು ಪರಿಚಯಿಸುವಲ್ಲಿ ನಿಮ್ಮೊಂದಿಗೆ ಸೇರಲು ಅವಕಾಶ ನೀಡಿದಕ್ಕೆ @rothman_greg ಧನ್ಯವಾದಗಳು” ಎಂದು ಸೆನೆಟರ್ ನಿಕಿಲ್ ಸವಾಲ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ರಾಜ್ಯ ಸೆನೆಟರ್ ಗ್ರೆಗ್ ರೋಥ್‌ಮನ್ ಮತ್ತು ಸೆನೆಟರ್ ನಿಕಿಲ್ ಸವಾಲ್ ಈ ವರ್ಷದ ಫೆಬ್ರವರಿಯಲ್ಲಿ ಪೆನ್ಸಿಲ್ವೇನಿಯಾದಲ್ಲಿ ದೀಪಾವಳಿಯನ್ನು ಅಧಿಕೃತ ರಾಜ್ಯ ರಜಾದಿನವನ್ನಾಗಿ ಮಾಡಲು ಶಾಸನವನ್ನು ಪರಿಚಯಿಸಿದರು ಎಂದು ಮೈ ಟ್ವಿನ್ ಟೈರ್ಸ್ ವರದಿ ಮಾಡಿದೆ.
The Senate voted unanimously to recognize Diwali as an official holiday! To all Pennsylvanians who celebrate this festival of light and connection: you are seen, you are welcome, you matter. Thank you, @rothman_greg, for the opportunity to join you in introducing this bill. ?? pic.twitter.com/CU6mDb7dYk
— Senator Nikil Saval (@SenatorSaval) April 26, 2023
ಸುಮಾರು 200,000 ದಕ್ಷಿಣ ಏಷ್ಯಾದ ನಿವಾಸಿಗಳು ಪೆನ್ಸಿಲ್ವೇನಿಯಾದಲ್ಲಿ ನೆಲೆಸಿದ್ದಾರೆ, ಅವರಲ್ಲಿ ಹಲವರು ದೀಪಾವಳಿ ಹಬ್ಬವನ್ನು ವಿಜಂಭಣೆಯಿಂದ ಆಚರಿಸುತ್ತಾರೆ ಎಂದು ಮೈ ಟ್ವಿನ್ ಟೈರ್ಸ್ ವರದಿ ಮಾಡಿದೆ.
“ಸಾವಿರಾರು ಪೆನ್ಸಿಲ್ವೇನಿಯನ್ನರು 34 ನೇ ಸೆನೆಟೋರಿಯಲ್ ಜಿಲ್ಲೆಯ ಅನೇಕ ನಿವಾಸಿಗಳನ್ನು ಒಳಗೊಂಡಂತೆ ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಾವಳಿಯನ್ನು ಅಧಿಕೃತ ರಾಜ್ಯ ರಜಾದಿನವೆಂದು ಗುರುತಿಸುವುದು ನಮ್ಮ ಕಾಮನ್ವೆಲ್ತ್ನ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಆಚರಿಸುತ್ತದೆ.” ಎಂದು ರೋಥ್ಮನ್ ಹೇಳಿದರು.
“ಪ್ರತಿ ವರ್ಷ, ನಮ್ಮ ದೇವಾಲಯಗಳು, ಪೂಜಾ ಮನೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಆಚರಿಸಲಾಗುತ್ತದೆ” ಎಂದು ಸವಾಲ್ ಹೇಳಿದರು.
ಇದನ್ನೂ ಓದಿ: ಸ್ಥಳೀಯರಲ್ಲದವರಿಗೆ ಸ್ನೇಹಿಯಲ್ಲದ ನಗರಗಳ ಪಟ್ಟಿಯಲ್ಲಿವೆ ಭಾರತದ ಈ ಎರಡು ನಗರಗಳು
“ಇದು ಕತ್ತಲೆಯ ಮೇಲೆ ಬೆಳಕಿನ ಅಂತ್ಯವಿಲ್ಲದ ಹೋರಾಟವನ್ನು ಪ್ರತಿಬಿಂಬಿಸುವ ಸಮಯ, ನಮಗೆ ಉದ್ದೇಶದ ನವೀಕೃತ ಸ್ಪಷ್ಟತೆಯನ್ನು ನೀಡುತ್ತದೆ. ಈ ಹಬ್ಬವು ಅಧಿಕೃತ ಮನ್ನಣೆಗೆ ಅರ್ಹವಾಗಿದೆ ಇದನ್ನೂ ನಮ್ಮ ಶಾಸನಕ್ಕೆ ಸೇರಿಸಲು ನನಗೆ ಗೌರವವಿದೆ. ಇದನ್ನು ಜಾರಿಗೆ ತರುವಲ್ಲಿ ರೋಥ್‌ಮನ್ ಕೆಲಸ ಮಾಡಿದ್ದಾರೆ, ” ಎಂದು ಸಾವಲ್ ಹೇಳಿದರು.
ಜನರು ದೀಪಾವಳಿಯನ್ನು ಆಚರಿಸುವ ದಿನವು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ, ಆದರೆ ಈ ವರ್ಷ ಇದನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ. ಸೆನೆಟ್ ಬಿಲ್ 402 ಶಾಲೆ ಅಥವಾ ಸರ್ಕಾರಿ ಮುಚ್ಚುವಿಕೆಯ ಅಗತ್ಯವಿಲ್ಲ ಎಂದು ಮೈ ಟ್ವಿನ್ ಟೈರ್ಸ್ ವರದಿ ಮಾಡಿದೆ.