Unfriendly Cities: ಸ್ಥಳೀಯರಲ್ಲದವರಿಗೆ ಸ್ನೇಹಿಯಲ್ಲದ ನಗರಗಳ ಪಟ್ಟಿಯಲ್ಲಿವೆ ಭಾರತದ ಈ ಎರಡು ನಗರಗಳು
ಘಾನಾದ ಅಕ್ರಾ ಸ್ಥಳೀಯರಲ್ಲದವರಿಗಾಗಿ ವಿಶ್ವದ ಅತ್ಯಂತ ಕಡಿಮೆ ಸ್ನೇಹಪರ ನಗರವಾಗಿದೆ. ಇದಕ್ಕೆ 10 ರಲ್ಲಿ ಕೇವಲ 3.12 ಅಂಕ ಸಿಕ್ಕಿದೆ. ಮೊರಾಕೊದ ಮರ್ರಾಕೆಚ್ 3.69 ಅಂಕಗಳೊಂದಿಗೆ ವಿಶ್ವದ ಎರಡನೇ ಕನಿಷ್ಠ ಸ್ನೇಹಪರ ನಗರವಾಗಿ 2 ನೇ ಸ್ಥಾನದಲ್ಲಿದೆ.
ದಿ ಕಮ್ಯೂನಿಟಿ ಸ್ಪಿರಿಟ್ ಇಂಡೆಕ್ಸ್, ಸ್ಥಳೀಯರಲ್ಲದವರಿಗೆ ಸ್ನೇಹಿಯಾಗಿರುವ (friendliness) ನಗರಗಳ ಪಟ್ಟಿಯನ್ನು ತಯಾರಿಸಿದ್ದು ವಿಶ್ವದಾದ್ಯಂತ 53 ನಗರಗಳಿಗೆ ರ್ಯಾಕಿಂಗ್ ನೀಡಿದೆ.ಈ ರೀತಿ ರ್ಯಾಂಕಿಂಗ್ ಗೆ 6 ಮಾನದಂಡಗಳನ್ನು ಬಳಸಲಾಗಿದೆ. ಆನ್ಲೈನ್ ಟ್ಯೂಟರಿಂಗ್ ಮತ್ತು ಭಾಷಾ ಕಲಿಕಾ ಫ್ಲಾಟ್ ಫಾರ್ಮ್ ಆಗಿರುವ Preply ಈ ರ್ಯಾಂಕಿಂಗ್ ಮಾಡಿದೆ. ಸಂದರ್ಶಕರು ಮತ್ತೆ ಹಿಂತಿರುಗಿ ಬಂದ ದರ,ಸುರಕ್ಷತಾ ರೇಟಿಂಗ್‌ಗಳು, LGBTQ+ ಸಮಾನತೆ, ಸಂತೋಷ, ಸಾಮಾನ್ಯ ಭಾಷೆಯ ಮೂಲಕ ಸುಲಭವಾಗಿ ಸಂವಹನ ನಡೆಸುವುದು ಮತ್ತು ಸ್ನೇಹಪರ ಜನ ಹೀಗೆ ಹಲವು ಮಾನದಂಡಗಳಲ್ಲಿ ಈ ರ್ಯಾಂಕಿಂಗ್ ನಿರ್ಧರಿಸಲಾಗಿದೆ. ಯಾವುದೇ ಭಾರತೀಯ ನಗರಗಳು ಸ್ನೇಹಿ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೂ, ಅವುಗಳಲ್ಲಿ ಎರಡು ನಗರಗಳು ಸ್ನೇಹಿಯಲ್ಲದ ಪಟ್ಟಿಯಲ್ಲಿ (unfriendly cities)ಅಗ್ರ ಸ್ಥಾನವನ್ನು ಪಡೆದಿವೆ.
ಘಾನಾದ ಅಕ್ರಾ ಸ್ಥಳೀಯರಲ್ಲದವರಿಗಾಗಿ ವಿಶ್ವದ ಅತ್ಯಂತ ಕಡಿಮೆ ಸ್ನೇಹಪರ ನಗರವಾಗಿದೆ. ಇದಕ್ಕೆ 10 ರಲ್ಲಿ ಕೇವಲ 3.12 ಅಂಕ ಸಿಕ್ಕಿದೆ. ಮೊರಾಕೊದ ಮರ್ರಾಕೆಚ್ 3.69 ಅಂಕಗಳೊಂದಿಗೆ ವಿಶ್ವದ ಎರಡನೇ ಕನಿಷ್ಠ ಸ್ನೇಹಪರ ನಗರವಾಗಿ 2 ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ, ಕೌಲಾಲಂಪುರ್, ರಿಯೊ ಡಿ ಜನೈರೊ ಮತ್ತು ದೆಹಲಿ ಇದೆ.
ಮುಂಬೈ ಶೇ. 3.91 ರಷ್ಟು ಸೌಹಾರ್ದತೆಯ ಜನರನ್ನು ಹೊಂದಿದ್ದರೆ ದೆಹಲಿಯಲ್ಲಿರುವ ಸೌಹಾರ್ದತೆ ಶೇ 3.27. ಕೇವಲ 12 ಪ್ರತಿಶತದಷ್ಟು ಜನರು ಮುಂಬೈಯನ್ನು ಸ್ನೇಹಪರವೆಂದು ಹೇಳಿದರೆ, ದೆಹಲಿ 17 ಪ್ರತಿಶತದಷ್ಟು ಎಂದು ಹೇಳಿದ್ದಾರೆ. ಸಂತೋಷದ ವಿಷಯದಲ್ಲಿ ಮುಂಬೈ 3.78 ಅಂಕ ಗಳಿಸಿದರೆ ದೆಹಲಿ 4.01 ಅಂಕ ಗಳಿಸಿದೆ.
ಸಮೀಕ್ಷೆಯ ಪ್ರಕಾರ, ಟೊರೊಂಟೊ ಮತ್ತು ಸಿಡ್ನಿ 2023 ರಲ್ಲಿ ಸ್ಥಳೀಯರಲ್ಲದವರಿಗಾಗಿ ವಿಶ್ವದ ಅತ್ಯಂತ ಸ್ನೇಹಪರ ನಗರಗಳಾಗಿವೆ. ಇವೆರಡೂ 10 ರಲ್ಲಿ 7.97 ಅಂಕ ಪಡೆದಿವೆ. ಟೊರೊಂಟೊದಲ್ಲಿ ಸಂದರ್ಶಕರ ವಾಪಸಾತಿ ದರ ಶೇ 15. LGBTQ+ ಸಮಾನತೆಯ ಸ್ಕೋರ್ 100 ರಲ್ಲಿ 90 ಆಗಿದೆ. ಆದರೆ ಸಿಡ್ನಿ 100 ರಲ್ಲಿ 65.87 ಅಂಕಗಳೊಂದಿಗೆ ಹೆಚ್ಚಿನ ಸುರಕ್ಷಿತ ನಗರವಾಗಿದ್ದು, LGBTQ+ ಸಮಾನತೆಗೆ 100 ರಲ್ಲಿ 84 ಅಂಕ ಹೊಂದಿದೆ.
ಎಡಿನ್‌ಬರ್ಗ್ ಮತ್ತು ಮ್ಯಾಂಚೆಸ್ಟರ್ ಅನುಕ್ರಮವಾಗಿ ಸ್ಥಳೀಯರಲ್ಲದವರಿಗೆ ವಿಶ್ವದ ಎರಡನೇ ಮತ್ತು ಮೂರನೇ ಸ್ನೇಹಪರ ನಗರಗಳಾಗಿವೆ. ಸುರಕ್ಷತಾ ಸೂಚ್ಯಂಕ ಸ್ಕೋರ್ 100 ರಲ್ಲಿ 68.92 ನೊಂದಿಗೆ ಎಡಿನ್‌ಬರ್ಗ್ 7.78 ರ ಹೆಚ್ಚಿನ ಸ್ನೇಹಪರ ಅಂಕ ಹೊಂದಿದೆ. ಆದರೆ ಮ್ಯಾಂಚೆಸ್ಟರ್ 10 ರಲ್ಲಿ 7.72 ಅಂಕ ಹೊಂದಿದೆ.
ಇದನ್ನೂ ಓದಿ: ಹೈದರಾಬಾದಿನ ಆ ಪುರಾತನ ಕಟ್ಟಡದಲ್ಲಿ ಚಿನ್ನದ ನಿಕ್ಷೇಪಗಳಿವೆಯೇ? ಅದನ್ನು ಕಾಳ ಸರ್ಪಗಳು ರಕ್ಷಿಸುತ್ತಿವೆಯಾ?
ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಸಲಹೆಗಳಿಗಾಗಿ ಜನರು ಹುಡುಕುತ್ತಿರುವ ವಿಶ್ವದ ಅಗ್ರ ನಗರಗಳನ್ನು ಸಮೀಕ್ಷೆಯು ಶ್ರೇಣೀಕರಿಸಿದೆ. ಸ್ನೇಹಿತರನ್ನು ಹೇಗೆ ಮಾಡಿಕೊಳ್ಳುವುದು ಎಂಬ 23,160 ವಾರ್ಷಿಕ ಹುಡುಕಾಟಗಳಲ್ಲಿ ಸಾವೋ ಪೌಲೊ ಅಗ್ರ ಸ್ಥಾನದಲ್ಲಿದ್ದರೆ ನ್ಯೂಯಾರ್ಕ್ ಮತ್ತು ಪ್ಯಾರಿಸ್ ನಂತರದ ಸ್ಥಾನದಲ್ಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Thu, 27 April 23