AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದಿನ ಆ ಪುರಾತನ ಕಟ್ಟಡದಲ್ಲಿ ಚಿನ್ನದ ನಿಕ್ಷೇಪಗಳಿವೆಯೇ? ಅದನ್ನು ಕಾಳ ಸರ್ಪಗಳು ರಕ್ಷಿಸುತ್ತಿವೆಯಾ?

ಹೈದರಾಬಾದ್ ಗೋಲ್ಕೊಂಡ ಯುಗದ ಮುಷ್ಕ್ ಮಹಲ್‌ನಲ್ಲಿ ದೇವ ನಿಧಿ ಇದೆಯಾ? ಅದನ್ನು ಜೀವಂತ ಕಾಳ ಸರ್ಪಗಳು ಕಾಯುತ್ತಿವೆಯಾ?

ಹೈದರಾಬಾದಿನ ಆ ಪುರಾತನ ಕಟ್ಟಡದಲ್ಲಿ ಚಿನ್ನದ ನಿಕ್ಷೇಪಗಳಿವೆಯೇ? ಅದನ್ನು ಕಾಳ ಸರ್ಪಗಳು ರಕ್ಷಿಸುತ್ತಿವೆಯಾ?
ಹೈದರಾಬಾದ್ ಗೋಲ್ಕೊಂಡ ಯುಗದ ಮುಷ್ಕ್ ಮಹಲ್‌ನಲ್ಲಿ ದೇವ ನಿಧಿ ಇದೆಯಾ?
Follow us
ಸಾಧು ಶ್ರೀನಾಥ್​
|

Updated on: Apr 27, 2023 | 12:55 PM

ಹೈದರಾಬಾದ್ (Hyderabad)ನ ರಾಜೇಂದ್ರನಗರದಲ್ಲಿರುವ ಮುಷ್ಕ್ ಮಹಲ್ ನಲ್ಲಿ ಗುಪ್ತ ನಿಧಿಗಳಿವೆಯೇ? ಕರಿ ನಾಗರ ಹಾವುಗಳು ಅದಕ್ಕೆ ರಕ್ಷಣೆ ನೀಡುತ್ತಿವೆಯಾ? ಇದು ಈಗ ಹೈದರಾಬಾದಿನ ಹಾಟ್ ಟಾಪಿಕ್ ಆಗಿದೆ. 17ನೇ ಶತಮಾನದಲ್ಲಿ (1518-1687) ಗೋಲ್ಕೊಂಡ ಭಾಗದಲ್ಲಿ ವಾಸವಿದ್ದ ಸುಗಂಧ ದ್ರವ್ಯದ ವ್ಯಾಪಾರಿ ಮಿಯಾನ್ ಮುಷ್ಕ್ ನಿರ್ಮಿಸಿದ ಐತಿಹಾಸಿಕ ಮುಷ್ಕ್ ಮಹಲ್ ಕಟ್ಟಡದೊಳಕ್ಕೆ (Golconda era Mushk Mahal) ಇತ್ತೀಚೆಗೆ ಹೋಗಿದ್ದ ಕೆಲವು ಸ್ಥಳೀಯ ಯುವಕರು ಅಲ್ಲಿ ಒಂದು ಸಣ್ಣ ಸುರಂಗವನ್ನು ಕಮಡಿದ್ದಾರೆ.

ಅದರಲ್ಲಿ ನಿಧಿ ಅಡಗಿರಬಹುದೆಂದು ನಂಬಿ ಒಳಗೆ ಹೋಗಲು ಯತ್ನಿಸಿದಾಗ 11 ಅಡಿ ಉದ್ದ ಬೃಹತ್ ಹಾವು ಕಂಡಿದೆ. ಅದನ್ನು ಕಂಡು ಬೆಚ್ಚಿಬಿದ್ದ ಯುವಕರು ಹೊರಗೆ ಓಡಿ ಬಂದಿದ್ದಾರೆ. ಈ ವಿಷಯ ಇಡೀ ಊರಿಗೆ ಹಬ್ಬಿ ಸುರಂಗ ಮತ್ತು ಅದರಲ್ಲಿ ಇರಬಹುದಾದ ನಿಧಿಯ ಬಗ್ಗೆ ವಿಸ್ತಾರದ ಚರ್ಚೆ ಆರಂಭವಾಗಿದೆ. ಗುಪ್ತ ನಿಧಿ (Treasure) ಪತ್ತೆಯಾಗಿರುವ ಬಗ್ಗೆ ನಿನ್ನೆ ಬುಧವಾರ ವದಂತಿಗಳು (rumours) ಎದ್ದಿವೆ.

ಹೈದರಾಬಾದ್ ಗೋಲ್ಕೊಂಡ ಯುಗದ ಮುಷ್ಕ್ ಮಹಲ್‌ನಲ್ಲಿ ದೇವ ನಿಧಿ ಇದೆಯಾ? ಈ ಕುರಿತಾದ ಟಿವಿ9 ತೆಲುಗು ಸುದ್ದಿ ಪ್ರಸಾರ ಮಾಡಿದೆ. ವಿಡಿಯೋ ವೀಕ್ಷಿಲು ಈ ಲಿಂಕ್ ಕ್ಲಿಕ್ ಮಾಡಿ.

ಹೈದರಾಬಾದಿನ ಆ ಪುರಾತನ ಕಟ್ಟಡದಲ್ಲಿ ಚಿನ್ನದ ನಿಕ್ಷೇಪಗಳಿವೆಯೇ? ಟಿವಿ9 ತೆಲುಗು ಪ್ರಸಾರ ಮಾಡಿದ ಈ ವರದಿ ನೋಡಿ: ಸುರಂಗದೊಳಗೆ ಅಪಾರ ಪ್ರಮಾಣದ ಗುಪ್ತ ನಿಧಿ ಅಡಗಿದೆಯೆಂದು ಸ್ಥಳೀಯರು ಬಲವಾದ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ನಿಕ್ಷೇಪಗಳನ್ನು ಕಾಳನಾಗ ಕಾವಲು ಕಾಯುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಸರಕಾರಿ ಅಧಿಕಾರಿಗಳು ಶೋಧ ಕೈಗೊಂಡು, ಸತ್ಯಾಂಶ ಹೊರತರಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ