ಔರಂಗಾಬಾದ್‌: ಹಿಜಾಬ್ ಧರಿಸಿದ ಮಹಿಳೆಗೆ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್; ಮೂವರು ವ್ಯಕ್ತಿಗಳ ಬಂಧನ

ಪೊಲೀಸರು ವಿಡಿಯೊ ನೋಡಿ ಮಹಿಳೆಯನ್ನು ಗುರುತಿಸಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಆದರೆ ಆಕೆ ದೂರು ನೀಡಲು ನಿರಾಕರಿಸಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಔರಂಗಾಬಾದ್‌: ಹಿಜಾಬ್ ಧರಿಸಿದ ಮಹಿಳೆಗೆ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್; ಮೂವರು ವ್ಯಕ್ತಿಗಳ ಬಂಧನ
ಮಹಿಳೆಗೆ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 27, 2023 | 1:38 PM

ಮಹಾರಾಷ್ಟ್ರದ(Maharashtra) ಔರಂಗಾಬಾದ್‌ನಲ್ಲಿ (Aurangabad)ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆಗೆ (Muslim) ಕಿರುಕುಳ ನೀಡಿದ ಮೂವರು ವ್ಯಕ್ತಿಗಳನ್ನುಪೊಲೀಸರು ಬಂಧಿಸಿದ್ದಾರೆ. ಮಕೈ ಗೇಟ್ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಈ ವಿಡಿಯೊ ವೈರಲ್ ಆಗಿದೆ.ಮಹಿಳೆ ಸ್ವತಃ ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೇಗಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ. ವಿಡಿಯೊ ಪ್ರಕಾರ ಯುವಕರ ಗುಂಪೊಂದು ಮಹಿಳೆಯನ್ನು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡಿದ್ದಾರೆ. ಮಹಿಳೆ ತನ್ನ ಫೋನ್ ಹಿಂತಿರುಗಿಸುವಂತೆ ಮನವಿ ಮಾಡುವುದನ್ನು ಕಾಣಬಹುದು. ಯುವತಿ ಹಿಂದೂ ಯುವಕನೊಂದಿಗೆ ತಿರುಗಾಡುತ್ತಿದ್ದಾಳೆ ಎಂದು ಶಂಕಿಸಿದ ಯುವಕರು ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ. ಮಹಿಳೆ ಔರಂಗಾಬಾದ್‌ನ ಪ್ರಸಿದ್ಧ ಬೀಬಿ ಕಾ ಮಕ್ಬಾರಾವನ್ನು ಭೇಟಿ ಮಾಡಲು ಬಂದಿದ್ದರು.

ಈ ಯುವಕರ ಗುಂಪು ಆಕೆಯನ್ನು ಕೆಟ್ಟ ಮಾತುಗಳಿಂದ ಹೀಯಾಳಿಸುತ್ತಿರುವುದನ್ನೂ ಕೇಳಬಹುದು.

ಪೊಲೀಸರು ವಿಡಿಯೊ ನೋಡಿ ಮಹಿಳೆಯನ್ನು ಗುರುತಿಸಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಆದರೆ ಆಕೆ ದೂರು ನೀಡಲು ನಿರಾಕರಿಸಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದನ್ನೂ ಓದಿ: Madhya Pradesh: ಮದುವೆಯಾಗು ಎಂದು ಯುವತಿಗೆ ಕಿರುಕುಳ: ಒಪ್ಪದಿದ್ದಕ್ಕೆ ರಸ್ತೆ ಮಧ್ಯೆ ಗುಂಡು ಹಾರಿಸಿದ ರೋಡ್ ರೋಮಿಯೋ

ಪೊಲೀಸರು ಕ್ರಮ ಕೈಗೊಂಡಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ದೀಪಕ್ ಗಿರ್ಹೆ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ