Nepal Earthquake: ನೇಪಾಳದಲ್ಲಿ ಅವಳಿ ಭೂಕಂಪ: ಹಿಮಾಲಯದಲ್ಲಿ ಕಂಪನದ ಅನುಭವ

ಭಾರತದ ನೆರೆ ರಾಷ್ಟ್ರ ನೇಪಾಳ(Nepal)ದಲ್ಲಿ ಅವಳಿ ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.8 ಹಾಗೂ 5.9 ತೀವ್ರತೆ ದಾಖಲಾಗಿದೆ.

Nepal Earthquake: ನೇಪಾಳದಲ್ಲಿ ಅವಳಿ ಭೂಕಂಪ: ಹಿಮಾಲಯದಲ್ಲಿ ಕಂಪನದ ಅನುಭವ
ಭೂಕಂಪ
Follow us
|

Updated on:Apr 28, 2023 | 9:30 AM

ಭಾರತದ ನೆರೆ ರಾಷ್ಟ್ರ ನೇಪಾಳ(Nepal)ದಲ್ಲಿ ಅವಳಿ ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.8 ಹಾಗೂ 5.9 ತೀವ್ರತೆ ದಾಖಲಾಗಿದೆ. ನೇಪಾಳ ರಾಜಧಾನಿ ಕಠ್ಮಂಡುವಿನ ವಾಯುವ್ಯದಲ್ಲಿ 800 ಕಿಮೀ ದೂರದಲ್ಲಿ ಇರುವ ಬಜೂರಾ ಜಿಲ್ಲೆಯ ದಹಾಕೋಟ್‌ದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ. ಮೊದಲ ಭೂಕಂಪವು ರಾತ್ರಿ 11.58ಕ್ಕೆ ಅಪ್ಪಳಿಸಿತ್ತು, ಮತ್ತೊಂದು ಮಧ್ಯರಾತ್ರಿ 1.30ರ ವೇಳೆಗೆ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಬಜೂರಾದ ಜಿಲ್ಲಾ ಪೊಲೀಸ್ ಕಚೇರಿ ಪ್ರಕಾರ, ಭೂಕಂಪನದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ನಡುಗಿದ್ದು, ಸ್ಥಳೀಯರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪಶ್ಚಿಮ ನೇಪಾಳದಲ್ಲಿನ ಬಜೂರಾ ನೆರೆಹೊರೆಯ ಜಿಲ್ಲೆಗಳಲ್ಲೂ ಭೂಮಿ ನಡುಗಿದ ಅನುಭವ ಜನರಿಗೆ ಆಗಿದೆ. ನಾವು ಭೂಕಂಪದ ಪರಿಣಾಮವನ್ನು ಖಚಿತಪಡಿಸುತ್ತಿದ್ದೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ಓದಿ: Fiji Earthquake: ಫಿಜಿಯಲ್ಲಿ ಕಂಪಿಸಿದ ಭೂಮಿ: 6.3 ತೀವ್ರತೆ ದಾಖಲು

2015ರಲ್ಲಿ ವಿನಾಶಕಾರಿ ಅವಳಿ ಭೂಕಂಪ ಭೂಕಂಪ ಸೂಕ್ಷ್ಮ ಪ್ರದೇಶವೆಂದು ನೇಪಾಳವನ್ನು ಗುರುತಿಸಲಾಗಿದೆ. ಏಪ್ರಿಲ್ 2015ರಲ್ಲಿ ನೇಪಾಳದಲ್ಲಿ ಇದೇ ರೀತಿ 7.8 ಮತ್ತು 8.1 ತೀವ್ರತೆಯ ಅವಳಿ ಭೂಕಂಪಗಳು ಸಂಭವಿಸಿದ್ದವು. ದಶಕಗಳಲ್ಲಿಯೇ ಅತ್ಯಂತ ವಿನಾಶಕಾರಿ ದುರಂತವಾಗಿದ್ದ ಅದರಲ್ಲಿ 8,964 ಜನರು ಸಾವನ್ನಪ್ಪಿದ್ದರೆ, 21,952 ಜನರು ಗಾಯಗೊಂಡಿದ್ದರು. ಪ್ರಬಲ ಭೂಕಂಪಗಳಿಂದ ನೇಪಾಳದ ಹಲವು ಜಿಲ್ಲೆಗಳಲ್ಲಿ ಸಾವಿರಾರು ಮನೆಗಳು ನೆಲಸಮವಾಗಿದ್ದವು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:30 am, Fri, 28 April 23

ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು