ನ್ಯೂಸ್​-9 ಗ್ಲೋಬಲ್ ಸಮ್ಮಿಟ್: ವ್ಯಾಪಾರ, ರಾಜಕೀಯದಿಂದ ಸಿನಿಮಾವರೆಗೆ ವಿವಿಧ ರಂಗಗಳಲ್ಲಿ ಛಾಪು ಮೂಡಿಸಿರುವ ಮಹಿಳೆಯರಿಗೆ ವಿಶೇಷ ಗೌರವ

News9 Global Summit: ಯುಎಇಯಲ್ಲಿ ನ್ಯೂಸ್​​-9 ಗ್ಲೋಬಲ್ ಸಮ್ಮಿಟ್(News9 Global Summit) ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. SHEconomy ಎಂಬ ವಿಷಯದ ಮೇಲೆ ಶೃಂಗಸಭೆ ಆಯೋಜಿಸಲಾಗಿತ್ತು. ಈ ಶೃಂಗಸಭೆಯಲ್ಲಿ ವ್ಯಾಪಾರ, ರಾಜಕೀಯದಿಂದ ಸಿನಿಮಾದವರೆಗೆ ವಿವಿಧ ರಂಗಗಳಲ್ಲಿ ತನ್ನ ಪ್ರತಿಭೆಯ ಮೂಲಕ ಛಾಪು ಮೂಡಿಸಿರುವ ಮಹಿಳೆಯರನ್ನು ಗೌರವಿಸಲಾಯಿತು.

ನ್ಯೂಸ್​-9 ಗ್ಲೋಬಲ್ ಸಮ್ಮಿಟ್: ವ್ಯಾಪಾರ, ರಾಜಕೀಯದಿಂದ ಸಿನಿಮಾವರೆಗೆ ವಿವಿಧ ರಂಗಗಳಲ್ಲಿ ಛಾಪು ಮೂಡಿಸಿರುವ ಮಹಿಳೆಯರಿಗೆ ವಿಶೇಷ ಗೌರವ
ನ್ಯೂಸ್​9 ಗ್ಲೋಬಲ್ ಸಮ್ಮಿಟ್

Updated on: Aug 28, 2025 | 12:26 PM

ಅಬುಧಾಮಿ, ಆಗಸ್ಟ್​ 28: ಯುಎಇಯಲ್ಲಿ ನ್ಯೂಸ್​​-9 ಗ್ಲೋಬಲ್ ಸಮ್ಮಿಟ್(News9 Global Summit) ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. SHEconomy ಎಂಬ ವಿಷಯದ ಮೇಲೆ ಶೃಂಗಸಭೆ ಆಯೋಜಿಸಲಾಗಿತ್ತು. ಈ ಶೃಂಗಸಭೆಯಲ್ಲಿ ವ್ಯಾಪಾರ, ರಾಜಕೀಯದಿಂದ ಸಿನಿಮಾದವರೆಗೆ ವಿವಿಧ ರಂಗಗಳಲ್ಲಿ ತನ್ನ ಪ್ರತಿಭೆಯ ಮೂಲಕ ಛಾಪು ಮೂಡಿಸಿರುವ ಮಹಿಳೆಯರನ್ನು ಗೌರವಿಸಲಾಯಿತು.

ಮಹಿಳೆಯರು ಇನ್ನು ಮುಂದೆ ಕೇವಲ ಅಭಿವೃದ್ಧಿಯ ಭಾಗವಾಗಿ ನೋಡುವುದಿಲ್ಲ, ಬದಲಿಗೆ ಅಭವೃದ್ಧಿ ಪಥದಲ್ಲಿ ಎಲ್ಲರ ಸರಿಸಮಾನರಾಗಿ ಮಹಿಳೆ ಇರಲಿದ್ದಾಳೆ ಎಂಬ ಕಲ್ಪನೆಯನ್ನು ಕಾರ್ಯಕ್ರಮವು ಒತ್ತಿಹೇಳಿತು. ಈ ಕಾರ್ಯಕ್ರಮದಲ್ಲಿ ಇದರಲ್ಲಿ Shunya.ai, FICCI, IPF ಮತ್ತು GCC ಯ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಕ್ಲಬ್ ಸೇರಿದಂತೆ ಪ್ರಮುಖ ಕಂಪನಿಗಳು ಪಾಲ್ಗೊಂಡಿದ್ದವು.

ಟಿವಿ9 ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಮಾತನಾಡಿ, ಜಗತ್ತಿಗೆ ಸಂದೇಶ ಸಾರುವ ಇಂತಹ ಜಾಗತಿಕ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕೆಂದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಖುದ್ದಾಗಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದ ಕಾರಣ ಸಂದೇಶವನ್ನು ಕಳುಹಿಸಿದ್ದರು. ಅದರಲ್ಲಿ ಆಡಳಿತ ಮತ್ತು ಸುಧಾರಣೆಯಲ್ಲಿ ಮಹಿಳಾ ನಾಯಕತ್ವವನ್ನು ಒತ್ತಿ ಹೇಳಿದರು.

ಯುಎಇಯಲ್ಲಿ ಭಾರತದ ರಾಯಭಾರಿ ಸಂಜಯ್ ಸುಧೀರ್ ಅವರು ರಾಜತಾಂತ್ರಿಕತೆಯು ಭಾರತ-ಯುಎಇ ಸಂಬಂಧದಂತಹ ಅಂತರ್ಗತ ಪಾಲುದಾರಿಕೆಗಳನ್ನು ಹೇಗೆ ಬಲಪಡಿಸುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದರು.

ಮತ್ತಷ್ಟು ಓದಿ: ಮಹಿಳೆಯರು ಮುಂದೆ ಬಂದಾಗ ಮಾನವೀಯತೆಯೂ ಮೇಲಕ್ಕೇರುತ್ತದೆ; ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಟಿವಿ 9 ನೆಟ್‌ವರ್ಕ್ ಎಂಡಿ ಬರುಣ್ ದಾಸ್

ನಟಿ ರಿಚಾ ಚಡ್ಡಾ ಅವರು ತಮ್ಮ ಸಿನಿಮಾ ಪ್ರಯಾಣದ ಬಗ್ಗೆ ಚರ್ಚಿಸುವ ಒಂದು ಫೈರ್‌ಸೈಡ್ ಚಾಟ್‌ನಲ್ಲಿ ಭಾಗವಹಿಸಿದ್ದರು, ಗಾಯಕಿ ಸೋನಾ ಮೊಹಾಪಾತ್ರ ಕೂಡ ಸ್ಪೂರ್ತಿದಾಯಕ ಸಂವಾದದಲ್ಲಿ ಭಾಗವಹಿಸಿದ್ದರು.

ಮನ್ ದೇಶಿ ಫೌಂಡೇಶನ್‌ನ ಚೇತನಾ ಗಾಲಾ ಸಿನ್ಹಾ, ಜೆಟ್‌ಸೆಟ್‌ಗೋದ ಕನಿಕಾ ಟೆಕ್ರಿವಾಲ್, ಫ್ರಾಂಟಿಯರ್ ಮಾರ್ಕೆಟ್ಸ್‌ನ ಅಜಯ್ತಾ ಶಾ, ಡಾ. ಸುದ್ ಅಲ್ ಶಮ್ಸಿ ಮತ್ತು ಡಾ. ಸೋನಾಲಿ ದತ್ತಾ ಸೇರಿದಂತೆ ಹಲವಾರು ಪ್ಯಾನೆಲ್ ಚರ್ಚೆಗಳಲ್ಲಿ ಮಹಿಳಾ ಉದ್ಯಮಿಗಳು ಮತ್ತು ವ್ಯಾಪಾರ ಮುಖಂಡರು ಭಾಗವಹಿಸಿದ್ದರು.

ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತರಲ್ಲಿ ಕನಿಕಾ ಟೆಕ್ರಿವಾಲ್, ಅಜೈತಾ ಶಾ, ಶಫೀನಾ ಯೂಸುಫ್ ಅಲಿ, ಲಾವಣ್ಯ ನಲಿ, ಚೇತನ ಗಲಾ ಸಿನ್ಹಾ, ಡಾ ಸನಾ ಸಜನ್, ಡಾ ಸುವಾದ್ ಅಲ್ ಶಮ್ಸಿ, ನೈಲಾ ಅಲ್ ಬಲೂಶಿ, ವಕೀಲ ಬಿಂದು ಚೆಟ್ಟೂರ್ ಮತ್ತು ಸೋನಾ ಮೊಹಾಪಾತ್ರ ಸೇರಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:23 pm, Thu, 28 August 25