Social Media Day 2021: ಸಾಮಾಜಿಕ ಮಾಧ್ಯಮ ದಿನದ ಇತಿಹಾಸದ ಜತೆಗೆ ಪ್ರಾಮುಖ್ಯತೆಯನ್ನು ತಿಳಿಯಿರಿ

| Updated By: shruti hegde

Updated on: Jun 30, 2021 | 10:17 AM

ಸಾಮಾಜಿಕ ಮಾಧ್ಯಮ ದಿನ 2021: ಸರಿಯಾದ ಸಮಯದಲ್ಲಿ ಮಹತ್ವದ ವಿಷಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನುಸಾಮಾಜಿಕ ಮಾಧ್ಯಮಗಳು ಮಾಡುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸಿ ಆದಷ್ಟು ಜನರ ಹಿತವನ್ನು ಬಯಸುತ್ತಾ ಸಹಾಯ ಮಾಡುತ್ತಾ ಬಂದಿದೆ.

Social Media Day 2021: ಸಾಮಾಜಿಕ ಮಾಧ್ಯಮ ದಿನದ ಇತಿಹಾಸದ ಜತೆಗೆ ಪ್ರಾಮುಖ್ಯತೆಯನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

20 ವರ್ಷದ ಯುವಕರಿಂದ 60 ವರ್ಷದ ವಯಸ್ಕರವೆಗೂ ಸಹ ಸಾಮಾಜಿಕ ಜಾಲತಾಣ ಅವಿಭಾಜ್ಯ ಅಂಗವಾಗಿದೆ. ವಿಶ್ವದಾದ್ಯಂತ ಯಾವುದೇ ಮೂಲೆಯಲ್ಲಿರುವ ತಮ್ಮ ಸಂಬಂಧಿಕರೊಡನೆ ಅಥವಾ ಸ್ನೇಹಿತರೊಡನೆ ಸಂವಹನ ನಡೆಸುವ ಒಂದು ವಿಶೇಷ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವರ್ಷ ಜೂನ್​ 30ನೇ ತಾರೀಕಿನಂದು ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸಲಾಗುತ್ತದೆ.

ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನು ಸಂಪರ್ಕಿಸುವುದರಿಂದ ಹಿಡಿದು ಜನರಿಗೆ ಮಾಹಿತಿಯನ್ನು ಅಥವಾ ಸುದ್ದಿಯನ್ನು ನೀಡಲು ಪತ್ರಕರ್ತರಿಗೆ ಸಾಮಾಜಿಕ ಜಾಲತಾಣ ಸಹಾಯಕವಾಗಿದೆ. ಪ್ರಸ್ತುತದಲ್ಲಿ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯವಾಣಿಯಾಗಿಯೂ ಕೆಲಸ ನಿರ್ವಹಿಸಿದೆ. ಇಂದು ಸಾಮಾಜಿಕ ಜಾಲತಾಣದ ಮಹತ್ವ ಮತ್ತು ಪ್ರಯೋಜನಗಳ ಕುರಿತಾಗಿ ತಿಳಿಯಲೇ ಬೇಕಾದ ದಿನ.

ಸಾಮಾಜಿಕ ಮಾಧ್ಯಮ ದಿನದ ಇತಿಹಾಸ
ಜಾಗತಿಕ ಸಂವಹನ ಮತ್ತು ಪ್ರಾಮುಖ್ಯತೆಯನ್ನು ಸಾರುವ ದೃಷ್ಟಿಯಿಂದ 2010 ಜೂನ್​ 30ರಂದು ಮಾಷಬಲ್​ ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಿಸಿದರು. ಮೊದಲ ಸಾಮಾಜಿಕ ವೇದಿಕೆಯಾದ ಸಿಕ್ಸ್​ಡಿಗ್ರೀಸ್​ಅನ್ನು 1997ರಲ್ಲಿ ಆಂಡ್ರ್ಯೂ ವೈನ್​ರಿಚ್​ ಪ್ರಾರಂಭಿಸಿದರು. ಇದರಲ್ಲಿ ಮೊದಲಿಗೆ ವೆಬ್​ಸೈಟ್​ ಬಳಕೆದಾರರಿಗೆ ತಮ್ಮ ಸ್ನೇಹಿತರು, ಕುಟುಂಬದವರನ್ನು ಸೇರಿಸಲು ಅವಕಾಶ ಮಾಡಿಕೊಡಲಾಯಿತು. ನಂತರ ಶಾಲಾ ಅಂಗಸಂಸ್ಥೆಗಳು, ಪ್ರೊಫೈಲ್​ಗಳಂತಹ ವಿವಿಧ ವೈಶಿಷ್ಟ್ಯವನ್ನು ಜತೆಗೆ ಒಂದು ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿತ್ತು. 2001ರಲ್ಲಿ ಈ ವೇದಿಕೆ ಮುಚ್ಚಲ್ಪಟ್ಟಿತು.

ಆರಂಭದಲ್ಲಿ ಫೇಸ್​ಬುಕ್​ಅನ್ನು ಜನರು ಸಂವಹನ ನಡೆಸಲು ಬಳಸುತ್ತಿದ್ದರು. ಇದೀಗ ಅಭಿವೃದ್ಧಿ ಹೊಂದುತ್ತಿರುವ ಯುಗದಲ್ಲಿ ಟ್ವಿಟರ್, ಇನ್​ಸ್ಟಾಗ್ರಾಂ, ಲಿಂಕ್ಡ್​ಇನ್​ನಂತಹ ಅನೇಕ ಸಾಮಾಜಿಕ ವೇದಿಕೆಗಳು ಹುಟ್ಟಿಕೊಂಡಿವೆ.

ಸಾಮಾಜಿಕ ಮಾಧ್ಯಮ ದಿನದ ಮಹತ್ವ
ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರಾಮುಖ್ಯತೆ ಮತ್ತು ಅವುಗಳು ನಮ್ಮ ದೈನಂದಿನ ಜೀವನದ ಮೇಲೆ ಬೀರುವ ಪ್ರಭಾವವನ್ನು ಎತ್ತಿ ಹಿಡಿಯಲು ಸಾಮಾಜಿಕ ಮಾಧ್ಯಮ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ನಡೆದ ಘಟನೆಯನ್ನು ಕುಳಿತಲ್ಲಿಯೇ ತಿಳಿಸುವ ಸಾಮಾಜಿಕ ಮಾಧ್ಯಮದ ಮಹತ್ವದ ಕುರಿತಾಗಿ ಅವಲೋಕಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿ ನಡೆಯುವ ಎಲ್ಲಾ ಮಹತ್ವ ವಿಚಾರಗಳು ಈಗ ಸಾಮಾಜಿಕ ಮಾಧ್ಯಮದ ಮೂಲಕ ಸಿಗುತ್ತಿದೆ. ಇಷ್ಟು ಸುಲಭದಲ್ಲಿ ಪ್ರತಿಯೊಂದು ವಿಷಯವನ್ನು ತಿಳಿಸಿ ಕೊಡುತ್ತಿರುವ ಮಾಧ್ಯಮದ ಪ್ರಾಮುಖ್ಯತೆಯ ಕುರಿತಾಗಿ ತಿಳಿಯುವುದೇ ಈ ದಿನವನ್ನು ಆಚರಿಸುವ ಉದ್ದೇಶ.

ಕೊವಿಡ್​ ಸಾಂಕ್ರಾಮಿಕದ ಸಮಯದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಯ ಅವಶ್ಯಕತೆ ಮತ್ತು ಆಮ್ಲಜನಕದ ಸಹಾಯ ಇರುವವರಿಗೆ ಭರವಸೆಯ ಕಿರಣವಾಗಿ ಸಾಮಾಜಿಕ ಮಾಧ್ಯಮ ಕೆಲಸ ನಿರ್ವಹಿಸಿದೆ. ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅವಶ್ಯಕತೆಗಳು ಮತ್ತು ಅನುಭವಗಳನ್ನು ಇತರಿಗೆ ತಿಳಿಸಲು ಮತ್ತು ಕೊವಿಡ್​-19 ಸಾಂಕ್ರಾಮಿಕದ ಕುರಿತಾಗಿ ಜನರಿಗೆ ತಿಳಿ ಹೇಳಲು ಮುಖ್ಯ ವೇದಿಕಾಯಿತು.

ಸರಿಯಾದ ಸಮಯದಲ್ಲಿ ಮಹತ್ವದ ವಿಷಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನುಸಾಮಾಜಿಕ ಮಾಧ್ಯಮಗಳು ಮಾಡುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸಿ ಆದಷ್ಟು ಜನರ ಹಿತವನ್ನು ಬಯಸುತ್ತಾ ಸಹಾಯ ಮಾಡುತ್ತಾ ಬಂದಿದೆ. ವರದಿಯ ಪ್ರಕಾರ ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ವಾಟ್ಸಾಪ್​-53 ಕೋಟಿ, ಯೂಟ್ಯೂಬ್​-44.8 ಕೋಟಿ, ಫೇಸ್​ಬುಕ್​-41 ಕೋಟಿ, ಇನ್​ಸ್ಟಾಗ್ರಾಂ-21 ಕೊಟಿ, ಟ್ವಿಟರ್​-1,75 ಕೋಟಿ ಬಳಕೆದಾರರಿದ್ದಾರೆ.

ಇದನ್ನೂ ಓದಿ:

ಸಾಮಾಜಿಕ ಮಾಧ್ಯಮಗಳಲ್ಲಿ ಪರೋಕ್ಷ ಪ್ರಚಾರದ ಪೋಸ್ಟ್ ಹಾಕುವ ಪ್ರಭಾವಶಾಲಿಗಳಿಗಾಗಿ ಹೊಸ ಮಾರ್ಗಸೂಚಿ..

ಕೊವಿಡ್ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಪೋಸ್ಟ್​ಗಳನ್ನು ತೆಗೆದು ಹಾಕಲು ಸಾಮಾಜಿಕ ಮಾಧ್ಯಮಗಳಿಗೆ ಐಟಿ ಸಚಿವಾಲಯ ಸೂಚನೆ