ಫಿನ್ಲೆಂಡ್
ವಿಶ್ವದ ಅತ್ಯಂತ ಸಂತೋಷ ಭರಿತ ರಾಷ್ಟ್ರ(World’s Happiest Countries )ಗಳ ಪಟ್ಟಿ ಬಿಡುಗಡೆಯಾಗಿದೆ. ದೇಶವು ಸಂಪದ್ಭರಿತವಾಗಿರುವುದರೊಂದಿಗೆ ಸಂತೋಷವಾಗಿರುವುದು ಕೂಡ ಮುಖ್ಯವಾಗುತ್ತದೆ. ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಏರುಪೇರುಗಳನ್ನು ಕಾಣುವುದು ಸಹಜ ಆದರೆ ಕಷ್ಟದಲ್ಲಿ ಎದೆಗುಂದದೆ ಹೇಗಿದ್ದೇವೋ ಹಾಗೇ ಇದ್ದರೆ ಎಂಥಾ ನೋವು ಕೂಡ ಮಾಯವಾಗುವುದು.
ಇದೀಗ ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಪಟ್ಟಿ ನಮ್ಮ ಕಣ್ಣಮುಂದಿದೆ ಸತತ ಏಳನೇ ವರ್ಷವೂ ಕೂಡ ಫಿನ್ಲೆಂಡ್ ಅತ್ಯಂತ ಸಂತೋಷ ಭರಿತವಾದ ದೇಶ ಎನ್ನುವ ಖ್ಯಾತಿಯನ್ನು ಉಳಿಸಿಕೊಂಡಿದೆ. ಭಾರತದ ಸ್ಥಿತಿಯೂ ಸುಧಾರಿಸಿದೆ 2022ರಲ್ಲಿ 136ನೇ ಸ್ಥಾನದಲ್ಲಿದ್ದ ಭಾರತ ಈಗ 126ನೇ ಸ್ಥಾನಕ್ಕೆ ಇಳಿದಿದೆ. ಅಫ್ಘಾನಿಸ್ತಾನವು ಅತೃಪ್ತಿಕರ ರಾಷ್ಟ್ರವೆಂದು ಹೇಳಲಾಗಿದೆ.
ಯುರೋಪಿಯನ್ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಮುಂದುವರೆದಿವೆ, ಸರ್ಬಿಯಾ, ಬಲ್ಗೇರಿಯಾ ಹಾಗೂ ರೊಮೇನಿಯಾ ರಾಷ್ಟ್ರಗಳು ಎತ್ತರದ ಸ್ಥಾನದಲ್ಲಿವೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ಫಿನ್ಲೆಂಡ್ಗಿಂತ ಹಿಂದುಳಿದಿವೆ. ಮೊದಲ ಬಾರಿಗೆ, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗಳು ಟಾಪ್ 20 ಸಂತೋಷದ ರಾಷ್ಟ್ರಗಳಲ್ಲಿ ಇರಲಿಲ್ಲ, ಕ್ರಮವಾಗಿ 23 ಮತ್ತು 24 ನೇ ಸ್ಥಾನದಲ್ಲಿವೆ. ಕೋಸ್ಟರಿಕಾ ಮತ್ತು ಕುವೈತ್ 12 ಮತ್ತು 13 ರಲ್ಲಿ ಅಗ್ರ 20 ರೊಳಗೆ ಪ್ರವೇಶಿಸಿವೆ.
ಟಾಪ್ 10 ದೇಶಗಳಲ್ಲಿ ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಮಾತ್ರ 15 ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಟಾಪ್ 20 ರಲ್ಲಿ, ಕೆನಡಾ ಮತ್ತು ಯುಕೆ ಮಾತ್ರ 30 ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ.
ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ, ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನೂ ಕೂಡ ಪರಿಗಣಿಸಲಾಗಿದೆ.
ಉತ್ತರ ಅಮೇರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ, 2006-10 ರಿಂದ 30 ವರ್ಷದೊಳಗಿನ ಗುಂಪುಗಳ ನಡುವೆ ಸಂತೋಷವು ಕುಸಿದಿದೆ, ಹಳೆಯ ತಲೆಮಾರುಗಳು ಈಗ ಯುವಕರಿಗಿಂತ ಹೆಚ್ಚು ಸಂತೋಷವಾಗಿವೆ.