ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಪರಿಗಣಿಸದಿರಲು ಡೊನಾಲ್ಡ್ ಟ್ರಂಪ್ ನಿರ್ಧಾರ

ಉಪಾಧ್ಯಕ್ಷ ಸ್ಥಾನಕ್ಕೆ ನೀವು ನನ್ನ ಆಯ್ಕೆಯಲ್ಲ ಎಂದು ಟ್ರಂಪ್ ನೇರವಾಗಿ ರಾಮಸ್ವಾಮಿ ಅವರಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಏತನ್ಮಧ್ಯೆ, ರಾಮಸ್ವಾಮಿಗೆ ಹೋಮ್ ಲ್ಯಾಂಡ್ ಸೆಕ್ರೆಟರಿ ಹುದ್ದೆಗಳನ್ನು ನೀಡಲು ಅವರು ಚಿಂತನೆ ನಡೆಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.ಖ್ಯಾತಿಯ ಮೇಲೆ ಕೇಂದ್ರೀಕರಿಸದ ಅಭ್ಯರ್ಥಿಯನ್ನು ಟ್ರಂಪ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಪರಿಗಣಿಸದಿರಲು ಡೊನಾಲ್ಡ್ ಟ್ರಂಪ್ ನಿರ್ಧಾರ
ಡೊನಾಲ್ಡ್ ಟ್ರಂಪ್- ವಿವೇಕ್ ರಾಮಸ್ವಾಮಿ
Follow us
|

Updated on: Mar 19, 2024 | 1:17 PM

ವಾಷಿಂಗ್ಟನ್ ಮಾರ್ಚ್ 19: ವಿವೇಕ್ ರಾಮಸ್ವಾಮಿ (Vivek Ramaswamy) ಅವರನ್ನು ತಮ್ಮ ಉಪಾಧ್ಯಕ್ಷ (vice-president) ಆಗಿ ಪರಿಗಣಿಸದಿರಲು  ಡೊನಾಲ್ಡ್ ಟ್ರಂಪ್ (Donald Trump) ನಿರ್ಧರಿಸಿದ್ದು, ಅವರನ್ನು ತಮ್ಮ ಕ್ಯಾಬಿನೆಟ್‌ನಲ್ಲಿ ಸ್ಥಾನಕ್ಕಾಗಿ ಪರಿಗಣಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನೀವು ನನ್ನ ಆಯ್ಕೆಯಲ್ಲ ಎಂದು ಟ್ರಂಪ್ ನೇರವಾಗಿ ರಾಮಸ್ವಾಮಿ ಅವರಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಏತನ್ಮಧ್ಯೆ, ರಾಮಸ್ವಾಮಿಗೆ ಹೋಮ್ ಲ್ಯಾಂಡ್ ಸೆಕ್ರೆಟರಿ ಹುದ್ದೆ ನೀಡಲು ಅವರು ಚಿಂತನೆ ನಡೆಸಿದ್ದಾರೆ ಎಂದು ವರದಿ ಹೇಳಿದೆ. ಟ್ರಂಪ್ ಅವರ ಕೆಲವು ಮಿತ್ರರು ವಿವೇಕ್ ರಾಮಸ್ವಾಮಿ ಅವರಲ್ಲಿರುವ ಸಾರ್ವಜನಿಕವಾಗಿ ಮಾತನಾಡುವ ಕೌಶಲ್ಯ ಮತ್ತು ವಲಸಿಗರ ಭಾರತೀಯ-ಅಮೆರಿಕನ್ ಮಗನಾಗಿ ಅವರ ಹಿನ್ನೆಲೆಯಿಂದಾಗಿ ಈ ಪಾತ್ರಕ್ಕೆ ಸೂಕ್ತವೆಂದು ಪರಿಗಣಿಸುತ್ತಾರೆ. ಇದು ಕಠಿಣ ವಲಸೆ ನೀತಿಗಳ ಟೀಕೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.

ಟ್ರಂಪ್ ಮತ್ತು ಅವರ ತಂಡದಲ್ಲಿ ಸಂಭಾವ್ಯ ಕ್ಯಾಬಿನೆಟ್ ಸ್ಥಾನಗಳಿಗಾಗಿ ಹಲವಾರು ವ್ಯಕ್ತಿಗಳು ಸರತಿ ಸಾಲಿನಲ್ಲಿದ್ದಾರೆ. ಇದರಲ್ಲಿ ಇನ್ನೊಬ್ಬ ಮಾಜಿ ಜಿಒಪಿ ಪ್ರಾಥಮಿಕ ಪ್ರತಿಸ್ಪರ್ಧಿ, ಉತ್ತರ ಡಕೋಟಾ ಗವರ್ನರ್ ಡೌಗ್ ಬರ್ಗಮ್, ಪ್ರತಿನಿಧಿ ಎಲಿಸ್ ಸ್ಟೆಫಾನಿಕ್ ಮತ್ತು ಅಮೆರಿಕದ ಮಾಜಿ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್ಹೈಜರ್ ಕೂಡಾ ಇದ್ದಾರೆ

ಖ್ಯಾತಿಯ ಮೇಲೆ ಕೇಂದ್ರೀಕರಿಸದ ಅಭ್ಯರ್ಥಿಯನ್ನು ಟ್ರಂಪ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಬಯಸುತ್ತಿದ್ದಾರೆ. ಅದೇ ವೇಳೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಸವಾಲು ಎಸೆಯುವವರೂ ಆಗಿರಬೇಕು. ಟ್ರಂಪ್ ಅವರಿಗೆ ನಿಕಟ ಸಲಹೆಗಾರರು, ಮಿತ್ರರು ಇದ್ದರೂ ಇವರನ್ನು ಈ ಸ್ಥಾನಕ್ಕೆ ಪರಿಗಣಿಸುವುದಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳು ಯಾರು ಎಂಬುದರ ಆಯ್ಕೆ ಪಟ್ಟಿ ಕುಗ್ಗಿಸುವ ಬದಲು ಟ್ರಂಪ್ ಅದನ್ನು ಹಿಗ್ಗಿಸುತ್ತಾ ಹೋಗುತ್ತಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ರಿಪಬ್ಲಿಕನ್ ಅಯೋವಾ ಕಾಕಸ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ರಾಮಸ್ವಾಮಿ ಟ್ರಂಪ್ ವಿರುದ್ಧದ ರೇಸ್‌ನಿಂದ ಹೊರಬಿದ್ದರು. ಮರುದಿನವೇ ಅವರು ಟ್ರಂಪ್ ಅವರೊಂದಿಗೆ ರ‍್ಯಾಲಿಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ಮಾಜಿ ಅಧ್ಯಕ್ಷರ ಉಮೇದುವಾರಿಕೆಯನ್ನು ಅನುಮೋದಿಸಿದರು.

ಇದನ್ನೂ ಓದಿ: ಮಗಳ ನೋಡಲೆಂದು ಕೆನಡಾಗೆ ಹೋಗಿ ಪತ್ನಿ ಕೊಂದು, ತನ್ನ ತಾಯಿಗೆ ವಿಡಿಯೋ ಕಳುಹಿಸಿದ ಪಂಜಾಬ್ ವ್ಯಕ್ತಿ

ಸೋಮವಾರ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪೈಪೋಟಿಯ ವಾಯುವ್ಯ ಒಹಾಯೊ ಕಾಂಗ್ರೆಸ್ ಜಿಲ್ಲೆಯಲ್ಲಿ ಅಭ್ಯರ್ಥಿಗೆ ಕೊನೆಯ ನಿಮಿಷದಲ್ಲಿ ಅನುಮೋದನೆಯನ್ನು ಒದಗಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಇನ್ನೊಬ್ಬ ರಿಪಬ್ಲಿಕನ್ ಸ್ಪರ್ಧಿ, ತಮ್ಮ ಆಪ್ತ ಮಿತ್ರ ಡೆರೆಕ್ ಮೆರಿನ್ ಅವರನ್ನು “ದೃಢವಾದ ಸಂಪ್ರದಾಯವಾದಿ” ಎಂದು ಟ್ರಂಪ್ ಶ್ಲಾಘಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ