AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World’s Happiest Countries: ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

ವಿಶ್ವದ ಸಂತೋಷ ಭರಿತ ನಗರಗಳ ಪಟ್ಟಿಯಲ್ಲಿ ಫಿನ್ಲೆಂಡ್​ಗೆ ಸತತ ಏಳನೇ ವರ್ಷವೂ ಅಗ್ರಸ್ಥಾನ ದೊರೆತಿದೆ. 2022ರಲ್ಲಿ 136ನೇ ಸ್ಥಾನದಲ್ಲಿದ್ದ ಭಾರತ ಈಗ 126ನೇ ಸ್ಥಾನಕ್ಕೆ ಇಳಿದಿದೆ. ಯುರೋಪಿಯನ್ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಮುಂದುವರೆದಿವೆ, ಸರ್ಬಿಯಾ, ಬಲ್ಗೇರಿಯಾ ಹಾಗೂ ರೊಮೇನಿಯಾ ರಾಷ್ಟ್ರಗಳು ಎತ್ತರದ ಸ್ಥಾನದಲ್ಲಿವೆ. 

World's Happiest Countries: ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?
ಫಿನ್ಲೆಂಡ್​
Follow us
ನಯನಾ ರಾಜೀವ್
|

Updated on:Mar 20, 2024 | 9:39 AM

ವಿಶ್ವದ ಅತ್ಯಂತ ಸಂತೋಷ ಭರಿತ ರಾಷ್ಟ್ರ(World’s Happiest Countries )ಗಳ ಪಟ್ಟಿ ಬಿಡುಗಡೆಯಾಗಿದೆ. ದೇಶವು ಸಂಪದ್ಭರಿತವಾಗಿರುವುದರೊಂದಿಗೆ ಸಂತೋಷವಾಗಿರುವುದು ಕೂಡ ಮುಖ್ಯವಾಗುತ್ತದೆ. ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಏರುಪೇರುಗಳನ್ನು ಕಾಣುವುದು ಸಹಜ ಆದರೆ ಕಷ್ಟದಲ್ಲಿ ಎದೆಗುಂದದೆ ಹೇಗಿದ್ದೇವೋ ಹಾಗೇ ಇದ್ದರೆ ಎಂಥಾ ನೋವು ಕೂಡ ಮಾಯವಾಗುವುದು.
ಇದೀಗ ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಪಟ್ಟಿ ನಮ್ಮ ಕಣ್ಣಮುಂದಿದೆ ಸತತ ಏಳನೇ ವರ್ಷವೂ ಕೂಡ ಫಿನ್ಲೆಂಡ್​ ಅತ್ಯಂತ ಸಂತೋಷ ಭರಿತವಾದ ದೇಶ ಎನ್ನುವ ಖ್ಯಾತಿಯನ್ನು ಉಳಿಸಿಕೊಂಡಿದೆ. ಭಾರತದ ಸ್ಥಿತಿಯೂ ಸುಧಾರಿಸಿದೆ 2022ರಲ್ಲಿ 136ನೇ ಸ್ಥಾನದಲ್ಲಿದ್ದ ಭಾರತ ಈಗ 126ನೇ ಸ್ಥಾನಕ್ಕೆ ಇಳಿದಿದೆ. ಅಫ್ಘಾನಿಸ್ತಾನವು ಅತೃಪ್ತಿಕರ ರಾಷ್ಟ್ರವೆಂದು ಹೇಳಲಾಗಿದೆ.
ಯುರೋಪಿಯನ್ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಮುಂದುವರೆದಿವೆ, ಸರ್ಬಿಯಾ, ಬಲ್ಗೇರಿಯಾ ಹಾಗೂ ರೊಮೇನಿಯಾ ರಾಷ್ಟ್ರಗಳು ಎತ್ತರದ ಸ್ಥಾನದಲ್ಲಿವೆ.  ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ಫಿನ್ಲೆಂಡ್ಗಿಂತ ಹಿಂದುಳಿದಿವೆ. ಮೊದಲ ಬಾರಿಗೆ, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗಳು ಟಾಪ್​ 20 ಸಂತೋಷದ ರಾಷ್ಟ್ರಗಳಲ್ಲಿ ಇರಲಿಲ್ಲ, ಕ್ರಮವಾಗಿ 23 ಮತ್ತು 24 ನೇ ಸ್ಥಾನದಲ್ಲಿವೆ. ಕೋಸ್ಟರಿಕಾ ಮತ್ತು ಕುವೈತ್ 12 ಮತ್ತು 13 ರಲ್ಲಿ ಅಗ್ರ 20 ರೊಳಗೆ ಪ್ರವೇಶಿಸಿವೆ.
ಟಾಪ್ 10 ದೇಶಗಳಲ್ಲಿ ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಮಾತ್ರ 15 ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ. ಟಾಪ್ 20 ರಲ್ಲಿ, ಕೆನಡಾ ಮತ್ತು ಯುಕೆ ಮಾತ್ರ 30 ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿವೆ.
ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ, ಒಟ್ಟು ಆಂತರಿಕ ಉತ್ಪನ್ನ, ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನೂ ಕೂಡ ಪರಿಗಣಿಸಲಾಗಿದೆ.
ಉತ್ತರ ಅಮೇರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ, 2006-10 ರಿಂದ 30 ವರ್ಷದೊಳಗಿನ ಗುಂಪುಗಳ ನಡುವೆ ಸಂತೋಷವು  ಕುಸಿದಿದೆ, ಹಳೆಯ ತಲೆಮಾರುಗಳು ಈಗ ಯುವಕರಿಗಿಂತ ಹೆಚ್ಚು ಸಂತೋಷವಾಗಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:37 am, Wed, 20 March 24

ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ