AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Presidents’ Day: ಅಮೆರಿಕದ ಅತೀ ಕೆಟ್ಟ ನಾಯಕ ಡೊನಾಲ್ಡ್ ಟ್ರಂಪ್, ಪಟ್ಟಿಯಲ್ಲಿ ಬೈಡನ್​​ಗೆ 14ನೇ ಸ್ಥಾನ

2024 ರ ಪ್ರೆಸಿಡೆನ್ಶಿಯಲ್ ಗ್ರೇಟ್‌ನೆಸ್ ಪ್ರಾಜೆಕ್ಟ್ ತಜ್ಞರ ಸಮೀಕ್ಷೆಯ ಪ್ರಕಾರ ಡೊನಾಲ್ಡ್ ಟ್ರಂಪ್ ಅಮೆರಿಕ ಕಂಡ ಅತೀ ಕೆಟ್ಟ ನಾಯಕರಾಗಿದ್ದು, ಅಬ್ರಹಾಂ ಲಿಂಕನ್ ಅತ್ಯುತ್ತಮ ನಾಯಕರಾಗಿದ್ದಾರೆ. ಪ್ರೆಸಿಡೆಂಟ್ಸ್ ಡೇ ಮುನ್ನಾ ದಿನ ಈ ಸಮೀಕ್ಷೆ ಬಿಡುಗಡೆಯಾಗಿದೆ. ಸಮೀಕ್ಷೆಯಲ್ಲಿ ಅಧ್ಯಕ್ಷ ಜೋ ಬೈಡನ್ 14ನೇ ಸ್ಥಾನದಲ್ಲಿದ್ದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಏಳನೇ ಸ್ಥಾನದಲ್ಲಿದ್ದಾರೆ.

Presidents' Day: ಅಮೆರಿಕದ ಅತೀ ಕೆಟ್ಟ ನಾಯಕ ಡೊನಾಲ್ಡ್ ಟ್ರಂಪ್, ಪಟ್ಟಿಯಲ್ಲಿ ಬೈಡನ್​​ಗೆ 14ನೇ ಸ್ಥಾನ
ಡೊನಾಲ್ಡ್ ಟ್ರಂಪ್
ರಶ್ಮಿ ಕಲ್ಲಕಟ್ಟ
|

Updated on:Feb 20, 2024 | 12:56 PM

Share

ವಾಷಿಂಗ್ಟನ್ ಫೆಬ್ರುವರಿ  20: ಅಧ್ಯಕ್ಷರ ದಿನದ (Presidents Day) ಮೊದಲು ಬಿಡುಗಡೆಯಾದ ಒಂದು ಸಮೀಕ್ಷೆ ಪ್ರಕಾರ ಅಮೆರಿಕದ ಅಧ್ಯಕ್ಷರನ್ನು ಕ್ರಮವಾಗಿ ಶ್ರೇಣೀಕರಿಸಲಾಗಿದೆ. ನವೆಂಬರ್ 15 ರಿಂದ ಡಿಸೆಂಬರ್ 31, 2023 ರವರೆಗೆ ನಡೆಸಿದ 2024 ರ ಪ್ರೆಸಿಡೆನ್ಶಿಯಲ್ ಗ್ರೇಟ್‌ನೆಸ್ ಪ್ರಾಜೆಕ್ಟ್ ತಜ್ಞರ ಸಮೀಕ್ಷೆಯ ಪ್ರಕಾರ ಡೊನಾಲ್ಡ್ ಟ್ರಂಪ್ (Donald Trump) ಈ ಶ್ರೇಣಿಯಲ್ಲಿ ಕೆಳಗಿನ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ ಜೋ ಬೈಡನ್ (Joe Biden) 14ನೇ ಶ್ರೇಯಾಂಕ ಪಡೆದಿದ್ದಾರೆ. 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ಬರೂ ಕಣಕ್ಕಿಳಿಯುವ ನಿರೀಕ್ಷೆಯಿದೆ. ಈ ಲೆಕ್ಕಾಚಾರಗಳ ನಡುವೆಯೇ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ.

ಅಮೆರಿಕನ್ ಪ್ರೆಸಿಡೆನ್ಸಿಯಲ್ಲಿ ಪರಿಣತಿ ಹೊಂದಿರುವ ತಜ್ಞರ ಸಮಿತಿಯು ನಡೆಸಿದ ಸಮೀಕ್ಷೆಯು ಅಮೆರಿಕನ್ ಪೊಲಿಟಿಕಲ್ ಸೈನ್ಸ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ರಾಜಕೀಯ ವಿಭಾಗದ ಪ್ರಸ್ತುತ ಮತ್ತು ಇತ್ತೀಚಿನ ಸದಸ್ಯರನ್ನು ಒಳಗೊಂಡಿತ್ತು. ಸಮೀಕ್ಷೆಯಲ್ಲಿ ಅಬ್ರಹಾಂ ಲಿಂಕನ್‌ರನ್ನು ಅಮೆರಿಕದ ಶ್ರೇಷ್ಠ ಅಧ್ಯಕ್ಷರನ್ನಾಗಿ ಪರಿಗಣಿಸಿದ್ದು ರಿಪಬ್ಲಿಕನ್ ನಂ 1 ಎಂದು ಶ್ರೇಯಾಂಕ ನೀಡಿದೆ. ವಯಸ್ಸಾದ ಕಾರಣದಿಂದ ತೀವ್ರ ಟೀಕೆಗಳನ್ನು ಎದುರಿಸಿದ ಬೈಡನ್, ವುಡ್ರೋ ವಿಲ್ಸನ್, ರೊನಾಲ್ಡ್ ರೇಗನ್ ಮತ್ತು ಯುಲಿಸೆಸ್ ಎಸ್. ಗ್ರಾಂಟ್ ಅವರಿಗಿಂತ ಮುಂದಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 7ನೇ ಸ್ಥಾನದಲ್ಲಿದ್ದರು. ಸಮೀಕ್ಷೆ ಬಿಡುಗಡೆಯಾದ ನಂತರ ಜೋ ಬೈಡನ್ ಗುಂಪು ಟ್ರಂಪ್​​ನ್ನು ಕೆಣಕಿದೆ.

ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಬೈಡನ್ ಟೀಂ, ನೀವು ಡೊನಾಲ್ಡ್ ಟ್ರಂಪ್ ಅಲ್ಲದೇ ಇದ್ದರೆ ಹ್ಯಾಪಿ ಪ್ರೆಸಿಡೆಂಟ್ಸ್ ಡೇ. “ನಿಮ್ಮ ದೇಶದ ಇತಿಹಾಸದಲ್ಲಿ ಈ ವೃತ್ತಿಯಲ್ಲಿ ತುಂಬಾ ಕಳಪೆ ಆಗುವುದರೆಂದರೆ ಸುಲಭವಲ್ಲ. ಆದರೆ ಡೊನಾಲ್ಡ್ ಟ್ರಂಪ್ ಅದನ್ನು ಮಾಡಲು ಯಶಸ್ವಿಯಾದರು ಮತ್ತು ಏಕೆ ಎಂಬುದು ಸ್ಪಷ್ಟವಾಗಿದೆ ಎಂದಿದೆ.

ಡೊನಾಲ್ಡ್ ಟ್ರಂಪ್ ತಮ್ಮ ನಾಲ್ಕು ವರ್ಷಗಳನ್ನು ಒಂದು ವಿಷಯಕ್ಕಾಗಿ ಮಾತ್ರ ಕೆಲಸ ಮಾಡಿದರು ಎಂದು ಬೈಡನ್ ಪ್ರಚಾರದ ವಕ್ತಾರ 81 ವರ್ಷದ ಕೆವಿನ್ ಮುನೋಜ್ ಹೇಳಿದರು. ಟ್ರಂಪ್ 45 ನೇ ಸ್ಥಾನದಲ್ಲಿದ್ದರು, ಜೇಮ್ಸ್ ಬುಕಾನನ್ 44 ನೇ ಸ್ಥಾನದಲ್ಲಿ, ಆಂಡ್ರ್ಯೂ ಜಾನ್ಸನ್ 43 ನೇ ಸ್ಥಾನದಲ್ಲಿ, ಫ್ರಾಂಕ್ಲಿನ್ ಪಿಯರ್ಸ್  42 ನೇ ಮತ್ತು ವಿಲಿಯಂ ಹೆನ್ರಿ ಹ್ಯಾರಿಸನ್ 41 ನೇ ಸ್ಥಾನದಲ್ಲಿದ್ದಾರೆ.

ಹೇಗೆ ನಡೆದಿತ್ತು ಸಮೀಕ್ಷೆ?

ಈ ಕ್ಷೇತ್ರದಲ್ಲಿ ವೃತ್ತಿಪರರ ಸಂಘಟನೆಯಾದ ಅಮೆರಿಕನ್ ಪೊಲಿಟಿಕಲ್ ಸೈನ್ಸ್ ಅಸೋಸಿಯೇಷನ್‌ನ 500 ಕ್ಕೂ ಹೆಚ್ಚು ಸದಸ್ಯರ ನಡುವೆ  ಆನ್‌ಲೈನ್‌ನಲ್ಲಿ ಸಮೀಕ್ಷೆ  ನಡೆಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರು ಬೈಡನ್ ಅವರನ್ನು ಒಟ್ಟಾರೆ ಶ್ರೇಷ್ಠತೆಗಾಗಿ 100 ರ ಪ್ರಮಾಣದಲ್ಲಿ 62.66 ಎಂದು ರೇಟ್ ಮಾಡಿದ್ದಾರೆ, 45 ಅಧ್ಯಕ್ಷರಲ್ಲಿ  ಇವರು 14 ನೇ ಸ್ಥಾನದಲ್ಲಿದ್ದಾರೆ.

ಅಬ್ರಹಾಂ ಲಿಂಕನ್ 93.87 ರಲ್ಲಿ ಅತ್ಯಧಿಕ ರೇಟಿಂಗ್ ಗಳಿಸಿದ್ದು,  ಫ್ರಾಂಕ್ಲಿನ್ ಡೆಲಾನೊ ರೂಸ್ವೆಲ್ಟ್ 90.83 ಮತ್ತು ಜಾರ್ಜ್ ವಾಷಿಂಗ್ಟನ್ 90.32 ಅಂಕ ಪಡೆದಿದ್ದಾರೆ. ಏತನ್ಮಧ್ಯೆ, ಟ್ರಂಪ್ 10.92 ಅಂಕ ಗಳಿಸಿದ್ದಾರೆ. ಹದಿನೈದನೇ ಅಧ್ಯಕ್ಷ ಜೇಮ್ಸ್ ಬ್ಯೂಕ್ಯಾನನ್, ಎರಡನೇ ಅತ್ಯಂತ ಕೆಟ್ಟ ದರ್ಜೆಯ ಅಧ್ಯಕ್ಷರಾಗಿದ್ದು 16.71 ಅಂಕಗಳನ್ನು ಗಳಿಸಿದರು.

ಸಮೀಕ್ಷೆಯಲ್ಲಿನ ಅಂಕಗಳಲ್ಲಿ  ಸೊನ್ನೆಯನ್ನು “ವೈಫಲ್ಯ” ಎಂದು ಪರಿಗಣಿಸಲಾಗುತ್ತದೆ, 50 “ಸರಾಸರಿ” ಮತ್ತು 100 “ಶ್ರೇಷ್ಠ” ಎಂದು ಪರಿಗಣಿಸಲಾಗುತ್ತದೆ.

ರಿಪಬ್ಲಿಕನ್  ಮತ್ತು ಕನ್ಸರ್ವೇಟಿವ್ಸ್  ಟ್ರಂಪ್ ಅವರನ್ನು ಬೈಡೆನ್‌ಗಿಂತ ಕೆಟ್ಟದಾಗಿ ಶ್ರೇಣೀಕರಿಸಿದ್ದಾರೆ. ರಿಪಬ್ಲಿಕನ್ನರು ಮತ್ತು ಕನ್ಸರ್ವೇಟಿವ್ಸ್ ಜಾರ್ಜ್ ವಾಷಿಂಗ್ಟನ್‌ಗೆ ಶ್ರೇಷ್ಠ ಅಧ್ಯಕ್ಷ ಸ್ಥಾನವನ್ನು ನೀಡಿದರೆ, ಡೆಮೋಕ್ರಾಟ್‌ಗಳು ಅವರಿಗೆ ಮೂರನೇ ಮತ್ತು ಪಕ್ಷೇತರರು ಎರಡನೇ ಸ್ಥಾನವನ್ನು ನೀಡಿದರು.  ಡೆಮೋಕ್ರಾಟ್‌ಗಳು, ಪಕ್ಷೇತರರು, ಉದಾರವಾದಿಗಳು ಮತ್ತು ಮಧ್ಯಮವಾದಿಗಳು ಲಿಂಕನ್ ಅವರನ್ನು ಶ್ರೇಷ್ಠ ಅಧ್ಯಕ್ಷ ಮತ್ತು ಟ್ರಂಪ್ ಅತ್ಯಂತ ಕೆಟ್ಟವರು ಎಂದು ರೇಟ್ ಮಾಡಿದ್ದಾರೆ.

ಟ್ರಂಪ್ ಅವರನ್ನು ಅತ್ಯಂತ ಧ್ರುವೀಕರಣದ ಅಧ್ಯಕ್ಷ ಎಂದು ರೇಟ್ ಮಾಡಲಾಗಿದೆ. ಅವರು ಇತರ ಯಾವುದೇ ಅಧ್ಯಕ್ಷರಿಗಿಂತ ಎರಡು ಪಟ್ಟು ಹೆಚ್ಚು ಧ್ರುವೀಕರಣದ ಅಧ್ಯಕ್ಷರಲ್ಲಿ ಗುರುತಿಸಲ್ಪಟ್ಟಿದ್ದು, ವಾಷಿಂಗ್ಟನ್ ಅನ್ನು ಕಡಿಮೆ ಧ್ರುವೀಕರಣ ಎಂದು ರೇಟ್ ಮಾಡಲಾಗಿದೆ. ಕಡಿಮೆ ಧ್ರುವೀಕರಣದ ಅಧ್ಯಕ್ಷರಲ್ಲಿ ಜಿಮ್ಮಿ ಕಾರ್ಟರ್ ಕೂಡ ಒಬ್ಬರು.

ಕಾರ್ಟರ್ ಅತ್ಯಂತ ಕಡಿಮೆ ರೇಟಿಂಗ್ ಪಡೆದ ಅಧ್ಯಕ್ಷರಾಗಿಯೂ ಸ್ಥಾನ ಪಡೆದಿದ್ದಾರೆ. ಜಾನ್ ಎಫ್. ಕೆನಡಿ ಮತ್ತು ರೊನಾಲ್ಡ್ ರೇಗನ್ ಅವರು ಅತಿ ಹೆಚ್ಚು ರೇಟಿಂಗ್ ಪಡೆದವರಾಗಿದ್ದಾರೆ. 2015 ರಲ್ಲಿ ಸಮೀಕ್ಷೆ ಪ್ರಾರಂಭವಾದಾಗಿನಿಂದ ಬರಾಕ್ ಒಬಾಮಾ ಅವರ ಶ್ರೇಯಾಂಕ ಮೇಲೇರಿದೆ.ಈ ಮೊದಲು ಒಂಬತ್ತನೇ ಸ್ಥಾನದಲ್ಲಿದ್ದವರು  ಏಳನೇ ಸ್ಥಾನಕ್ಕೆ ಏರಿದ್ದಾರೆ. ಈ ವರ್ಷ ಅವರ ರೇಟಿಂಗ್ 73.8 ಆಗಿದೆ. ಮತ್ತೊಂದೆಡೆ ಆಂಡ್ರ್ಯೂ ಜಾಕ್ಸನ್ 54.7 ರೇಟಿಂಗ್‌ನೊಂದಿಗೆ 12 ಸ್ಥಾನದಿಂದ ಕುಸಿದು 21ನೇ ಸ್ಥಾನಕ್ಕೆ ತಲುಪಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Tue, 20 February 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ