ನೀವು ಸಿಖ್ಖರಲ್ಲ; ಗುರುನಾನಕ್ ಜಯಂತಿಗೆ ಭಾರತದ 14 ಹಿಂದೂಗಳಿಗೆ ಪ್ರವೇಶ ನಿರಾಕರಿಸಿದ ಪಾಕಿಸ್ತಾನ

ಗುರುನಾನಕ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ 14 ಹಿಂದೂ ಯಾತ್ರಿಕರಿಗೆ ಅವರು ಸಿಖ್ ಧರ್ಮದವರಲ್ಲ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಗುರುನಾನಕ್ ಜಯಂತಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಸುಮಾರು 2100 ಜನರಿಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಇಸ್ಲಾಮಾಬಾದ್ ಕೂಡ ಅದೇ ಸಂಖ್ಯೆಯ ಸಂದರ್ಶಕರಿಗೆ ಪ್ರಯಾಣದ ದಾಖಲೆಗಳನ್ನು ನೀಡಿತ್ತು. ಇದಲ್ಲದೆ ಸ್ವತಂತ್ರವಾಗಿ ತಾವೇ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ 300 ಜನರನ್ನು ಗೃಹ ಸಚಿವಾಲಯದ ಅನುಮೋದನೆ ಇಲ್ಲದ ಕಾರಣ ಭಾರತದ ಗಡಿಯಲ್ಲಿ ವಾಪಾಸ್ ಕಳುಹಿಸಲಾಗಿದೆ

ನೀವು ಸಿಖ್ಖರಲ್ಲ; ಗುರುನಾನಕ್ ಜಯಂತಿಗೆ ಭಾರತದ 14 ಹಿಂದೂಗಳಿಗೆ ಪ್ರವೇಶ ನಿರಾಕರಿಸಿದ ಪಾಕಿಸ್ತಾನ
Sikhs In Indian Border

Updated on: Nov 05, 2025 | 5:58 PM

ನವದೆಹಲಿ, ನವೆಂಬರ್ 5: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ (Guru Nanak Jayanti) ಅವರ 556ನೇ ಜನ್ಮ ದಿನಾಚರಣೆಯನ್ನು ಆಚರಿಸಲು ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್‌ಗೆ ಪ್ರಯಾಣಿಸುವ ಯಾತ್ರಿಕರ ಗುಂಪಿನಲ್ಲಿದ್ದ 14 ಭಾರತೀಯ ಹಿಂದೂಗಳಿಗೆ ಪಾಕಿಸ್ತಾನದಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಅವರು ಸಿಖ್ಖರಲ್ಲ, ಹಿಂದೂಗಳು ಎಂಬ ಕಾರಣಕ್ಕೆ ಪ್ರವೇಶವನ್ನು ನಿರಾಕರಿಸಿ ವಾಪಾಸ್ ಕಳುಹಿಸಿದ್ದಾರೆ.

ಈ 14 ಜನರು ಕೇಂದ್ರ ಗೃಹ ಸಚಿವಾಲಯವು ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಮತಿ ನೀಡಿದ ಸುಮಾರು 2,100 ಜನರಲ್ಲಿ ಸೇರಿದ್ದರು. ಇಸ್ಲಾಮಾಬಾದ್ ಸರಿಸುಮಾರು ಅದೇ ಸಂಖ್ಯೆಯವರಿಗೆ ಪ್ರಯಾಣ ದಾಖಲೆಗಳನ್ನು ನೀಡಿತ್ತು. ಆದರೂ ಆ 14 ಜನರಿಗೆ ಪಾಕಿಸ್ತಾನದೊಳಗೆ ಪ್ರವೇಶಿಸಲು ಅನುಮತಿ ಸಿಕ್ಕಿಲ್ಲ. ಮಂಗಳವಾರ ಅಂದಾಜು 1,900 ಜನರು ವಾಘಾ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರೆ. ಮೇ ತಿಂಗಳಲ್ಲಿ 4 ದಿನಗಳ ಕಾಲ ನಡೆದ ಮಿಲಿಟರಿ ಸಂಘರ್ಷವಾದ ಆಪರೇಷನ್ ಸಿಂಧೂರ್ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದೊಳಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತೀಯರು ಪ್ರವೇಶಿಸಿದ್ದಾರೆ.


ಇದನ್ನೂ ಓದಿ: ಪಾಕಿಸ್ತಾನ, ಚೀನಾ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿವೆ; ಟ್ರಂಪ್

ಪಾಕಿಸ್ತಾನ ಇದೀಗ ವಾಪಾಸ್ ಕಳುಹಿಸಿದ 14 ಜನರಲ್ಲಿ ದೆಹಲಿ ಮತ್ತು ಲಕ್ನೋದ ಜನರು ಸೇರಿದ್ದಾರೆ. ಪಾಕ್ ಅಧಿಕಾರಿಗಳು ದಾಖಲೆಗಳಲ್ಲಿ ಸಿಖ್ ಎಂದು ನಮೂದಿಸಲಾದ ಜನರಿಗೆ ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ ಬಳಿಕ ಆ ಹಿಂದೂಗಳೆಲ್ಲರೂ ಅವಮಾನಿತರಾಗಿ ಹಿಂತಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದಲ್ಲದೆ, ಸ್ವತಂತ್ರವಾಗಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ 300 ಜನರನ್ನು ಅಗತ್ಯ ಗೃಹ ಸಚಿವಾಲಯದ ಅನುಮೋದನೆ ಇಲ್ಲದ ಕಾರಣ ಗಡಿಯ ಭಾರತದ ಗಡಿಯಿಂದ ವಾಪಾಸ್ ಕಳುಹಿಸಲಾಗಿದೆ. ಗುರುನಾನಕ್ ಜಯಂತಿ ಸಮಾರಂಭವು ಇಂದು ಲಾಹೋರ್‌ನಿಂದ 80 ಕಿ.ಮೀ ದೂರದಲ್ಲಿರುವ ಗುರುದ್ವಾರದಲ್ಲಿ ನಡೆಯಲಿದೆ.

ಇದನ್ನೂ ಓದಿ: ಗುರುದ್ವಾರದಲ್ಲಿ ಗುರು ಗ್ರಂಥ ಸಾಹೀಬ್​ ಪುಟಗಳನ್ನು ಹರಿದ ಯುವಕನನ್ನು ಹೊಡೆದು ಕೊಂದ ಜನರು

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ