ಅತ್ಯುತ್ತಮ ಮೈಲೇಜ್ ಪ್ರೇರಿತ ಹೋಂಡಾ ಎಸ್ ಪಿ125 ಬಿಡುಗಡೆ

ಹೋಂಡಾ ದ್ವಿಚಕ್ರ ವಾಹನ ಕಂಪನಿಯು ಹೊಸ OBD-2 ಮಾನದಂಡ ಪೂರೈಸಿರುವ ಎಸ್ ಸಿ 125 ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 85,131 ಆರಂಭಿಕ ಬೆಲೆ ಹೊಂದಿದೆ.

ದೇಶಾದ್ಯಂತ ಏಪ್ರಿಲ್ 1ರಿಂದಲೇ ಬಿಎಸ್ 6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡ ಜಾರಿಗೆ ಬರುತ್ತಿದ್ದು, ಹೊಸ ಮಾನದಂಡದೊಂದಿಗೆ ಇದೀಗ ಹೋಂಡಾ ಎಸ್ ಪಿ 125 ಬಿಡುಗಡೆಯಾಗಿದೆ. ಹೊಸ ಬೈಕ್ ಮಾದರಿಯಲ್ಲಿ ಹೋಂಡಾ ಕಂಪನಿಯು ಡಿಸ್ಕ್ ಮತ್ತು ಡ್ರಮ್ ವೆರಿಯೆಂಟ್ ಗಳನ್ನ ಪರಿಚಯಿಸಿದ್ದು, ಹೊಸ ಬೈಕ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 85,131 ರಿಂದ ರೂ. 89,131 ಬೆಲೆ ಪಡೆದುಕೊಂಡಿದೆ.

ಹೊಸ ಮಾನದಂಡ ಪೂರೈಸಿರುವ ಎಸ್ ಪಿ 125 ಬೈಕ್ ಮಾದರಿಯಲ್ಲಿ ನವೀಕೃತ 123.94 ಸಿಸಿ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 10.8 ಹಾರ್ಸ್ ಪವರ್ ಮತ್ತು 10.9 ಎನ್ಎಂ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹಿಂದಿರುಗಿಸಲಿದೆ.

ಇನ್ನು ಹೊಸ ಬೈಕಿನಲ್ಲಿ ಎಲ್ ಇಡಿ ಹೆಡ್ ಲೈಟ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ರಿಯರ್ ಟೈಮ್ ಫ್ಯೂಲ್ ಇಂಡಿಕೇಟರ್ ಸೇರಿದಂತೆ ಹಲವು ಹೊಸ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಈ ಬಾರಿಗೆ 100 ಎಂಎಂ ವೈಡ್ ರಿಯರ್ ಟೈರ್ ನೀಡಲಾಗಿದೆ.

Published On - 9:13 pm, Fri, 31 March 23

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us