Toyota Camry: ಹೊಚ್ಚ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಅನಾವರಣ

ಟೊಯೊಟಾ ಕಂಪನಿಯ ತನ್ನ ಹೊಚ್ಚ ಹೊಸ ಕ್ಯಾಮ್ರಿ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಐಷಾರಾಮಿ ವಿನ್ಯಾಸದೊಂದಿಗೆ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

Toyota Camry: ಹೊಚ್ಚ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಅನಾವರಣ
ಹೊಚ್ಚ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸೆಡಾನ್
Follow us
Praveen Sannamani
|

Updated on: Nov 15, 2023 | 8:00 PM

ಜಪಾನ್ ದೈತ್ಯ ಕಾರು ಉತ್ಪಾದನಾ ಕಂಪನಿಯಾಗಿರುವ ಟೊಯೊಟಾ (Toyota) ತನ್ನ ನವೀಕೃತ ಕ್ಯಾಮ್ರಿ (Camry)  ಸೆಡಾನ್ ಮಾದರಿಯನ್ನು ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಅನಾವರಣಗೊಳಿಸಿದ್ದು, ಹೊಸ ಮಾದರಿಯು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ನವೀಕೃತ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ಹೊಸ ಕ್ಯಾಮ್ರಿ ಸೆಡಾನ್ ಮಾದರಿಯಲ್ಲಿ ಟೊಯೊಟಾ ಕಂಪನಿಯು ಈ ಹಿಂದಿನ ವಿ6 ಎಂಜಿನ್ ಬದಲಾಗಿ ನವೀಕೃತ 2.5 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಹೊಸ ಹೈಬ್ರಿಡ್ ತಂತ್ರಜ್ಞಾನಕ್ಕೆ ಪೂರಕವಾಗಿದೆ. ಜೊತೆಗೆ ಹೊಸ ಮಾದರಿಯಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಟೂ-ವ್ಹೀಲ್ ಡ್ರೈವ್ (2WD) ಮತ್ತು ಆಲ್-ವೀಲ್ ಡ್ರೈವ್ (AWD)ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕ್ಯಾಮ್ರಿಯಲ್ಲಿ ಅಳವಡಿಸಲಾಗಿರುವ ಹೈಬ್ರಿಡ್ ವ್ಯವಸ್ಥೆಯು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಪಡೆದುಕೊಂಡಿದೆ.

Toyota Camry (3)

ಈ ಮೂಲಕ ಹೊಸ ಕ್ಯಾಮ್ರಿ ಕಾರು ಮಾದರಿಯ ಟೂ ವ್ಹೀಲ್ ಡ್ರೈವ್ ಮಾದರಿಯು 228 ಹಾರ್ಸ್ ಪವರ್ ಉತ್ಪಾದಿಸಿದರೆ ಆಲ್ ವ್ಹೀಲ್ ಡ್ರೈವ್ ಮಾದರಿಯು 235 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತದೆ. ಹೊಸ ಕಾರಿನ ಆಲ್ ವ್ಹೀಲ್ ಡ್ರೈವ್ ವೆರಿಯೆಂಟ್ ನಲ್ಲಿ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಹಿಂಬದಿಯಲ್ಲೂ ಹೆಚ್ಚುವರಿಯಾಗಿ ಒಂದು ಎಲೆಕ್ಟ್ರಿಕ್ ಮೋಟಾರ್ ನೀಡಲಾಗಿದ್ದು, ಇದು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯದೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿರುವ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ವಿಶೇಷತೆಗಳೇನು?

ಹೊಸ ಕ್ಯಾಮ್ರಿ ಮಾದರಿಯು ನವೀಕೃತ ಎಂಜಿನ್ ಜೊತೆಗೆ ವಿನ್ಯಾಸ ಮತ್ತು ವೈಶಿಷ್ಟ್ಯತೆಯಲ್ಲೂ ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಫ್ರಂಟ್ ಫಾಸಿಯಾ ಸೇರಿದಂತೆ ಕ್ರೌನ್ ಸೆಡಾನ್ ಮಾದರಿಯಲ್ಲಿರುವಂತೆ ಇಂಟಿರಿಯರ್ ಫೀಚರ್ಸ್ ಹೊಂದಿರಲಿದೆ. ಹೊಸ ಕಾರಿನಲ್ಲಿ ಹಲವಾರು ಆಧುನಿಕ ಫೀಚರ್ಸ್ ಗಳಿದ್ದು, ಕೀ ಲೆಸ್ ಸ್ಟಾರ್ಟ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಮತ್ತು ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

Toyota Camry (1)

ಜೊತೆಗೆ ಹೊಸ ಕಾರಿನಲ್ಲಿ ಸ್ಪೋರ್ಟಿಯರ್ ಆಗಿರುವ ಡ್ಯಾಶ್ ಬೋರ್ಡ್ ನೊಂದಿಗೆ 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 12.3 ಇಂಚಿನ ಡ್ರೈವರ್ ಡಿಸ್ ಪ್ಲೇ, ಅಲ್ಯುನಿಯಂ ಪೆಡಲ್, ಬ್ಲ್ಯಾಕ್ ಫೀನಿಷ್ಡ್ ಗ್ರೀಲ್ ಸೆಕ್ಷನ್, ರಿಯರ್ ಡಿಫ್ಯೂಸರ್, ಡ್ಯುಯಲ್ ಎಕ್ಸಾಸ್ಟ್ ಪೈಪ್ಸ್, ಹಿಂಬದಿಯಲ್ಲಿ ಕ್ಯಾಮ್ರಿ ಬ್ಯಾಡ್ಜ್, ರಿಯರ್ ಸ್ಪಾಯ್ಲರ್ ಮತ್ತು ಸಸ್ಷೆಷನ್ ಟೂನಿಂಗ್ ಹೊಂದಿರಲಿದೆ. ಹೊಸ ಕಾರಿನ ಹೈ ಎಂಡ್ ಮಾದರಿಯಲ್ಲಿ ಹೆಚ್ಚುವರಿ ಫೀಚರ್ಸ್ ಒಳಗೊಂಡಿರಲಿದ್ದು, 19 ಇಂಚಿನ ಅಲಾಯ್ ವ್ಹೀಲ್ ಸೇರಿದಂತೆ ಸುರಕ್ಷತೆಗಾಗಿ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಇನ್ನು ಹೊಸ ಕ್ಯಾಮ್ರಿ ಕಾರು ಮಾದರಿಯು ಮುಂಬರುವ 2024ರ ಆರಂಭದಲ್ಲಿ ಯುಎಸ್ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿವೆ. ಭಾರತದಲ್ಲಿ ಬಿಡುಗಡೆ ಮಾದರಿಯು ಟೂ-ವ್ಹೀಲ್ ಡ್ರೈವ್ ಜೊತೆಗೆ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದು ಹಲವಾರು ಐಷಾರಾಮಿ ಆರಂಭಿಕ ಕಾರು ಮಾದರಿಗಳಿಗೆ ಪರ್ಯಾಯ ಆಯ್ಕೆಯಾಗಲಿದೆ ಎನ್ನಬಹುದು.