AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Sale: ಐಫೋನ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗ: ಫ್ಲಿಪ್‌ಕಾರ್ಟ್​ನಲ್ಲಿ ಈ ಸ್ಕೂಟಿ ಮೇಲೆ ಬಂಪರ್ ಆಫರ್

Flipkart Big Billion Days 2025: ನೀವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುತ್ತಿದ್ದರೆ, ಈ ಫ್ಲಿಪ್‌ಕಾರ್ಟ್ ಆಫರ್ ಅನ್ನು ಕಡೆಗಣಿಸಬೇಡಿ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಬಂಪರ್ ರಿಯಾಯಿತಿಗಳು ಇವೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರು ಈಗ ಐಫೋನ್‌ಗಿಂತ ಕಡಿಮೆ ಬೆಲೆಗೆ ಹೊಸ ಇವಿ ಖರೀದಿಸಬಹುದು.

Flipkart Sale: ಐಫೋನ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗ: ಫ್ಲಿಪ್‌ಕಾರ್ಟ್​ನಲ್ಲಿ ಈ ಸ್ಕೂಟಿ ಮೇಲೆ ಬಂಪರ್ ಆಫರ್
Flipkart Big Billion Days Sale Scooter
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Sep 30, 2025 | 6:43 PM

Share

ಬೆಂಗಳೂರು (ಸೆ. 30): ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್​ನಲ್ಲಿ ಸದ್ಯ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ನಡೆಯುತ್ತಿದೆ. ಇದರಲ್ಲಿ ಕೇವಲ ಸ್ಮಾರ್ಟ್​ಫೋನ್​ಗಳು, ಟಿವಿ, ಡ್ರೆಸ್​ಗಳ ಮೇಲೆ ಮಾತ್ರವಲ್ಲದೆ ಅಟೋಮೊಬೈಲ್ ಸೆಕ್ಷನ್​ನಲ್ಲೂ ಬಂಪರ್ ಆಫರ್ ನೀಡಲಾಗಿದೆ. ನೀವು ದಸರಾ ನವರಾತ್ರಿ ಪ್ರಯುಕ್ತ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ರಿಯಾಯಿತಿಯನ್ನು ತಪ್ಪಿಸಿಕೊಳ್ಳಬೇಡಿ. ಜನಪ್ರಿಯ ಇವಿ ಕಂಪನಿ ಆಂಪಿಯರ್ ಇತ್ತೀಚೆಗೆ ಮ್ಯಾಗ್ನಸ್ ಎಂಬ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಈಗ ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ರೂ. 20 ಸಾವಿರ ರಿಯಾಯಿತಿಯೊಂದಿಗೆ ಲಭ್ಯವಿದೆ.

ಫ್ಲಿಪ್​ಕಾರ್ಟ್​ನಲ್ಲಿ ಮ್ಯಾಗ್ನಸ್ ಸ್ಕೂಟರ್​ನ ಆಫರ್ ಏನಿದೆ?

ಆಂಪಿಯರ್ ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್‌ನ ಶೋ ರೂಂ ಬೆಲೆ ಸುಮಾರು 90 ಸಾವಿರ ರೂ. ಆದರೆ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಇದು 81,999 ರೂ. ಗಳಿಗೆ ಲಭ್ಯವಿದೆ. ನೀವು ಐಸಿಐಸಿಐ ಅಥವಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ನಿಮಗೆ 11 ಸಾವಿರ ರೂ. ಗಳವರೆಗೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಒಟ್ಟಾರೆಯಾಗಿ, ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 70 ಸಾವಿರ ರೂ. ಗಳಿಗೆ ಮನೆಗೆ ತರಬಹುದು.

ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೆ, ಯುಪಿಐ ಪಾವತಿಯ ಮೂಲಕ ಕನಿಷ್ಠ 7 ಸಾವಿರ ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್​ಕಾರ್ಟ್​ನಲ್ಲಿ ಸೇಲ್​ನಲ್ಲಿ ನೀವು ಆಯ್ಕೆ ಮಾಡಬಹುದಾದ ಉತ್ತಮ ಕೊಡುಗೆ ಇದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್, ಸ್ಯಾಮ್‌ಸಂಗ್, ವಿವೋದಂತಹ ಪ್ರೀಮಿಯಂ ಫೋನ್‌ಗಳ ಬೆಲೆಗಳಿಗಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ.

ಇದನ್ನೂ ಓದಿ
Image
ಕಾರುಗಳ ಬೆಲೆ ನಗರದಿಂದ ನಗರಕ್ಕೆ ಏಕೆ ಬದಲಾಗುತ್ತದೆ ಗೊತ್ತೇ?
Image
ಆಲ್ಟೊ ಕೆ10 ಅಲ್ಲ: ಜಿಎಸ್‌ಟಿ ಕಡಿತದ ನಂತರ ಅತಿ ಅಗ್ಗದ ಕಾರು ಇದುವೇ ನೋಡಿ
Image
GST 2.0: ಶೋ ರೂಂಗಳಿಗೆ ಮುಗಿಬಿದ್ದ ಗ್ರಾಹಕರು, ಹೊಸ ದಾಖಲೆ ಸೃಷ್ಟಿ
Image
ಹೊಸ ಜಿಎಸ್‌ಟಿ ದರದಿಂದ ಸೆಕೆಂಡ್ ಹ್ಯಾಂಡ್ ಕಾರು ಅಗ್ಗವಾಗುತ್ತವೆಯೇ?

Car Price: ದೆಹಲಿಯಲ್ಲಿ ಅಗ್ಗ, ಬೆಂಗಳೂರಿನಲ್ಲಿ ದುಬಾರಿ: ಕಾರುಗಳ ಬೆಲೆ ನಗರದಿಂದ ನಗರಕ್ಕೆ ಏಕೆ ಬದಲಾಗುತ್ತದೆ ಗೊತ್ತೇ?

ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳು

EV ವೈಶಿಷ್ಟ್ಯಗಳ ವಿಷಯದಲ್ಲಿ, ಇದು 2.5 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ಒಂದೇ ಚಾರ್ಜ್‌ನಲ್ಲಿ 90 ಕಿಲೋ ಮೀಟರ್‌ಗಳವರೆಗೆ ಚಲಿಸಬಹುದು. ಗರಿಷ್ಠ ವೇಗ ಗಂಟೆಗೆ 65 ಕಿಲೋ ಮೀಟರ್. ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 5 ಗಂಟೆಗಳು ಬೇಕಾಗುತ್ತದೆ. ಇದು 3.5-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಇದು IP67 ಜಲನಿರೋಧಕ ರೇಟಿಂಗ್ ಅನ್ನು ಕೂಡ ಹೊಂದಿದೆ. ಇದು USB ಚಾರ್ಜಿಂಗ್ ಪೋರ್ಟ್ ಮತ್ತು LED ಹೆಡ್‌ಲೈಟ್‌ಗಳನ್ನು ಹೊಂದಿದೆ. ಇದು 22 ಲೀಟರ್ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಬರುತ್ತದೆ.

ಈ ಸ್ಕೂಟರ್ ಐದು ವರ್ಷ ಅಥವಾ 75 ಸಾವಿರ ಕಿಲೋ ಮೀಟರ್ ವಾರಂಟಿಯೊಂದಿಗೆ ಬರುತ್ತದೆ. ಬ್ಯಾಟರಿಯು ಮೂರು ವರ್ಷ ಅಥವಾ 30 ಸಾವಿರ ಕಿಲೋ ಮೀಟರ್ ವಾರಂಟಿಯನ್ನು ಹೊಂದಿದೆ. ಇದು ಮೆಟಾಲಿಕ್ ರೆಡ್, ಗ್ಲೇಶಿಯಲ್ ವೈಟ್, ಓಷನ್ ಬ್ಲೂ, ಗ್ಯಾಲಕ್ಟಿಕ್ ಗ್ರೇ ಮತ್ತು ಗ್ಲಾಸಿ ಬ್ಲ್ಯಾಕ್‌ನಂತಹ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ನಗರ ಪ್ರದೇಶಗಳಲ್ಲಿ ದೈನಂದಿನ ಪ್ರಯಾಣಕ್ಕೆ ಸೂಕ್ತವಾದ ಒಂದು ಕುಟುಂಬ ಸ್ಕೂಟರ್ ಇದಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ