Auto Tips: ನೀವು ನಿಮ್ಮ ವಾಹನಕ್ಕೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುತ್ತೀರಾ?: ಇದನ್ನು ನೆನಪಿನಲ್ಲಿಡಿ

ವಿವಿಧ ಕಂಪನಿಗಳ ಕಾರುಗಳಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯವು ವಿಭಿನ್ನವಾಗಿರುತ್ತದೆ. ಕೆಲವು ಕಾರುಗಳಲ್ಲಿ, 25 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ವರೆಗೆ ತುಂಬಿಸಬಹುದು, ಆದರೆ ಕೆಲವು ಕಾರುಗಳಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯವು 35 ಲೀಟರ್ ವರೆಗೆ ಇರುತ್ತದೆ. ಆದಾಗ್ಯೂ, ಕಾರಿನ ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸುವುದು ಸರಿಯಲ್ಲ.

Auto Tips: ನೀವು ನಿಮ್ಮ ವಾಹನಕ್ಕೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುತ್ತೀರಾ?: ಇದನ್ನು ನೆನಪಿನಲ್ಲಿಡಿ
Car Petrol
Edited By:

Updated on: Jul 23, 2025 | 4:36 PM

ಬೆಂಗಳೂರು (ಜು. 23): ಜನರು ಸಾಮಾನ್ಯವಾಗಿ ತಮ್ಮ ಕಾರಿನ (Car) ಪೆಟ್ರೋಲ್ ಅಥವಾ ಡೀಸೆಲ್ ಟ್ಯಾಂಕ್ ಅನ್ನು ಫುಲ್ ಮಾಡುತ್ತಾರೆ. ವಿಶೇಷವಾಗಿ ಬೆಲೆಗಳು ಏರಿಕೆಯಾಗುತ್ತಿರುವ ಸಂದರ್ಭ ಅಥವಾ ದೀರ್ಘ ಪ್ರಯಾಣ ಮಾಡಬೇಕಾದಾಗ ಫುಲ್ ಟ್ಯಾಂಕ್ ಮಾಡುತ್ತಾರೆ. ದೂರದ ಪ್ರಯಾಣ ಮಾಡುವಾಗ, ವಿಶೇಷವಾಗಿ ಬೆಟ್ಟಗುಡ್ಡಗಳಂತಹ ಪೆಟ್ರೋಲ್ ಪಂಪ್‌ಗಳು ಇರದಿರುವ ರಸ್ತೆಗಳಲ್ಲಿ ಫುಲ್ ಟ್ಯಾಂಕ್ ಮಾಡುವುದು ಪರಿಣಾಮಕಾರಿಯಾಗಿದೆ. ಆದರೆ ಕಾರಿನ ಇಂಧನ ಟ್ಯಾಂಕ್ ಫುಲ್ ಮಾಡುವುದು ಸರಿಯೇ ಅಥವಾ ಅದರಲ್ಲಿ ಯಾವುದೇ ಅಪಾಯವಿದೆಯೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.

ವಿವಿಧ ಕಂಪನಿಗಳ ಕಾರುಗಳಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯವು ವಿಭಿನ್ನವಾಗಿರುತ್ತದೆ. ಕೆಲವು ಕಾರುಗಳಲ್ಲಿ, 25 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ವರೆಗೆ ತುಂಬಿಸಬಹುದು, ಆದರೆ ಕೆಲವು ಕಾರುಗಳಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯವು 35 ಲೀಟರ್ ವರೆಗೆ ಇರುತ್ತದೆ. ಆದಾಗ್ಯೂ, ಕಾರಿನ ಇಂಧನ ಟ್ಯಾಂಕ್ ಅನ್ನು ಸಂಪೂರ್ಣವಾಗಿ ತುಂಬಿಸುವುದು ಸರಿಯಲ್ಲ. ಕಾರು ಕಂಪನಿಯು ಶಿಫಾರಸು ಮಾಡಿದಷ್ಟು ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಕಾರಿನಲ್ಲಿ ತುಂಬಿಸಬಹುದು. ಕಂಪನಿಯು ಸೂಚಿಸಿದ ಮಿತಿಗಿಂತ ಹೆಚ್ಚು ಇಂಧನವನ್ನು ತುಂಬುವುದರಿಂದ ಹಾನಿಯಾಗಬಹುದು.

ಕಂಪನಿಯು ನಿಗದಿಪಡಿಸಿದ ಮಿತಿಯವರೆಗೆ ಇಂಧನ ತುಂಬಿಸುವುದರಲ್ಲಿ ಎಂದಿಗೂ ಸಮಸ್ಯೆ ಇರುವುದಿಲ್ಲ. ಈಗ ನೀವು ಕಾರಿನಲ್ಲಿ ಇಂಧನ ತುಂಬಲು ಮಿತಿ ಏನೆಂದು ತಿಳಿಯುವುದು ಹೇಗೆ ಎಂದು ಯೋಚಿಸುತ್ತಿರಬೇಕು. ಇದು ನಿಮಗೆ ತಿಳಿದಿಲ್ಲದಿದ್ದರೆ, ಇನ್ನೊಂದು ಮಾರ್ಗವಿದೆ. ಮುಂದಿನ ಬಾರಿ ನೀವು ನಿಮ್ಮ ಕಾರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ, ಮೊದಲ ಆಟೋ ಕಟ್ ಯಾವಾಗ ಬಂತು ಎಂಬುದನ್ನು ನೆನಪಿನಲ್ಲಿಡಿ. ಮೊದಲ ಆಟೋ ಕಟ್ ನಂತರ ಕಾರಿನಲ್ಲಿ ಇಂಧನ ತುಂಬಿಸಬೇಡಿ. ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇದು ಸುರಕ್ಷಿತ ಮತ್ತು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ
ಭಾರತದಲ್ಲಿ ಅತ್ಯಂತ ಅಗ್ಗದ ಟೆಸ್ಲಾ ಕಾರು ಎಲ್ಲಿ ಸಿಗುತ್ತದೆ?
ಒಂದು ಕಾಲದಲ್ಲಿ ಹೆಚ್ಚು ಮಾರಾಟವಾಗಿದ್ದ ಈ ಕಾರನ್ನು ಇಂದು ಕೇಳುವವರೇ ಇಲ್ಲ
ಫೋನ್​ಗಿಂತ ಕಡಿಮೆ ಬೆಲೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಕಳೆದ 6 ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತೇ?

Tesla Car: ಭಾರತದಲ್ಲಿ ಅತ್ಯಂತ ಅಗ್ಗದ ಟೆಸ್ಲಾ ಕಾರು ಎಲ್ಲಿ ಸಿಗುತ್ತದೆ?: ಬುಕ್ಕಿಂಗ್ ಮಾಡುವುದು ಹೇಗೆ?

ಕಾರಿನ ಇಂಧನ ಟ್ಯಾಂಕ್ ಫುಲ್ ಆಗುವುದರಿಂದ ಹಲವು ಅನಾನುಕೂಲತೆಗಳಿವೆ. ಉದಾಹರಣೆಗೆ, ಕಾರು ಚಲಿಸುವಾಗ, ಗುಂಡಿಗಳು ಅಥವಾ ಬ್ರೇಕರ್‌ಗಳಿಂದಾಗಿ ಅದು ಶೇಕ್ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಸ್ಪೆನ್ಷನ್‌ನಿಂದಾಗಿ ಇಂಧನವು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಇಂಧನ ಟ್ಯಾಂಕ್ ತುಂಬಿದ್ದರೆ, ಪೆಟ್ರೋಲ್ ಅಥವಾ ಡೀಸೆಲ್ ಚಲನೆಗೆ ಸ್ಥಳಾವಕಾಶ ಸಿಗುವುದಿಲ್ಲ, ಇದರಿಂದಾಗಿ ಅದು ಹೊರಗೆ ಬೀಳಬಹುದು ಅಥವಾ ಸೋರಿಕೆಯಾಗಬಹುದು. ವಿಶೇಷವಾಗಿ ಕಾರು ಇಳಿಜಾರಿನಲ್ಲಿದ್ದರೆ ಅಥವಾ ಇಳಿಜಾರಿನ ಸ್ಥಳದಲ್ಲಿ ನಿಲ್ಲಿಸಿದ್ದರೆ, ಪೆಟ್ರೋಲ್ ಅಥವಾ ಡೀಸೆಲ್ ಸೋರಿಕೆಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ