Maruti Baleno: ಒಂದು ಕಾಲದಲ್ಲಿ ಅತಿ ಹೆಚ್ಚು ಮಾರಾಟವಾಗಿದ್ದ ಈ ಕಾರನ್ನು ಇಂದು ಕೇಳುವವರೇ ಇಲ್ಲ
ಜೂನ್ ತಿಂಗಳ ಮಾರುತಿ ಸುಜುಕಿ ಬಲೆನೊ ಮಾರಾಟ ವರದಿಯನ್ನು ನೋಡಿದರೆ, ಕಳೆದ ತಿಂಗಳು ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಒಟ್ಟು 8966 ಯುನಿಟ್‌ಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 40 ರಷ್ಟು ಕುಸಿತ ಕಂಡುಬಂದಿದೆ. ಜೂನ್‌ನಲ್ಲಿ, ಮಾರುತಿ ಬಲೆನೊ ಕೂಡ ಟಾಪ್ 10 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಿಂದ ಹೊರಗುಳಿದು 13 ನೇ ಸ್ಥಾನದಲ್ಲಿತ್ತು.

ಬೆಂಗಳೂರು (ಜು. 12): ಮಾರುತಿ ಸುಜುಕಿ (Maruti Suzuki) ಬಲೆನೊ… ಒಂದು ಕಾಲದಲ್ಲಿ ದೇಶದಲ್ಲಿ ನಂಬರ್ 1 ಆಗಿದ್ದ ಕಾರು. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಇತರ ವಿಭಾಗಗಳ ಕಾರುಗಳನ್ನು ಸೋಲಿಸಿ ಹಲವು ತಿಂಗಳು ಟಾಪ್ನಲ್ಲಿತ್ತು. ಆದರೆ ಕಾಲಚಕ್ರ ಎಷ್ಟು ತಿರುಗಿದೆಯೆಂದರೆ ಈಗ ಈ ಕಾರು ಟಾಪ್ 10 ಪಟ್ಟಿಯಿಂದಲೇ ಹೊರಬಿದ್ದಿದೆ. ಹೌದು, ಕಳೆದ ಕೆಲವು ತಿಂಗಳುಗಳಲ್ಲಿ, ಬಲೆನೊದ ಮಾರಾಟದ ಅಂಕಿಅಂಶಗಳು ತುಂಬಾ ಕುಸಿದಿದ್ದು, ಇದು ಮಾರುತಿ ಸುಜುಕಿಯ ಕಳವಳಕ್ಕೆ ಕಾರಣವಾಗಿದೆ. ವಾಸ್ತವವಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ, ಆಟೋಮೊಬೈಲ್ ವಲಯವು ಬಹಳಷ್ಟು ಏರಿಳಿತಗಳನ್ನು ಕಂಡಿದೆ ಮತ್ತು ಹ್ಯಾಚ್‌ಬ್ಯಾಕ್‌ಗಳು ಮತ್ತು ಸೆಡಾನ್‌ಗಳ ಹೊಳಪು SUV ವಿಭಾಗದ ಮುಂದೆ ಮಸುಕಾಗುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಬಲೆನೊದ ಮಾರಾಟದ ಅಂಕಿಅಂಶಗಳನ್ನು ನೋಡುವುದಾದರೆ..
2025 ರ 6 ತಿಂಗಳ ಬಾಲೆನೊ ಮಾರಾಟ ವರದಿ
ಜೂನ್ ತಿಂಗಳ ಮಾರುತಿ ಸುಜುಕಿ ಬಲೆನೊ ಮಾರಾಟ ವರದಿಯನ್ನು ನೋಡಿದರೆ, ಕಳೆದ ತಿಂಗಳು ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಒಟ್ಟು 8966 ಯುನಿಟ್‌ಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 40 ರಷ್ಟು ಕುಸಿತ ಕಂಡುಬಂದಿದೆ. ಜೂನ್ 2024 ರಲ್ಲಿ, 14,895 ಯುನಿಟ್ ಬಲೆನೊ ಮಾರಾಟವಾಗಿತ್ತು. ಜೂನ್‌ನಲ್ಲಿ, ಮಾರುತಿ ಬಲೆನೊ ಕೂಡ ಟಾಪ್ 10 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಿಂದ ಹೊರಗುಳಿದು 13 ನೇ ಸ್ಥಾನದಲ್ಲಿತ್ತು. ಈಗ ಈ ವರ್ಷದ ಎಲ್ಲಾ ತಿಂಗಳುಗಳ ಬಲೆನೊ ಮಾರಾಟದ ಅಂಕಿಅಂಶಗಳನ್ನು ನೋಡುವುದಾದರೆ, ಜನವರಿಯಲ್ಲಿ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ 19,965 ಯುನಿಟ್‌ಗಳು ಮಾರಾಟವಾಗಿವೆ. ಅದೇ ಸಮಯದಲ್ಲಿ, ಫೆಬ್ರವರಿಯಲ್ಲಿ 15,480 ಗ್ರಾಹಕರು ಬಲೆನೊವನ್ನು ಖರೀದಿಸಿದರು. ಮಾರ್ಚ್ 2025 ರಲ್ಲಿ, 12,357 ಯುನಿಟ್, ನಂತರ ಏಪ್ರಿಲ್‌ನಲ್ಲಿ 13,180 ಜನರು ಬಲೆನೊವನ್ನು ಮತ್ತು ಮೇ ತಿಂಗಳಲ್ಲಿ 11,618 ಜನರು ಬಲೆನೊವನ್ನು ಖರೀದಿಸಿದರು.
ಮಾರುತಿ ಸುಜುಕಿ ಬಲೆನೊ ಬೆಲೆ ಮತ್ತು ವೈಶಿಷ್ಟ್ಯಗಳು
ನೆಕ್ಸಾ ಶೋ ರೂಂನಲ್ಲಿ ಮಾರಾಟವಾಗುವ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಕ್ಸ್-ಶೋರೂಂ ಬೆಲೆ ರೂ 6.70 ಲಕ್ಷದಿಂದ ಪ್ರಾರಂಭವಾಗಿ ರೂ 9.92 ಲಕ್ಷದವರೆಗೆ ಇರುತ್ತದೆ. ಇದು 1197 ಸಿಸಿ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆಯ್ಕೆಯಲ್ಲಿ 88.5 ಬಿಎಚ್‌ಪಿ ಪವರ್ ಮತ್ತು 113 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇ ಸಮಯದಲ್ಲಿ, ಸಿಎನ್‌ಜಿ ಆಯ್ಕೆಯಲ್ಲಿ, ಇದು 76.43 ಬಿಎಚ್‌ಪಿ ಪವರ್ ಮತ್ತು 98.5 ನ್ಯೂಟನ್ ಮೀಟರ್ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಲಭ್ಯವಿರುವ ಈ ಕಾರು ನೋಟ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿಯೂ ಸಹ ಉತ್ತಮವಾಗಿದೆ. ಬಲೆನೊದ ಪೆಟ್ರೋಲ್ ರೂಪಾಂತರಗಳ ಮೈಲೇಜ್ ಲೀಟರ್‌ಗೆ 22.94 ಕಿಮೀ ವರೆಗೆ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಇದು ಕೆಜಿಗೆ 30.61 ಕಿಮೀ ವರೆಗೆ ಇರುತ್ತದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Sat, 12 July 25








