Auto Tips: ಕಾರುಗಳ ಮುಂಭಾಗದಲ್ಲಿ ಗ್ರಿಲ್‌ಗಳನ್ನು ಏಕೆ ನೀಡಲಾಗುತ್ತದೆ ಗೊತ್ತೇ?: ಇದರ ಹಿಂದಿನ ಕಾರಣ ಹೆಚ್ಚಿನವರಿಗೆ ತಿಳಿದಿಲ್ಲ!

ಕಾರಿನ ಮುಂಭಾಗದ ಚೆನ್ನಾಗಿ ಕಾಣಲು ಕೂಡ ಗ್ರಿಲ್ ಸಹಾಯ ಮಾಡುತ್ತದೆ. ಕಾರಿನ ಮುಂಭಾಗಕ್ಕೆ ಹೊಸ ಮತ್ತು ತಾಜಾ ನೋಟವನ್ನು ನೀಡಲು ಗ್ರಿಲ್ ಅನ್ನು ಬಳಸಲಾಗುತ್ತದೆ. ಇದು ಮಾತ್ರವಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಕೆಲವೇ ಜನರಿಗಷ್ಟೆ ಇದರ ಬಗ್ಗೆ ತಿಳಿದಿದೆ.

Auto Tips: ಕಾರುಗಳ ಮುಂಭಾಗದಲ್ಲಿ ಗ್ರಿಲ್‌ಗಳನ್ನು ಏಕೆ ನೀಡಲಾಗುತ್ತದೆ ಗೊತ್ತೇ?: ಇದರ ಹಿಂದಿನ ಕಾರಣ ಹೆಚ್ಚಿನವರಿಗೆ ತಿಳಿದಿಲ್ಲ!
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2024 | 5:01 PM

ಸಾಮಾನ್ಯವಾಗಿ ಎಲ್ಲ ಕಾರುಗಳಲ್ಲಿ, ಗ್ರಿಲ್ ಮತ್ತು ಬಂಪರ್ ಎರಡೂ ಮುಂಭಾಗದಲ್ಲಿ ಕಾಣಸಿಗುತ್ತದೆ. ಆದರೆ ಹಿಂಭಾಗದಲ್ಲಿ ಗ್ರಿಲ್ ಅನ್ನು ಒದಗಿಸಲಾಗಿಲ್ಲ. ಕಾರಿನ ಹಿಂಭಾಗದಲ್ಲಿ ಬಂಪರ್ ಮಾತ್ರ ಲಭ್ಯವಿದ್ದು, ವಿನ್ಯಾಸವನ್ನು ಇನ್ನಷ್ಟು ಸುಧಾರಿಸಲು ಸ್ಕಿಡ್ ಪ್ಲೇಟ್ ನೀಡಲಾಗಿದೆ. ಹಾಗಾದರೆ ಕಾರುಗಳಲ್ಲಿ ಮುಂಭಾಗದಲ್ಲಿ ಗ್ರಿಲ್‌ಗಳನ್ನು ಏಕೆ ನೀಡಲಾಗಿದೆ ಮತ್ತು ಬಂಪರ್‌ಗಳನ್ನು ಮಾತ್ರ ಏಕೆ ಒದಗಿಸಲಾಗಿಲ್ಲ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಹಲವು ಕಾರಣಗಳಿವೆ. ಮುಖ್ಯವಾಗಿ ಎರಡು ದೊಡ್ಡ ಕಾರಣಗಳಿವೆ. ಕೆಲವೇ ಜನರಿಗೆ ಇದರ ಬಗ್ಗೆ ತಿಳಿದಿದೆ.

ಗ್ರಿಲ್ ನೀಡಲು ಎರಡು ದೊಡ್ಡ ಕಾರಣಗಳು

1. ಕಾರುಗಳಲ್ಲಿ ಗ್ರಿಲ್ ಪ್ರಮುಖ ಭಾಗವಾಗಿದೆ. ಏಕೆಂದರೆ ಇದು ಕಾರ್ ಎಂಜಿನ್ ಅನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಗ್ರಿಲ್​ನಲ್ಲಿ ಸಣ್ಣ ರಂಧ್ರಗಳಿವೆ, ಅದರ ಮೂಲಕ ಹೊರಗಿನ ಗಾಳಿಯು ಎಂಜಿನ್ ಒಳಗೆ ತಲುಪುತ್ತದೆ. ಈ ಗಾಳಿಯು ಎಂಜಿನ್ ಅನ್ನು ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ ಮತ್ತು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಎಂಜಿನ್ ಅನ್ನು ತಂಪಾಗಿರಿಸಲು ಕಾರುಗಳಲ್ಲಿ ಇತರೆ ಕೆಲವು ಸಾಧನಗಳಿಗೆ. ಇದು ಕೂಡ ಅವುಗಳಲ್ಲಿ ಒಂದಾಗಿದೆ. ಸರಿಯಾದ ತಾಪಮಾನದಲ್ಲಿ ಇದ್ದರಷ್ಟೆ ಎಂಜಿನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

2. ಹಾಗೆಯೆ ಕಾರಿನ ಮುಂಭಾಗದ ಚೆನ್ನಾಗಿ ಕಾಣಲು ಕೂಡ ಗ್ರಿಲ್ ಸಹಾಯ ಮಾಡುತ್ತದೆ. ಕಾರಿನ ಮುಂಭಾಗಕ್ಕೆ ಹೊಸ ಮತ್ತು ತಾಜಾ ನೋಟವನ್ನು ನೀಡಲು ಗ್ರಿಲ್ ಅನ್ನು ಬಳಸಲಾಗುತ್ತದೆ. ಇದು ಕಾರ್ ಕಂಪನಿಗಳಿಗೆ ತಮ್ಮ ಕಾರುಗಳನ್ನು ಇತರ ಕಾರುಗಳಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಕಾರು ಕಂಪನಿಯ ಕಾರುಗಳಲ್ಲಿ ಕಂಡುಬರುವ ಗ್ರಿಲ್ ವಿನ್ಯಾಸಗಳು ವಿಭಿನ್ನವಾಗಿರುವುದನ್ನು ನೀವು ಗಮನಿಸಿರಬೇಕು. ಕಾರು ಕಂಪನಿಗಳೂ ಕಾಲಕಾಲಕ್ಕೆ ಗ್ರಿಲ್ ಬದಲಾಯಿಸುತ್ತಲೇ ಇರುತ್ತವೆ.

ಗ್ರಿಲ್ ಬದಲು ಬಂಪರ್ ಅಳವಡಿಸಿದರೆ ಏನಾಗುತ್ತೆ?:

ಕಾರುಗಳಲ್ಲಿ ಗ್ರಿಲ್ ಅನ್ನು ಒದಗಿಸುವ ಬದಲು, ಬಂಪರ್ ಅನ್ನು ಮೇಲ್ಭಾಗದವರೆಗೆ ವಿಸ್ತರಿಸಿದರೆ, ಇದರಿಂದ ಅನೇಕ ಅನಾನುಕೂಲಗಳಾಗುತ್ತದೆ. ದೊಡ್ಡ ಅನನುಕೂಲವೆಂದರೆ ಅದು ಎಂಜಿನ್ ಅನ್ನು ತಂಪಾಗಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಬಂಪರ್ ಮುಚ್ಚಲ್ಪಟ್ಟರೆ ಎಂಜಿನ್ ಅನ್ನು ತಲುಪಲು ಗಾಳಿಯು ಅದರ ಮೂಲಕ ಹಾದುಹೋಗುವುದಿಲ್ಲ, ಇದು ಎಂಜಿನ್​ನ ತಂಪಾಗಿಸುವಿಕೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸರಿಯಾದ ಪ್ರಮಾಣದಲ್ಲಿ ಗಾಳಿಯು ಎಂಜಿನ್ ಒಳಗೆ ತಲುಪುವುದಿಲ್ಲ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್