Bajaj Chetak EV: ಬಜಾಜ್ ಚೇತಕ್ ಇವಿ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್
ಬಜಾಜ್ ಆಟೋ ಕಂಪನಿ ತನ್ನ ಜನಪ್ರಿಯ ಚೇತಕ್ ಇವಿ ಸ್ಕೂಟರ್ ಖರೀದಿ ಮೇಲೆ ದಸರಾ ಮತ್ತು ದೀಪಾವಳಿ ಆಫರ್ ಘೋಷಣೆ ಮಾಡಿದೆ.
ದೇಶದ ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಬಜಾಜ್ ಆಟೋ(Bajaj Auto) ತನ್ನ ಬಹುಬೇಡಿಕೆಯ ಚೇತಕ್ ಇವಿ(Chetak EV) ಸ್ಕೂಟರ್ ಖರೀದಿ ಮೇಲೆ ದಸರಾ ಮತ್ತು ದೀಪಾವಳಿ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಇವಿ ಸ್ಕೂಟರ್ ಮಾದರಿಯನ್ನು ಆಕರ್ಷಕ ಬೆಲೆಗೆ ಖರೀದಿಸಬಹುದಾಗಿದೆ.
ಬಜಾಜ್ ಕಂಪನಿಯು ಹೊಸ ಆಫರ್ ಮೂಲಕ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಎಕ್ಸ್ ಶೋರೂಂ ಪ್ರಕಾರ 1.15 ಲಕ್ಷಕ್ಕೆ ನಿಗದಿಪಡಿಸಿದ್ದು, ಹೊಸ ಆಫರ್ ನಲ್ಲಿ ಗ್ರಾಹಕರು ರೂ. 15 ಸಾವಿರ ಉಳಿತಾಯ ಮಾಡಬಹುದಾಗಿದೆ. ಚೇತಕ್ ಇವಿ ಮೇಲಿನ ಹೊಸ ಆಫರ್ ಸ್ಟಾಕ್ ಇರುವ ಮಾದರಿಗಳ ಮೇಲೆ ಮಾತ್ರ ಅನ್ವಯಿಸಲಿದ್ದು, ಸ್ಟಾಕ್ ಮುಕ್ತಾಯದ ನಂತರ ಆಫರ್ ಕೊನೆಗೊಳ್ಳಲಿದೆ.
ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!
ಚೇತಕ್ ಇವಿ ಆವೃತ್ತಿಯು ಶೀಘ್ರದಲ್ಲಿಯೇ ನವೀಕೃತ ಮಾದರಿಯನ್ನು ಪಡೆದುಕೊಳ್ಳಬಹುದಾಗಿದ್ದು, ಈ ಹಿನ್ನಲೆಯಲ್ಲಿ ಸ್ಟಾಕ್ ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಚೇತಕ್ ಇವಿ ಆವೃತ್ತಿಯು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮೆಟಲ್ ಬಾಡಿ ಹೊಂದಿರುವ ಪ್ರಮುಖ ಆಕರ್ಷಣೆಯಾಗಿದೆ.
ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮೈಲೇಜ್ ನೀಡಿದಲ್ಲಿ ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಹೊಸ ಇವಿ ಸ್ಕೂಟರ್‌ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದ್ದು, ಈ ಆ್ಯಪ್ ಮೂಲಕ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಫೀಚರ್ಸ್ ಬಳಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ
ಹಾಗೆಯೇ ಚೇತಕ್ ಇವಿ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿರ್ವಸ್ ಅಸಿಸ್ಟ್ ಮೋಡ್‌ನೊಂದಿಗೆ ಮೊಬಿಲಿಟಿ ತಂತ್ರಜ್ಞಾನ ಹೊಂದಿದೆ.
ಈ ಮೂಲಕ ಹೊಸ ಚೇತಕ್ ಇವಿ ಸ್ಕೂಟರ್ನಲ್ಲಿ ಬಳಕೆ ಮಾಡಲಾಗಿರುವ ಲೀಥಿಯಂ ಬ್ಯಾಟರಿಯು ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದ್ದು, ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯ ಸೇರಿದಂತೆ ಪ್ರತಿ 15 ಸಾವಿರ ಕಿ.ಮೀ ಗೆ ಒಂದು ಬಾರಿ ಸರ್ವೀಸ್ ಸೇರಿದಂತೆ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ.