AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 17ಕ್ಕೆ ಬಿಡುಗಡೆಯಾಗಲಿದೆ ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್

ಬಜಾಜ್ ಬಹುನೀರಿಕ್ಷಿತ ಸಿಎನ್ ಜಿ ಬೈಕ್ ಮಾದರಿಯು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಬೈಕ್ ಮಾದರಿಯು ಜುಲೈ 17ಕ್ಕೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಜುಲೈ 17ಕ್ಕೆ ಬಿಡುಗಡೆಯಾಗಲಿದೆ ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್
ಬಜಾಜ್ ಬೈಕ್
Follow us
Praveen Sannamani
|

Updated on: Jun 11, 2024 | 10:11 PM

ವಾಹನ ಮಾರುಕಟ್ಟೆಯಲ್ಲಿ ಸಿಎನ್‌ಜಿ (CNG) ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಶೀಘ್ರದಲ್ಲಿಯೇ ಬಜಾಜ್ ಆಟೋ ಕಂಪನಿಯು ತನ್ನ ಬಹುನೀರಿಕ್ಷಿತ ಸಿಎನ್‌ಜಿ ಬೈಕ್ ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆಯಲ್ಲಿದೆ. ಹೆಚ್ಚುತ್ತಿರುವ ಮಾಲಿನ್ಯ ಮತ್ತು ದುಬಾರಿ ನಿರ್ವಹಣಾ ವೆಚ್ಚಗಳಿಂದಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಗ್ರಾಹಕರು ಆದ್ಯತೆ ನೀಡಲಾಗುತ್ತಿದ್ದು, ಕಡಿಮೆ ನಿರ್ವಹಣೆ ಹೊಂದಿರುವ ಸಿಎನ್ ಜಿ ವಾಹನಗಳು ಇದೀಗ ಗಮನಸೆಳೆಯುತ್ತಿವೆ. ಹೀಗಾಗಿ ಬಜಾಜ್ ಆಟೋ ಕಂಪನಿಯು ಕೂಡಾ ತನ್ನ ಹೊಸ ಸಿಎನ್‌ಜಿ ಬೈಕ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಬೈಕ್ ಜುಲೈ 17ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಬಜಾಜ್ ಕಂಪನಿಯು ತನ್ನ ಹೊಸ ಸಿಎನ್‌ಜಿ ಬೈಕ್ ಮಾದರಿಯನ್ನು ಈ ಹಿಂದಿನ ಮಾಹಿತಿಗಳ ಪ್ರಕಾರ ಇದೇ ತಿಂಗಳು 18ಕ್ಕೆ ಬಿಡುಗಡೆ ಮಾಡಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಹೊಸ ಬೈಕಿನ ಉತ್ಪಾದನಾ ಮಾದರಿಯ ಬಿಡುಗಡೆಯನ್ನು ಜುಲೈ 17ಕ್ಕೆ ಮುಂದೂಡಿದ್ದು, ಇದು ಬ್ರೂಜರ್ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ ಬೈಕ್ ಮಾದರಿಯನ್ನು ಪ್ಲಾಟಿನಾ ಬೈಕ್ ಪ್ಲ್ಯಾಟ್ ಫಾರ್ಮ್ ಆಧರಿಸಿ ಬಿಡುಗಡೆ ಮಾಡಬಹುದಾಗಿದ್ದು, ಹೊಸ ಬೈಕಿನಲ್ಲಿ 110 ಸಿಸಿ ಇಲ್ಲವೇ 125 ಸಿಸಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಕಿಟ್ ಜೋಡಣೆ ಮಾಡಲಾಗುತ್ತದೆ. ಇದು ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದ್ದು, ಪರ್ಫಾಮೆನ್ಸ್ ಪ್ರಮಾಣದಲ್ಲಿ ತುಸು ಇಳಿಕೆಯಾಗಿದೆ ಎನ್ನಬಹುದು.

ಇದನ್ನೂ ಓದಿ: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?

ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಹೊಂದಿರುವ ಬಜಾಜ್ ಹೊಸ ಬೈಕ್ ಮಾದರಿಯನ್ನು ಕಂಪನಿಯು ಸದ್ಯಕ್ಕೆ ಬ್ರೂಜರ್ ಇ101 (Bruzer E101) ಕೋಡ್ ನೇಮ್ ನೊಂದಿಗೆ ಅಭಿವೃದ್ದಿಪಡಿಸುತ್ತಿದ್ದು, ಇದರಲ್ಲಿ ಲಭ್ಯತೆಗೆ ಅನುಗುಣವಾಗಿ ಬಳಕೆದಾರರು ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಮಾಡಬಹುದಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಉತ್ತರಾಖಂಡದ ಪಂತ್ ನಗರದಲ್ಲಿರುವ ಬಜಾಜ್ ಬೈಕ್ ಉತ್ಪಾದನಾ ಘಟಕಗಳಲ್ಲಿ ಹೊಸ ಬೈಕ್ ನಿರ್ಮಾಣಗೊಳ್ಳುತ್ತಿದ್ದು, ಇದು ಎಂಟ್ರಿ ಲೆವಲ್ ಪೆಟ್ರೋಲ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿರುವ ಸಿಎನ್ ಜಿ ಬೈಕ್ ಮಾದರಿಯು 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ 70 ರಿಂದ 75 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ. ಆದರೆ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಕೇವಲ ಒಂದೇ ವರ್ಷದಲ್ಲಿ ಹೊಸ ದಾಖಲೆ ನಿರ್ಮಿಸಿದ ಹೋಂಡಾ ಶೈನ್ 100 ಬೈಕ್

ಇದಲ್ಲದೆ ಹೊಸ ಬೈಕ್ ಮಾದರಿಯಲ್ಲಿ ಹಲವಾರು ಹೊಸ ಫೀಚರ್ಸ್ ನೀಡಿರುವ ಬಜಾಜ್ ಕಂಪನಿಯು ಬಳಕೆದಾರರಿಗೆ ಅನೂಕರವಾಗುವ ಹಲವು ಸರಳ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಿದೆ. ಜೊತೆಗೆ ಹೊಸ ಬೈಕಿನಲ್ಲಿ ಬಲ್ಬ್ ಇಂಡಿಕೇಟರ್ ನೊಂದಿಗೆ ಎಲ್ಇಡಿ ಹೆಡ್ ಲೈಟ್, ಬ್ರ್ಯಾಸ್ಡ್ ಹ್ಯಾಂಡಲ್‌ಬಾರ್‌ನೊಂದಿಗೆ ಹ್ಯಾಂಡ್‌ಗಾರ್ಡ್‌ಗಳು ಮತ್ತು ಮಿಶ್ರಲೋಹದ ಅಲಾಯ್ ಚಕ್ರಗಳನ್ನು ಜೋಡಣೆಯನ್ನು ನೀರಿಕ್ಷೆ ಮಾಡಬಹುದಾಗಿದೆ.

ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್