ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ CNG Bike ಗಳು! ಮುಂದಿನ ವರ್ಷವೇ ಬಿಡುಗಡೆಗೆ ಸಿದ್ಧವಾಗಿದೆ ಬಜಾಜ್ ಸಿಎನ್‌ಜಿ ಬೈಕ್- ಎನಿದರ ವೈಶಿಷ್ಟ್ಯತೆ?
ಮುಂದಿನ ವರ್ಷ ಈ ಬೈಕ್ ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಿದೆ. ಪ್ಲಾಟಿನಾ ಎಂಬ ಹೆಸರಿನಲ್ಲಿ ಈ ಬೈಕ್ ಬಿಡುಗಡೆಯಾಗಲಿದೆಯಂತೆ. ಆಟೋ ಮೊಬೈಲ್ ವಲಯದಲ್ಲಿ ಇವು ಸಾಕಷ್ಟು ಜನಪ್ರಿಯತೆ ಗಳಿಸುವ ಅಂದಾಜಿದೆ. ಬಜಾಜ್ ವರ್ಷಕ್ಕೆ 1.2 ಲಕ್ಷ ಬೈಕ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ.
ಸದ್ಯ ಪೆಟ್ರೋಲ್ ಚಾಲಿತ ಬೈಕ್ ಗಳು ಮಾತ್ರ ಮಾರುಕಟ್ಟೆಯಲ್ಲಿವೆ. ಆದರೆ ಪೆಟ್ರೋಲ್ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಒಲವು ತೋರುತ್ತಿದ್ದಾರೆ. ಪೆಟ್ರೋಲ್‌ಗೆ ಹೋಲಿಸಿದರೆ ಕಡಿಮೆ ಬೆಲೆಯಿಂದಾಗಿ ಅನೇಕ ಜನರು ಸಿಎನ್‌ಜಿಗೆ ಆದ್ಯತೆ ನೀಡುತ್ತಾರೆ. ದೊಡ್ಡ ವಾಹನಗಳಾದರೆ ಜನರು ಸಿಎನ್‌ಜಿ ವಾಹನಗಳ (Compressed Natural Gas -CNG) ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ ದ್ವಿಚಕ್ರಗಳ ಸಾಲಿನಲ್ಲಿ ಸಿಎನ್‌ಜಿ ಬೈಕ್ ಗಳು (Bajaj CNG Bike) ರಸ್ತೆಗೆ ಇಳಿಯಲು ಸನ್ನದ್ದವಾಗಿವೆ.
ಸದ್ಯಕ್ಕೆ ಸಿಎನ್‌ಜಿ ಕೇವಲ ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಶೀಘ್ರದಲ್ಲೇ ಸಿಎನ್‌ಜಿ ಬೈಕ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಹೌದು ನೀವು ಓದಿದ್ದು ಸರಿ… ಬಬಾಜ್ ಕಂಪನಿ ಶೀಘ್ರದಲ್ಲೇ CNG ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಈ ಕಂಪನಿಯು ಈಗಾಗಲೇ ವಾಹನಗಳನ್ನು ತಯಾರಿಸುತ್ತಿದೆ ಎಂಬ ಮಾಹಿತಿಯಿದೆ. ಔರಂಗಾಬಾದ್‌ನಲ್ಲಿರುವ ಫ್ಯಾಕ್ಟರಿಯಲ್ಲಿ ತಯಾರಿಸುತ್ತಿರುವ ಬ್ರೂಸರ್ ಇ101 ಕೋಡ್ ನೇಮ್‌ನೊಂದಿಗೆ ಬರುತ್ತಿರುವ ಹೊಸ ಸಿಎನ್‌ಜಿ ಬೈಕ್‌ಗೆ ಸಂಬಂಧಿಸಿದ ಮಾಹಿತಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ 2023ರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ
ಮುಂದಿನ ವರ್ಷ ಈ ಬೈಕ್ ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಿದೆ. ಪ್ಲಾಟಿನಾ ಎಂಬ ಹೆಸರಿನಲ್ಲಿ ಈ ಬೈಕ್ ಬಿಡುಗಡೆಯಾಗಲಿದೆಯಂತೆ. ಆಟೋ ಮೊಬೈಲ್ ವಲಯದಲ್ಲಿ ಇವು ಸಾಕಷ್ಟು ಜನಪ್ರಿಯತೆ ಗಳಿಸುವ ಅಂದಾಜಿದೆ. ಈ ಸಿಎನ್‌ಜಿ ಬೈಕ್‌ಗೆ ಸಂಬಂಧಿಸಿದಂತೆ ಬಜಾಜ್ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ (Bajaj Auto Managing Director) ಮಾತನಾಡಿ, ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಇಂಧನ ಬೆಲೆ ಹೆಚ್ಚಳದಂತಹ ಸವಾಲುಗಳನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಸಿಎನ್‌ಜಿ ಬೈಕ್ ಅನ್ನು ಪರಿಚಯಿಸುವ ಗುರಿಯನ್ನು ಬಜಾಜ್ ಹೊಂದಿದೆ.
Also read: ಬೆಂಗಳೂರಿನಲ್ಲಿ ಗೈಲ್ ಗ್ಯಾಸ್ 100 ನೇ ಸಿಎನ್‌ಜಿ ಸ್ಟೇಷನ್ ಉದ್ಘಾಟನೆ
ಅಂದಹಾಗೆ, ಬಜಾಜ್ ವರ್ಷಕ್ಕೆ 1.2 ಲಕ್ಷ ಬೈಕ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ನಂತರ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ, ಕಂಪನಿಯು ಈ ಸಂಖ್ಯೆಯನ್ನು ವರ್ಷಕ್ಕೆ 2 ಲಕ್ಷಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ. ಈಗ ಪೆಟ್ರೋಲ್ ಗೆ ಹೋಲಿಸಿದರೆ ಸಿಎನ್ ಜಿ ಬೆಲೆ ಕಡಿಮೆಯಾಗಿದ್ದು, ಮೈಲೇಜ್ ಕೂಡ ಹೆಚ್ಚಿರುವುದರಿಂದ ಈ ಬೈಕ್ ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವ ನಿರೀಕ್ಷೆಯಿದೆ. ಹಾಗಾದರೆ, ಈ ಸಿಎನ್‌ಜಿ ಬೈಕ್‌ನಲ್ಲಿ ಯಾವ ರೀತಿಯ ವೈಶಿಷ್ಟ್ಯಗಳಿವೆ? ಬೆಲೆ ಏನಾಗಲಿದೆ? ಸಂಪೂರ್ಣ ವಿವರಗಳನ್ನು ತಿಳಿಯಲು, ಕಂಪನಿಯು ಅಧಿಕೃತ ಘೋಷಣೆ ಮಾಡುವವರೆಗೆ ನಾವು ಕಾಯಬೇಕಾಗಿದೆ.
Published On - 4:54 pm, Thu, 19 October 23