Best bikes under 3 lakh: ರೂ. 3 ಲಕ್ಷಕ್ಕೆ ಲಭ್ಯ ಬೆಸ್ಟ್ ಮಾರ್ಡನ್ ಕ್ಲಾಸಿಕ್ ಬೈಕ್ ಗಳಿವು..

|

Updated on: Jul 17, 2023 | 9:55 PM

ಭಾರತದಲ್ಲಿ ಮಧ್ಯಮ ಕ್ರಮಾಂಕದ ರೆಟ್ರೋ ಮಾರ್ಡನ್ ಬೈಕ್ ಮಾದರಿಗಳಿಗೆ ಉತ್ತಮ ಬೇಡಿಕೆ ದಾಖಲಾಗುತ್ತಿದ್ದು, ಇತ್ತೀಚೆಗೆ ಹಲವು ಬೈಕ್ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಹೊಸ ವಾಹನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ದ್ವಿಚಕ್ರ ವಾಹನಗಳು(Two Wheeler) ಸದ್ಯ ಉಳಿದೆಲ್ಲಾ ವಾಹನಗಳ ಮಾರಾಟಕ್ಕಿಂತಲೂ ಮುಂಚೂಣಿಯಲ್ಲಿವೆ. ಅದರಲ್ಲೂ ಹೊಸ ಬೈಕ್ ಮಾದರಿಗಳ ಮಾರಾಟದಲ್ಲಿ ರೂ. 2 ಲಕ್ಷದಿಂದ ರೂ. 3 ಲಕ್ಷ ಬಜೆಟ್ ಬೆಲೆ ಅಂತರದಲ್ಲಿರುವ ಮಧ್ಯಮ ಕ್ರಮಾಂಕದ ಪ್ರೀಮಿಯಂ ಬೈಕ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ. ಇದೇ ಕಾರಣಕ್ಕೆ ಕಳೆದ ಕೆಲ ತಿಂಗಳಿನಿಂದ ಹಲವಾರು ಹೊಸ ಬೈಕ್ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಅವುಗಳ ವಿಶೇಷತೆ ಮತ್ತು ಬೆಲೆ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಮಧ್ಯಮ ಕ್ರಮಾಂಕದ ಬೈಕ್ ಮಾದರಿಗಳ ಮಾರಾಟದಲ್ಲಿ ಸದ್ಯ 250 ಸಿಸಿ ಯಿಂದ 500 ಸಿಸಿ ಬೈಕ್ ಮಾದರಿಗಳು ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ಇದೇ ಕಾರಣಕ್ಕೆ ಗ್ರಾಹಕರ ಬೇಡಿಕೆ ಆಧರಿಸಿ ವಿವಿಧ ಬೈಕ್ ಕಂಪನಿಗಳು ಹಲವು ಹೊಸ ಬೈಕ್ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿವೆ. ಹೊಸ ಬೈಕ್ ಮಾದರಿಗಳಲ್ಲಿ ರಾಯಲ್ ಎನ್ ಫೀಲ್ಡ್ ಹಂಟರ್ 350, ಯಜ್ಡಿ ರೋಡ್ ಸ್ಟರ್, ಹಾರ್ಲೆ ಡೇವಿಡ್ಸನ್ ಎಕ್ಸ್440, ಟ್ರಯಂಫ್ ಸ್ಪೀಡ್ 400 ಮತ್ತು ಹೋಂಡಾ ಸಿಬಿ300ಆರ್ ಬೈಕ್ ಮಾದರಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ವಿಭಿನ್ನವಾದ ವಿನ್ಯಾಸ, ಭರ್ಜರಿ ಪರ್ಫಾಮೆನ್ಸ್ ನೊಂದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ.

ರಾಯಲ್ ಎನ್ ಫೀಲ್ಡ್ ಹಂಟರ್ 350

ಹೊಸ ರಾಯಲ್ ಎನ್ ಫೀಲ್ಡ್ ಹಂಟರ್ 350 ಬೈಕ್ ಮಾದರಿಯು ರೆಟ್ರೋ ಫ್ಯಾಕ್ಟರಿ, ಮೆಟ್ರೊ ಡ್ಯಾಪರ್ ಮತ್ತು ಮೆಟ್ರೊ ರೆಬಲ್ ಎನ್ನುವ ಮೂರು ವಿವಿಧ ವೆರಿಯೆಂಟ್ ಗಳೊಂದಿಗೆ ಆರಂಭಿಕವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 1.49 ಲಕ್ಷ ಬೆಲೆ ಹೊಂದಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ಪ್ರೇರಿತ 349.3 ಸಿಸಿ ಎಂಜಿನ್ ಆಯ್ಕೆಯೊಂದಿಗೆ 20.2 ಹಾರ್ಸ್ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದನ್ನೂ ಓದಿ: ವಿನೂತನ ಫೀಚರ್ಸ್ ಗಳೊಂದಿಗೆ ಹೋಂಡಾ ಡಿಯೋ 125 ವರ್ಷನ್ ಬಿಡುಗಡೆ

ಯಜ್ಡಿ ರೋಡ್ ಸ್ಟರ್

ಮಾರ್ಡನ್ ವಿನ್ಯಾಸದೊಂದಿಗೆ ಮರಳಿ ಬಂದಿರುವ ಯಜ್ಡಿ ಹೊಸ ಬೈಕ್ ಗಳಲ್ಲಿ ರೋಡ್ ಸ್ಟರ್ ಪ್ರಮುಖ ಆವೃತ್ತಿಯಾಗಿದೆ. ರೋಡ್ ಸ್ಟರ್ ಬೈಕ್ ಮಾದರಿಯು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 2.03 ಲಕ್ಷ ಬೆಲೆ ಹೊಂದಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 334 ಸಿಸಿ ಎಂಜಿನ್ ಆಯ್ಕೆಯೊಂದಿಗೆ 29.23 ಹಾರ್ಸ್ ಪವರ್ ಮತ್ತು 28.95 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾರ್ಲೆ ಡೇವಿಡ್ಸನ್ ಎಕ್ಸ್440

ಹೀರೋ ಮೋಟೊಕಾರ್ಪ್ ಜೊತೆಗೂಡಿ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಹೊಚ್ಚ ಹೊಸ ಎಕ್ಸ್440 ಬೈಕ್ ಬಿಡುಗಡೆ ಮಾಡಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷ ಆರಂಭಿಕ ಬೆಲೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 440 ಸಿಸಿ ಎಂಜಿನ್ ಹೊಂದಿದ್ದು, 27 ಹಾರ್ಸ್ ಪವರ್ ಮತ್ತು 38 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟ್ರಯಂಫ್ ಸ್ಪೀಡ್ 400

ಟ್ರಯಂಫ್ ಮೋಟಾರ್ ಸೈಕಲ್ ಕಂಪನಿಯು ಭಾರತದಲ್ಲಿ ಬಜಾಜ್ ಜೊತೆಗೂಡಿ ಹೊಚ್ಚ ಹೊಸ ಸ್ಪೀಡ್ 400 ಬೈಕ್ ಬಿಡುಗಡೆ ಮಾಡಿದ್ದು, ಇದು ಪ್ರಮುಖ ಮೂರು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 2.33 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ 398.1 ಸಿಸಿ ಎಂಜಿನ್ ಆಯ್ಕೆ ಹೊಂದಿದ್ದು, ಇದು 39.5 ಹಾರ್ಸ್ ಪವರ್ ಮತ್ತು 37.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೋಂಡಾ ಸಿಬಿ300ಆರ್

ಅತ್ಯುತ್ತಮ ಬೈಕ್ ಮಾದರಿಗಳ ಪಟ್ಟಿಯಲ್ಲಿ ಹೋಂಡಾ ಸಿಬಿ300ಆರ್ ಕೂಡಾ ಉತ್ತಮ ಆಯ್ಕೆಯಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 2.77 ಲಕ್ಷ ಬೆಲೆಯೊಂದಿಗೆ 286 ಸಿಸಿ ಎಂಜಿನ್ ಹೊಂದಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 39.5 ಹಾರ್ಸ್ ಪವರ್ ಮತ್ತು 37.5 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.

Published On - 8:00 pm, Mon, 17 July 23