Honda Dio 125: ವಿನೂತನ ಫೀಚರ್ಸ್ ಗಳೊಂದಿಗೆ ಹೋಂಡಾ ಡಿಯೋ 125 ವರ್ಷನ್ ಬಿಡುಗಡೆ

ಹೋಂಡಾ ಮೋಟಾರ್ ಸೈಕಲ್ ಕಂಪನಿಯು ತನ್ನ ಹೊಚ್ಚ ಹೊಸ ಡಿಯೋ 125 ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Follow us
Praveen Sannamani
|

Updated on:Jul 13, 2023 | 8:04 PM

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್(Honda Motorcycle & Scooter) ಕಂಪನಿಯು ಹೊಸ ಡಿಯೋ 125(Dio 125) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 83,400 ಬೆಲೆ ಹೊಂದಿದೆ. ಹೊಸ ಸ್ಕೂಟರ್ ನಲ್ಲಿ ಹೋಂಡಾ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮತ್ತು ಸ್ಮಾರ್ಟ್ ಎನ್ನುವ ಎರಡು ವೆರಿಯೆಂಟ್ ಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ವೆರಿಯೆಂಟ್ ರೂ. 83,400 ಬೆಲೆ ಹೊಂದಿದ್ದರೆ ಸ್ಮಾರ್ಟ್ ವೆರಿಯೆಂಟ್ ರೂ. 91,300 ಬೆಲೆ ಹೊಂದಿದೆ.

ಡಿಯೋ ಸ್ಕೂಟರ್ ಮೂಲಕ ಈಗಾಗಲೇ ಯುವ ಗ್ರಾಹಕರ ಆಯ್ಕೆಯಲ್ಲಿ ಗಮನಸೆಳೆದಿರುವ ಹೋಂಡಾ ಕಂಪನಿಯು ಇದೀಗ ಹೊಸ 125 ಸಿಸಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದು ಗ್ರಾಜಿಯಾ 125 ಮತ್ತು ಆಕ್ಟಿವಾ 125 ಆವೃತ್ತಿಗಳಿಂದ ಹಲವಾರು ತಾಂತ್ರಿಕ ಸೌಲಭ್ಯವನ್ನು ಎರವಲು ಪಡೆದುಕೊಂಡಿದೆ. ಹೀಗಾಗಿ ಹೊಸ ಸ್ಕೂಟರ್ ನಲ್ಲಿ ಆಕ್ಟಿವಾ 125 ಮಾದರಿಯಲ್ಲಿರುವ ಬಿಎಸ್6 ಎರಡನೇ ಮಾನದಂಡ ಪೂರೈಸಿರುವ 125 ಸಿಸಿ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 8.3 ಹಾರ್ಸ್ ಪವರ್ ಮತ್ತು 10.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Honda Dio 125(2)

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿವೆ ಭರ್ಜರಿ ಮೈಲೇಜ್ ನೀಡುವ ಓಲಾ ಇವಿ ಬೈಕ್ ಗಳು

ಹೊಸ ಡಿಯೋ 125 ಸ್ಕೂಟರ್ ನಲ್ಲಿ ಹೋಂಡಾ ಕಂಪನಿ 171 ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ರಿಯರ್ ಡ್ರಮ್ ಬ್ರೇಕ್ ಜೋಡಣೆ ಮಾಡಿದ್ದು, ಸ್ಪೋರ್ಟಿ ಡಿಸೈನ್ ನೊಂದಿಗೆ ಮುಂಭಾಗದಲ್ಲಿ 12 ಇಂಚು ಮತ್ತು ಹಿಂಬದಿಯಲ್ಲಿ 10 ಇಂಚಿನ ಅಲಾಯ್ ವ್ಹೀಲ್ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಸ್ಕೂಟರ್ ನಲ್ಲಿ ಸ್ಟಾರ್ಟ್ / ಸ್ಟಾಪ್ ಬಟನ್, ಸೈಲೆಂಟ್ ಸ್ಟಾರ್ಟರ್, ಡಿಜಿಟಲ್ ಡ್ಯಾಶ್ ಬೋರ್ಡ್, ಎಲ್ಇಡಿ ಹೆಡ್ ಲೈಟ್, 18 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಬೂಟ್ ಮತ್ತು ಹೊರಭಾಗದಲ್ಲಿ ಫ್ಯೂಲ್ ಫಿಲ್ಲರ್ ಕ್ಯಾಪ್ ನೀಡಲಾಗಿದೆ.

ಇನ್ನು ಹೊಸ ಸ್ಕೂಟರ್ ನಲ್ಲಿರುವ ಹೆಚ್-ಸ್ಮಾರ್ಟ್ ವೆರಿಯೆಂಟ್ ಸ್ಟ್ಯಾಂಡರ್ಡ್ ವೆರಿಯೆಂಟ್ ಗಿಂತಲೂ ಹೆಚ್ಚಿನ ಫೀಚರ್ಸ್ ಹೊಂದಿರಲಿದೆ. ಹೆಚ್-ಸ್ಮಾರ್ಟ್ ನಲ್ಲಿ ಸ್ಮಾರ್ಟ್ ಸೇಫ್, ಸ್ಮಾರ್ಟ್ ಅನ್ ಲಾಕ್, ಸ್ಮಾರ್ಟ್ ಫೈಂಡ್ ಜೊತೆಗೆ ಸುಧಾರಿತ ಡಿಸ್ ಪ್ಲೇ ಸೌಲಭ್ಯ ಜೋಡಣೆ ಮಾಡಲಾಗಿದ್ದು, ಹೊಸ ಡಿಸ್ ಪ್ಲೇ ನಲ್ಲಿ ಇದೀಗ ಸ್ಕೂಟರ್ ಸವಾರರು ರಿಯಲ್ ಟೈಮ್ ಮೈಲೇಜ್ ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ಹೊಸ ಸ್ಕೂಟರ್ ನಲ್ಲಿಆ್ಯಂಟಿ ಥೆಫ್ಟ್ ಮತ್ತು ರೀಮೊಟ್ ಕೀ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಇವು ಹೊಸ ವಾಹನಕ್ಕೆ ಹೆಚ್ಚಿನ ಸುರಕ್ಷತೆ ನೀಡುವುದರ ಜೊತೆ ಗ್ರಾಹಕರಿಗೆ ವಿಭಿನ್ನ ಅನುಭವ ನೀಡಲಿವೆ.

Honda Dio 125(3)

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜೊತೆಗೆ ಹೊಸ ಡಿಯೋ 125 ಸ್ಕೂಟರ್ ಖರೀದಿಗಾಗಿ ಹೋಂಡಾ ಕಂಪನಿಯು ಮೂರು ವರ್ಷ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ ಏಳು ವರ್ಷಗಳ ವಿಸ್ತರಿತ ವಾರಂಟಿ ನೀಡಲಿದ್ದು, ಒಟ್ಟಾರೆಯಾಗಿ ಹತ್ತು ವರ್ಷಗಳ ವಾರಂಟಿ ಗ್ರಾಹಕರಿಗೆ ದೊರೆಯಲಿದೆ. ಇದರಿಂದ ಹೊಸ ಸ್ಕೂಟರ್ ಮಾದರಿಯು 125 ಸಿಸಿ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಸುಜುಕಿ ಅವೆನಿಸ್ 125, ಯಮಹಾ ರೇ ಜೆಡ್ಆರ್ 125 ಹೈಬ್ರಿಡ್ ಸೇರಿದಂತೆ ಪ್ರಮುಖ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Published On - 4:43 pm, Thu, 13 July 23