Ola Electric Bike: ಬಿಡುಗಡೆಗೆ ಸಿದ್ದವಾಗಿವೆ ಭರ್ಜರಿ ಮೈಲೇಜ್ ನೀಡುವ ಓಲಾ ಇವಿ ಬೈಕ್ ಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

Follow us
Praveen Sannamani
|

Updated on: Jul 12, 2023 | 9:52 PM

ಹೆಚ್ಚುತ್ತಿರುವ ಇಂಧನ ದರ ಪರಿಣಾಮ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ(Electric Vehicles) ಮುಖಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಹೀಗಾಗಿ ಮಾರುಕಟ್ಟೆ ಬೇಡಿಕೆ ಆಧರಿಸಿ ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ದ್ವಿಚಕ್ರ ವಾಹನಗಳ ಬಿಡುಗಡೆಯ ಸುಳಿವು ನೀಡಿದ್ದು, ಮುಂಬರುವ ಅಗಸ್ಟ್ ವೇಳೆಗೆ ಹೊಸ ದ್ವಿಚಕ್ರ ವಾಹನಗಳನ್ನು ಅಧಿಕೃತವಾಗಿ ರಸ್ತೆಗಿಳಿಸಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಎಸ್1, ಎಸ್1 ಪ್ರೊ ಮತ್ತು ಎಸ್1 ಏರ್ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಸೆಗ್ಮೆಂಟ್ ಗಳಲ್ಲಿ ಸುಮಾರು ಮೂರು ಹೊಸ ಇವಿ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ. ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಓಲಾ ಸಿಇಒ ಭಾವಿಶ್ ಅಗರ್ವಾಲ್ ಅವರು ಹೊಸ ಇವಿ ಬೈಕ್ ಕುರಿತಾಗಿ ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್ ಕೀ ಜೊತೆ ವಿಶೇಷ ಫೀಚರ್ಸ್ ಹೊಂದಿರುವ ಹೊಸ ಹೋಂಡಾ ಡಿಯೋ ಸ್ಕೂಟರ್ ಬಿಡುಗಡೆ

ಹೊಸ ಇವಿ ಬೈಕ್ ಕುರಿತಾಗಿ ಟೀಸರ್ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಇವಿ ಬೈಕ್ ಗಳ ಯಾವುದೇ ತಾಂತ್ರಿಕ ಮಾಹಿತಿ ಹಂಚಿಕೊಂಡಿಲ್ಲವಾದರೂ ವಿವಿಧ ಸೆಗ್ಮೆಂಟ್ ಗಳಲ್ಲಿ ಹೊಸ ಬೈಕ್ ಮಾಡುವ ನೀರಿಕ್ಷೆಯಲ್ಲಿರುವುದು ಸ್ಪಷ್ಟವಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಹೊಸ ಇವಿ ಬೈಕ್ ಮಾದರಿಗಳು 125 ಸಿಸಿ, 150 ಸಿಸಿ ಸಾಮರ್ಥ್ಯದ ಬೈಕ್ ಮಾದರಿಗಳನ್ನು ಆಧರಿಸಿದ ವಿನ್ಯಾಸ ಹೊಂದಿರಲಿದ್ದು, ಇವು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿವೆ.

ಈ ಮೂಲಕ ಓಲಾ ಹೊಸ ಇವಿ ಬೈಕ್ ಮಾದರಿಗಳು ಪ್ರತಿ ಚಾರ್ಜ್ ಗೆ 160 ಕಿ.ಮೀ ನಿಂದ 220 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 1.40 ಲಕ್ಷದಿಂದ ರೂ. 1.60 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಸಾಮೂಹಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್ ಪ್ರೇರಿತ ಬೈಕ್ ಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಯೋಜನೆಗಾಗಿ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಉತ್ಪಾದನೆ ಹೆಚ್ಚಳಕ್ಕಾಗಿ ಗಿಗಾ ಫ್ಯಾಕ್ಟರಿ ಆರಂಭಿಸುತ್ತಿದ್ದು, ಇದರಲ್ಲಿ ವಾರ್ಷಿಕವಾಗಿ 20 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡುವ ಗುರಿ ಹೊಂದಿದೆ. ಹಾಗೆಯೇ ಕಂಪನಿಯು ಉತ್ಪಾದನಾ ಪ್ರಮಾಣ ಹೆಚ್ಚಳದೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದ್ದು, ಇವಿ ವಾಹನ ಮಾರಾಟದಲ್ಲಿ ಮತ್ತೊಂದು ಹಂತದ ಮೈಲಿಗಲ್ಲು ಸಾಧಿಸಲು ನೀರಿಕ್ಷೆಯಲ್ಲಿದೆ. ಇದರೊಂದಿಗೆ ಹೊಸ ಇವಿ ಬೈಕ್ ಗಳು ಇಂಧನ ಮೇಲಿನ ಅವಲಂಬನೆ ತಗ್ಗಿಸಲು ಸಹಕಾರಿಯಾಗಲಿದ್ದು, ಮಾಲಿನ್ಯವನ್ನು ಕೂಡಾ ಪರಿಣಾಮಕಾರಿಯಾಗಿ ತಗ್ಗಿಸಲಿವೆ.