AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Sedan Cars: ರೂ. 20 ಲಕ್ಷಕ್ಕೆ ಸಖತ್ ಪರ್ಫಾಮೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು!

ಭಾರತದಲ್ಲಿ ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಸೆಡಾನ್ ವಿಭಾಗದಲ್ಲಿ ವಿವಿಧ ಕಾರು ಕಂಪನಿಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಸೆಡಾನ್ ಕಾರುಗಳು ಸದ್ಯ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ರೂ. 20 ಲಕ್ಷ ಬೆಲೆ ಅಂತರದಲ್ಲಿ ಉತ್ತಮ ಫೀಚರ್ಸ್ ಗಳೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತಿವೆ.

Best Sedan Cars: ರೂ. 20 ಲಕ್ಷಕ್ಕೆ ಸಖತ್ ಪರ್ಫಾಮೆನ್ಸ್ ಹೊಂದಿರುವ ಸೆಡಾನ್ ಕಾರುಗಳಿವು!
ಫೋಕ್ಸ್ ವ್ಯಾಗನ್ ವರ್ಟಸ್
Praveen Sannamani
|

Updated on: Apr 28, 2024 | 6:57 PM

Share

ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ವಿವಿಧ ಕಾರು ಮಾದರಿಗಳ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಸೆಡಾನ್ ಕಾರುಗಳ (Sedan Cars) ಮಾರಾಟ ವಿಭಾಗವು ಕಳೆದ ಕೆಲ ವರ್ಷಗಳಿಂದ ಇಳಿಕೆಯ ಹಾದಿಯಲ್ಲಿದ್ದು, ಇತ್ತೀಚೆಗೆ ಇವು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ಮೂಲಕ ಇವು ತಮ್ಮದೇ ಆದ ಗ್ರಾಹಕರ ವರ್ಗವನ್ನು ಸೆಳೆಯುತ್ತಿದ್ದು, ರೂ. 15 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿವೆ.

ಫೋಕ್ಸ್ ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ ದೇಶಿಯ ಮಾರುಕಟ್ಟೆಯಲ್ಲಿ 2.0 ಇಂಡಿಯಾ ಯೋಜನೆಯ ಅಡಿ ವಿವಿಧ ಕಾರು ಮಾದರಿಗಳನ್ನು ಪರಿಚಯಿಸಿರುವ ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳು ವರ್ಟಸ್ ಮತ್ತು ಸ್ಲಾವಿಯಾ ಕಾರುಗಳಿಂದ ಉತ್ತಮ ಬೇಡಿಕೆ ಪಡೆದುಕೊಂಡಿವೆ. ವರ್ಟಸ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಬಹುತೇಕ ತಾಂತ್ರಿಕ ಅಂಶಗಳು ಒಂದೇ ಆಗಿದ್ದರೂ ಲಭ್ಯತೆ ಮತ್ತು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಎರಡು ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಂಡಿವೆ.

ಹೊಸ ಕಾರುಗಳಲ್ಲಿ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 7-ಸ್ಪೀಡ್ ಡಿಜಿಎಸ್ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ. ಇವು ವಿವಿಧ ಎಂಜಿನ್ ಗಳಿಗೆ ಅನುಗುಣವಾಗಿ ಗರಿಷ್ಠ 150 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತೆಗೆ ಹೊಸ ಕಾರುಗಳಲ್ಲಿ ಅತಿ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದ್ದು, ಇವು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ. ಈ ಮೂಲಕ ಇವು ಎಕ್ಸ್ ಶೋರೂಂ ಪ್ರಕಾರ ರೂ. 11.53 ಲಕ್ಷದಿಂದ ರೂ. 19.40 ಲಕ್ಷ ಬೆಲೆ ಹೊಂದಿವೆ.

ಇದನ್ನೂ ಓದಿ: ಕೇವಲ 150 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ..

ಹ್ಯುಂಡೈ ವೆರ್ನಾ  ಹೊಸ ತಲೆಮಾರಿ ಹ್ಯುಂಡೈ ವೆರ್ನಾ ಕಾರು ಭಾರೀ ಬದಲಾವಣೆಯೊಂದಿಗೆ ಸೆಡಾನ್ ವಿಭಾಗದಲ್ಲಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ. ಹೊಸ ಕಾರಿನಲ್ಲಿ ಆಕರ್ಷಕ ಬೆಲೆಗೆ ಭರ್ಜರಿ ಫೀಚರ್ಸ್ ಗಳನ್ನು ನೀಡಲಾಗಿದ್ದು, ಇದು ಐಷಾರಾಮಿ ಲುಕ್ ಹೊಂದಿದೆ. ಹೊಸ ವೆರ್ನಾ ಕಾರು ಸದ್ಯ 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಹೊಸ ವೆರ್ನಾ ಕಾರು ಗರಿಷ್ಠ ಸುರಕ್ಷಾ ಫೀಚರ್ಸ್ ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 17.42 ಲಕ್ಷ ಬೆಲೆ ಹೊಂದಿದೆ.

ಹೋಂಡಾ ಸಿಟಿ ಪ್ರೀಮಿಯಂ ಫೀಚರ್ಸ್ ಮತ್ತು ಸರಿಸಾಟಿ ಇಲ್ಲದ ಪರ್ಫಾಮೆನ್ಸ್ ನೊಂದಿಗೆ ಹೋಂಡಾ ಸಿಟಿ ಕಾರು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ. ಸಿಟಿ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 11.82 ಲಕ್ಷದಿಂದ ರೂ. 20.59 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ

ಹೊಸ ಸಿಟಿ ಕಾರಿನ ಹೈಬ್ರಿಡ್ ಮಾದರಿಯು ಆಟ್ಕಿನ್ಸನ್ ಹೈಬ್ರಿಡ್ ಎಂಜಿನ್ ನೊಂದಿಗೆ ಇಸಿವಿಟಿ ಗೇರ್ ಬಾಕ್ಸ್ ಹೊಂದಿದ್ದು, ಇದು 126 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 26.5 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಜೊತೆಗೆ ಸಿಟಿ ಕಾರು ಅಡ್ವಾನ್ಸ್ ಡ್ರೈವಿಂಗ್ ಸಿಸ್ಟಂ ಸೌಲಭ್ಯದ ಜೊತೆಗೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಗಳನ್ನು ಹೊಂದಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.