BMW G 310 RR: ಪ್ರೀಮಿಯಂ ಬೈಕ್ ಮಾರಾಟದಲ್ಲಿ ಬಿಎಂಡಬ್ಲ್ಯು ಜಿ 310 ಆರ್‌ಆರ್ ಹೊಸ ಮೈಲಿಗಲ್ಲು!

ಜರ್ಮನ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟೊರಾಡ್ ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಜಿ 310 ಆರ್‌ಆರ್ ಬೈಕ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

BMW G 310 RR: ಪ್ರೀಮಿಯಂ ಬೈಕ್ ಮಾರಾಟದಲ್ಲಿ ಬಿಎಂಡಬ್ಲ್ಯು ಜಿ 310 ಆರ್‌ಆರ್ ಹೊಸ ಮೈಲಿಗಲ್ಲು!
BMW G 310 RR

Updated on: Oct 28, 2022 | 1:12 PM

ಬಿಎಂಡಬ್ಲ್ಯು ಮೋಟೊರಾಡ್(BMW Motorrad) ಕಂಪನಿಯು ಭಾರತದಲ್ಲಿ ಹೊಸ ಬೈಕ್ ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿದ್ದ ಹೊಸ ಜಿ 310 ಆರ್‌ಆರ್ ಆವೃತ್ತಿಯು ಬಿಡುಗಡೆಯಾದ 100 ದಿನಗಳಲ್ಲಿ 1 ಸಾವಿರ ಯುನಿಟ್ ವಿತರಣೆಗೊಂಡಿದೆ. ಭಾರತದಲ್ಲಿ ಪ್ರೀಮಿಯಂ ಬೈಕ್ ಖರೀದಿಗೆ ಹೆಚ್ಚುತ್ತಿರುವುದು ಮಧ್ಯಮ ಕ್ರಮಾಂಕದ ಐಷಾರಾಮಿ ಬೈಕ್ ಕಂಪನಿಗಳಿಗೆ ಉತ್ತಮ ಲಾಭಾಂಶ ತಂದುಕೊಡುತ್ತಿದ್ದು, ಬಿಎಂಡಬ್ಲ್ಯು ಮೋಟೊರಾಡ್ ಮತ್ತು ಟಿವಿಎಸ್ ಸಹಭಾಗಿತ್ವದಲ್ಲಿ ನಿರ್ಮಾಣದ ಹೊಸ ಜಿ 310 ಆರ್‌ಆರ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೊಸ ಜಿ 310 ಆರ್‌ಆರ್ ಮಾದರಿಯನ್ನು ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ಟಿವಿಎಸ್ ಮೋಟಾರ್ ಜೊತೆಗೂಡಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಟಿವಿಎಸ್‌ ನಿರ್ಮಾಣದ ಅಪಾಚೆ ಆರ್‌ಆರ್310 ಮಾದರಿಯ ರೀಬ್ಯಾಡ್ಜ್ ಆವೃತ್ತಿಯಾಗಿದೆ. ಹೊಸ ಬೈಕ್ ಬಿಡುಗಡೆಯ ನಂತರ ಭಾರೀ ಪ್ರಮಾಣದ ಬುಕಿಂಗ್ ಪಡೆದುಕೊಳ್ಳುತ್ತಿದ್ದು, ದೀಪಾವಳಿ ಸಂದರ್ಭದಲ್ಲಿಯೇ ಹೊಸ ಬೈಕ್ ಖರೀದಿಗೆ ಸುಮಾರು 2,200 ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ.

BMW G 310 RR

ಬೈಕ್ ಬೆಲೆ(ಎಕ್ಸ್ ಶೋರೂಂ)

ಜಿ 310 ಆರ್‌ಆರ್ ಬೈಕ್ ಮಾದರಿಯು ಎರಡು ವೆರಿಯೆಂಟ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಆರಂಭಿಕವಾಗಿ ರೂ. 2.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.99 ಲಕ್ಷ ಬೆಲೆ ಹೊಂದಿದೆ. ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮತ್ತು ಸ್ಟೈಲ್ ಸ್ಪೋರ್ಟ್ ಎನ್ನುವ ಎರಡು ವೆರಿಯೆಂಟ್‌ಗಳಿದ್ದು, ಅಪಾಚೆ ಆರ್‌ಆರ್310 ಮಾದರಿಯಿಂದ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!

ಎಂಜಿನ್ ಮತ್ತು ಪರ್ಫಾಮೆನ್ಸ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಜಿ 310 ಆರ್‌ಆರ್ ಬೈಕಿನಲ್ಲಿ ಅಪಾಚೆ ಆರ್‌ಆರ್310 ಮಾದರಿಯಲ್ಲಿನ 312.2 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 33.52 ಬಿಎಚ್‌ಪಿ ಮತ್ತು 27.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಗೆಯೇ ಹೊಸ ಬೈಕಿನಲ್ಲಿ ಸ್ಪಿಪ್ಲರ್ ಕ್ಲಚ್ ಜೊತೆಗೆ ನಾಲ್ಕು ರೈಡಿಂಗ್ ಮೋಡ್‌ಗಳಿದ್ದು, ಟ್ರ್ಯಾಕ್, ಸ್ಪೋರ್ಟ್, ಅರ್ಬನ್ ಮತ್ತು ರೈನ್ ರೈಡ್ ಮೋಡ್‌ಗಳು ಬೈಕ್ ಸವಾರಿಯನ್ನು ಮತ್ತಷ್ಟು ಸರಳಗೊಳಿಸುತ್ತವೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಜಿ 310 ಆರ್‌ಆರ್ ಬೈಕ್ ಮಾದರಿಯು ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯಿಂದ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಹಂಚಿಕೊಂಡಿದ್ದರೂ ಜಮರ್ನ್ ಬೈಕ್ ಬ್ರಾಂಡ್ ನಲ್ಲಿ ಹಲವು ಗಮನಸೆಳೆಯುವ ಅಂಶಗಳಿವೆ. ಬಿಎಂಡಬ್ಲ್ಯು ಬ್ಯಾಡ್ಜಿಂಗ್ ಮತ್ತು ಲೈವರಿ ಬೈಕಿನ ಹೊರಾಂಗಣ ವಿನ್ಯಾಸಕ್ಕೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಲಿದ್ದು, ಸ್ಪೋರ್ಟ್ಸ್ ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌, ರಾಕ್ಡ್ ವಿಂಡ್‌ಸ್ಕ್ರೀನ್, ಗೋಲ್ಡನ್ ಪೇಂಟ್ ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳು ಮತ್ತು ಎಲ್ಇಡಿ ಟೈಲ್‌ಲೈಟ್‌ ನೀಡಲಾಗಿದೆ.

ಇದನ್ನೂ ಓದಿ: ಸ್ಮಾರ್ಟ್ಎಕ್ಸ್ ಕನೆಕ್ಟ್ ಟೆಕ್ ಹೊಂದಿರುವ ಟಿವಿಎಸ್ ರೈಡರ್ 125 ಬಿಡುಗಡೆ

ಆದರೆ ಪ್ರೀಮಿಯಂ ಬೈಕಿನಲ್ಲಿ ಕಂಪನಿಯು ಹೊಂದಾಣಿಕೆ ಮಾಡಬಹುದಾದ ಸಸ್ಷೆಂಷನ್ ನೀಡದಿರುವುದು ಕೆಲವು ಗ್ರಾಹಕರಿಗೆ ನಿರಾಶೆ ಉಂಟುಮಾಡಬಹುದಾಗಿದ್ದು, ವಿವಿಧ ರೈಡಿಂಗ್ ಮೋಡ್‌ಗಳಿಗೆ ಪೂರಕವಾದ ಮೈಕೆಲಿನ್ ರೋಡ್ 5 ಟೈರ್ ಗಮನಸೆಳೆಯುತ್ತದೆ. ಹಾಗೆಯೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದ್ದು, ಬೈಬ್ರೆ ಬ್ರೇಕ್ ಕ್ಯಾಲಿಪರ್‌ಗಳಿಂದ ಜೋಡಿಸಲಾದ ಡ್ಯುಯಲ್-ಚಾನೆಲ್‌ ಎಬಿಎಸ್ ಸೌಲಭ್ಯ ಈ ಬೈಕಿನಲ್ಲಿದೆ.

Published On - 1:06 pm, Fri, 28 October 22