EV Charging Technology: ಚೀನಾದ EV ಆಟೋಮೊಬೈಲ್ ಕಂಪನಿ BYD ಹೊಸ EV ಚಾರ್ಜಿಂಗ್ ಮತ್ತು ಬ್ಯಾಟರಿ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ತಂತ್ರಜ್ಞಾನದಿಂದ, ಎಲೆಕ್ಟ್ರಿಕ್ ಕಾರುಗಳು (Electric Car) ಪ್ರಸ್ತುತ ಕಾರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಲು ತೆಗೆದುಕೊಳ್ಳುವಷ್ಟೇ ವೇಗವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ಬ್ಯಾಟರಿ ತಂತ್ರಜ್ಞಾನದಲ್ಲಿ ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 470 ಕಿ.ಮೀ. ವರೆಗೆ ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ತಂತ್ರಜ್ಞಾನ ಹೊಂದಿರುವ ಕಾರುಗಳು ಏಪ್ರಿಲ್ 2025 ರಿಂದ ಮಾರುಕಟ್ಟೆಗೆ ಬರಲಿವೆ.
ಕಂಪನಿಯ ಈ ಹೊಸ ತಂತ್ರಜ್ಞಾನವನ್ನು ಹಾನ್ ಎಲ್ ಮತ್ತು ಟ್ಯಾಂಗ್ ಎಲ್ ಎಸ್‌ಯುವಿ ಮಾದರಿಗಳಲ್ಲಿ ಕಾಣಬಹುದು. ಈ ಕಾರುಗಳ ಬೆಲೆ 31 ಲಕ್ಷ ರೂ. ಗಳಿಂದ ಆರಂಭವಾಗಲಿದೆ. ಹೊಸ EV ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಈ ಕಾರುಗಳು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ. ಮೀ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲು ಮತ್ತು ಬಳಕೆದಾರರ ಅನುಕೂಲಕ್ಕಾಗಿ, BYD ದೇಶಾದ್ಯಂತ 4,000 ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುತ್ತದೆ.
ಈ ತಂತ್ರಜ್ಞಾನದ ಘೋಷಣೆಯೊಂದಿಗೆ, BYD EV ವಿಭಾಗದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಮೇಲುಗೈ ಸಾಧಿಸಿದೆ. BYD ಯ ಚಾರ್ಜಿಂಗ್ ವೇಗವು ಟೆಸ್ಲಾ ಸೂಪರ್ ಚಾರ್ಜರ್ ಗಿಂತ (275 ಕಿಮೀ/15 ನಿಮಿಷಗಳು) ವೇಗವಾಗಿರುತ್ತದೆ, ಹಾಗೆಯೆ ಇದು ಮರ್ಸಿಡಿಸ್-ಬೆನ್ಜ್‌ನ ಹೊಸ EV (325 ಕಿಮೀ/10 ನಿಮಿಷಗಳು) ಗಿಂತ ಮುಂದಿದೆ. ಆದಾಗ್ಯೂ, ಟೆಸ್ಲಾ 65,000 ಕ್ಕೂ ಹೆಚ್ಚು ಸೂಪರ್ ಚಾರ್ಜರ್‌ಗಳನ್ನು ಹೊಂದಿದೆ, ಸದ್ಯ BYD ತನ್ನ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುವತ್ತ ಕೆಲಸ ಮಾಡುತ್ತಿದೆ.
Summer Car Tips: ರಣಬಿಸಿಲಿಗೆ ಕಾರಿನ ಒಳಗೆ ಕುಳಿತುಕೊಳ್ಳಲೂ ಆಗುತ್ತಿಲ್ಲವೇ?: ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಜನವರಿ 2025 ರಲ್ಲಿ, BYD 318,000 ವಾಹನಗಳನ್ನು ಮಾರಾಟ ಮಾಡಿತು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 161 ರಷ್ಟು ಹೆಚ್ಚಾಗಿದೆ. ಚೀನಾದಲ್ಲಿ ಅದರ ಮಾರುಕಟ್ಟೆ ಪಾಲು ಶೇಕಡಾ 15 ರಷ್ಟು ತಲುಪಿದ್ದು, ದೇಶದ ಅತಿದೊಡ್ಡ ಕಾರು ತಯಾರಕ ರಾಷ್ಟ್ರವಾಗಿದೆ. ಇದಲ್ಲದೆ, BYD ಷೇರಿನ ಬೆಲೆ ಶೇಕಡಾ 45 ರಷ್ಟು ಹೆಚ್ಚಾಗಿದೆ. ಕಂಪನಿಯ ಹೊಸ EV ತಂತ್ರಜ್ಞಾನ ಮತ್ತು ಅಟೋ ಪೈಲಟ್ ವೈಶಿಷ್ಟ್ಯಗಳು ಭವಿಷ್ಯದಲ್ಲಿ ಅದರ ಮಾರಾಟವನ್ನು ಮತ್ತಷ್ಟು ಹೆಚ್ಚಿಸಬಹುದು. ಅದೇ ಸಮಯದಲ್ಲಿ, BYD ಯ ಹೊಸ ಸೂಪರ್ ಇ- ಪ್ಲಾಟ್‌ಫಾರ್ಮ್ ತಂತ್ರಜ್ಞಾನವು CATL ನಂತಹ ಬ್ಯಾಟರಿ ಕಂಪನಿಗಳಿಗೆ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ