AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Suzuki Ertiga: ಭಾರತದಲ್ಲಿ 7 ಆಸನಗಳ ಕಾರಿಗೆ ಭರ್ಜರಿ ಬೇಡಿಕೆ: ಮೊದಲ ಸ್ಥಾನದಲ್ಲಿರುವ ಕಾರು ಯಾವುದು ನೋಡಿ

Top 7 Seater Cars: ಫೆಬ್ರವರಿ 2025 ರಲ್ಲಿ ಮಾರುತಿ ಸುಜುಕಿಯ ಕಾಂಪ್ಯಾಕ್ಟ್ MPV ಎರ್ಟಿಗಾ, ಮಹೀಂದ್ರಾ ಸ್ಕಾರ್ಪಿಯೊವನ್ನು ಹಿಂದಿಕ್ಕಿ, ಅತ್ಯುತ್ತಮ ಮಾರಾಟವಾದ 7 ಆಸನಗಳ ಪ್ರಯಾಣಿಕ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 13,618 ಯುನಿಟ್‌ಗಳು ಮಾರಾಟವಾಗುವ ಮೂಲಕ ಮಹೀಂದ್ರಾ ಸ್ಕಾರ್ಪಿಯೊ ಅತ್ಯುತ್ತಮ ಮಾರಾಟವಾದ 7 ಸೀಟುಗಳ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Maruti Suzuki Ertiga: ಭಾರತದಲ್ಲಿ 7 ಆಸನಗಳ ಕಾರಿಗೆ ಭರ್ಜರಿ ಬೇಡಿಕೆ: ಮೊದಲ ಸ್ಥಾನದಲ್ಲಿರುವ ಕಾರು ಯಾವುದು ನೋಡಿ
Maruti Suzuki Ertiga
Follow us
ಮಾಲಾಶ್ರೀ ಅಂಚನ್​
| Updated By: Vinay Bhat

Updated on: Mar 16, 2025 | 12:26 PM

(ಬೆಂಗಳೂರು, ಮಾ: 16): ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಈ ಪ್ರವೃತ್ತಿ ಫೆಬ್ರವರಿ 2025 ರಲ್ಲೂ ಮುಂದುವರೆಯಿತು. ಕಳೆದ ತಿಂಗಳು ಈ ವಿಭಾಗದಲ್ಲಿ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟ ಸ್ವಲ್ಪ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಮಹೀಂದ್ರಾದ ಸ್ಕಾರ್ಪಿಯೋ ಮತ್ತು ಬೊಲೆರೊ ಮಾರಾಟವು ಕುಸಿದಿದೆ. ಇದೆಲ್ಲದರ ನಡುವೆ, ಮಹೀಂದ್ರಾ XUV 700 ಮಾರಾಟವು ಫೆಬ್ರವರಿಯಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಕಂಡಿದೆ. ಮಾರುತಿ ಸುಜುಕಿ XL6 ಮತ್ತು ಟಾಟಾ ಸಫಾರಿ ಮಾರಾಟ ಕೂಡ ತೀವ್ರವಾಗಿ ಕುಸಿದಿದೆ.

ಮಾರುತಿ ಸುಜುಕಿ ಎರ್ಟಿಗಾ

ಫೆಬ್ರವರಿ 2025 ರಲ್ಲಿ ಮಾರುತಿ ಸುಜುಕಿಯ ಕಾಂಪ್ಯಾಕ್ಟ್ MPV ಎರ್ಟಿಗಾ, ಮಹೀಂದ್ರಾ ಸ್ಕಾರ್ಪಿಯೊವನ್ನು ಹಿಂದಿಕ್ಕಿ, ಅತ್ಯುತ್ತಮ ಮಾರಾಟವಾದ 7 ಆಸನಗಳ ಪ್ರಯಾಣಿಕ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಆದರೂ ಅದರ ಮಾರಾಟ ಸ್ವಲ್ಪ ಕಡಿಮೆಯಾಗಿದೆ. ಫೆಬ್ರವರಿ 2025 ರಲ್ಲಿ 14,868 ಯುನಿಟ್ ಎರ್ಟಿಗಾ ಮಾರಾಟವಾಗಿದ್ದು, ಇದು ಫೆಬ್ರವರಿ 2024 ರಲ್ಲಿ 15,519 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 4 ರಷ್ಟು ಕಡಿಮೆಯಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ

ಫೆಬ್ರವರಿಯಲ್ಲಿ 13,618 ಯುನಿಟ್‌ಗಳು ಮಾರಾಟವಾಗುವ ಮೂಲಕ ಮಹೀಂದ್ರಾ ಸ್ಕಾರ್ಪಿಯೊ ಅತ್ಯುತ್ತಮ ಮಾರಾಟವಾದ 7 ಸೀಟುಗಳ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರಾಟವಾದ 15,051 ಯುನಿಟ್‌ಗಳಿಗೆ ಹೋಲಿಸಿದರೆ ಈ ಸಂಖ್ಯೆಯು ಶೇ. 10 ರಷ್ಟು ಕುಸಿತವನ್ನು ಕಂಡಿದೆ.

ಇದನ್ನೂ ಓದಿ
Image
ಇದು ಭಾರತದ ಅತ್ಯಂತ ಅಗ್ಗದ ಹಾಗೂ ಅತಿ ಹೆಚ್ಚು ಮೈಲೇಜ್ ನೀಡುವ ಕಾರು
Image
ಈ ಟಾಟಾ ಕಾರಿನ ಬೆಲೆ ಕೇವಲ 5 ಲಕ್ಷದ 99 ಸಾವಿರ: 26 ಕಿ. ಮೀ ಬಂಪರ್ ಮೈಲೇಜ್
Image
ಹೊಸ ಅವತಾರದಲ್ಲಿ ಬರುತ್ತಿದೆ ಭಾರತದ ನಂಬರ್ 1 ಬೈಕ್: ಯಾವುದು?, ಬೆಲೆ ಎಷ್ಟು?
Image
ಫ್ರಾಂಕ್ಸ್‌ನ ಬಿರುಗಾಳಿಗೆ ತತ್ತರಿಸಿದ ಬ್ರೆಝಾ-ನೆಕ್ಸಾನ್

ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ ಮಾರಾಟವೂ ಕುಸಿತ ಕಂಡಿದೆ. ಈ ಕಾಂಪ್ಯಾಕ್ಟ್ 7 ಆಸನಗಳ ಕಾರಿನ 8,690 ಯುನಿಟ್‌ಗಳು ಫೆಬ್ರವರಿ 2025 ರಲ್ಲಿ ಮಾರಾಟವಾದವು, ಇದು ಫೆಬ್ರವರಿ 2024 ರಲ್ಲಿ ಮಾರಾಟವಾದ 10,113 ಯುನಿಟ್‌ಗಳಿಗಿಂತ ಶೇಕಡಾ 14 ರಷ್ಟು ಕಡಿಮೆಯಾಗಿದೆ.

Maruti Celerio: ಇದು ಭಾರತದ ಅತ್ಯಂತ ಅಗ್ಗದ ಹಾಗೂ ಅತಿ ಹೆಚ್ಚು ಮೈಲೇಜ್ ನೀಡುವ ಕಾರು: ಬೆಲೆ ಎಷ್ಟು ನೋಡಿ

ಟೊಯೋಟಾ ಇನ್ನೋವಾ

ಟೊಯೋಟಾ ಇನ್ನೋವಾ ಸರಣಿಯಲ್ಲಿ, ಇನ್ನೋವಾ ಹೈಕ್ರಾಸ್ ಮತ್ತು ಇನ್ನೋವಾ ಕ್ರಿಸ್ಟಾ ಮಾರಾಟವು ಫೆಬ್ರವರಿಯಲ್ಲಿ ಸ್ಥಿರವಾಗಿತ್ತು. ಒಟ್ಟು 8,449 ಯುನಿಟ್‌ಗಳು ಮಾರಾಟವಾಗಿದ್ದು, ಇದು ಫೆಬ್ರವರಿ 2024 ರಲ್ಲಿ 8,481 ಯುನಿಟ್‌ಗಳನ್ನು ಸೇಲ್ ಮಾಡಿತ್ತು.

ಮಹೀಂದ್ರಾ XUV 700

ಕಳೆದ ಫೆಬ್ರವರಿಯಲ್ಲಿ ಮಹೀಂದ್ರಾ XUV 700 ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮಹೀಂದ್ರಾದ ಈ ಅದ್ಭುತ 7 ಆಸನಗಳ SUV ಮಾರಾಟವು ಶೇಕಡಾ 14 ರಷ್ಟು ಹೆಚ್ಚಾಗಿದೆ. ಫೆಬ್ರವರಿ 2025 ರಲ್ಲಿ 7,468 ಯುನಿಟ್‌ಗಳು ಮಾರಾಟವಾಗಿದ್ದು, ಫೆಬ್ರವರಿ 2024 ರಲ್ಲಿ 6,546 ಯುನಿಟ್‌ಗಳಿಂದ ಹೆಚ್ಚಾಗಿದೆ.

ಟೊಯೋಟಾ ಫಾರ್ಚೂನರ್

ಟೊಯೋಟಾದ ಶಕ್ತಿಶಾಲಿ ಎಸ್‌ಯುವಿ ಫಾರ್ಚೂನರ್ ಮಾರಾಟವು ಫೆಬ್ರವರಿಯಲ್ಲಿ ಕುಸಿತ ಕಂಡಿದೆ. ಫೆಬ್ರವರಿ 2025 ರಲ್ಲಿ 2,876 ಯುನಿಟ್‌ಗಳು ಮಾರಾಟವಾಗಿದ್ದು, ಇದು ಫೆಬ್ರವರಿ 2024 ರಲ್ಲಿ ಮಾರಾಟವಾದ 3,395 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 15 ರಷ್ಟು ಕುಸಿತವಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?