Citroen: ಹ್ಯುಂಡೈ ಕ್ರೆಟಾ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ ಸಿಟ್ರನ್ ಹೊಸ ಸಿ3 ಏರ್ ಕ್ರಾಸ್

ಫ್ರೆಂಚ್ ಕಾರು ಕಂಪನಿಯಾಗಿರುವ ಸಿಟ್ರನ್ ಭಾರತದಲ್ಲಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಭಾರತದಲ್ಲಿ ಸದ್ಯ ಸಿ3 ಮತ್ತು ಸಿ5 ಏರ್ ಕ್ರಾಸ್ ಕಾರು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿ ಮತ್ತೊಂದು ಹೊಸ ಎಸ್ ಯುವಿ ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಎಸ್ ಯುವಿ ಕಾರುಗಳ ಮಾರಾಟವು ಸಾಕಷ್ಟು ಹೆಚ್ಚಳವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಇತ್ತೀಚೆಗೆ ಹಲವು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳು ಬಿಡುಗಡೆಯ ಸಿದ್ದತೆಯಲ್ಲಿದ್ದು, ಸಿಟ್ರನ್ ಇಂಡಿಯಾ(Citroen India) ಕೂಡಾ ತನ್ನ ಬಹುನೀರಿಕ್ಷಿತ ಸಿ3 ಏರ್ ಕ್ರಾಸ್(C3 Aircross) ಬಿಡುಗಡೆ ಮಾಡುವ ಸುಳಿವು ನೀಡಿದೆ. ಭಾರತದಲ್ಲಿ ಸದ್ಯ ಸಿ3 ಮತ್ತು ಸಿ5 ಏರ್ ಕ್ರಾಸ್ ಕಾರು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿ ಇದೀಗ ಮತ್ತೊಂದು ಹೊಸ ಮಧ್ಯಮ ಕ್ರಮಾಂಕದ ಎಸ್ ಯುವಿ ಬಿಡುಗಡೆ ಮಾಡುತ್ತಿದೆ.

ವಿವಿಧ ಕಾರು ಮಾದರಿಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಸಿಟ್ರನ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಎಸ್ ಯುವಿ ಕಾರನ್ನ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಭಾರತದಲ್ಲಿ ಸದ್ಯ ಸಿ3, ಇ ಸಿ3 ಎಲೆಕ್ಟ್ರಿಕ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಇದೀಗ ಕಂಪನಿಯು ಹೊಸದಾಗಿ ಸಿ3 ಏರ್ ಕ್ರಾಸ್ ಕಾರು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. ಹೊಸ ಕಾರು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಯ ಬೆಸ್ಟ್ ಸಿಎನ್ ಜಿ ಕಾರುಗಳಿವು!

ಮಾಹಿತಿಗಳ ಪ್ರಕಾರ ಸಿಟ್ರನ್ ಕಂಪನಿಯು ಹೊಸ ಸಿ3 ಏರ್ ಕ್ರಾಸ್ ಕಾರನ್ನ ಇದೇ ತಿಂಗಳು 27ರಂದು ಅನಾವರಣಗೊಳಿಸುವ ಸಾಧ್ಯತೆಗಳಿವೆ. ಹೊಸ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಸಿ3 ಕಾರು ಮಾದರಿಯ ಹೋಲಿಕೆ ಹೊಂದಿದ್ದು, ಇದು 4.4 ಮೀಟರ್ ಉದ್ದಳತೆ ಹೊಂದಿರಬಹುದಾಗಿದೆ. ಇದರೊಂದಿಗೆ ಹೊಸ ಕಾರು 5 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿರಲಿದ್ದು, 5 ಸೀಟರ್ ಮಾದರಿಯಲ್ಲಿ ಉತ್ತಮ ಒಳಾಂಗಣ ಸೌಲಭ್ಯ ಹೊಂದಿದೆ.

ಹಾಗೆಯೇ ಹೊಸ ಕಾರು ಪೆಟ್ರೋಲ್ ಮಾದರಿಯಲ್ಲಿ ಮಾತ್ರವಲ್ಲದೆ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಬಿಡುಗಡೆಯಾಗಬಹುದಾಗಿದೆ. ಆದರೆ ಹೊಸ ಕಾರಿನಲ್ಲಿ ಸದ್ಯಕ್ಕೆ ಹೊಸ ಕಾರಿನಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದ್ದು, ಇದು ಅತ್ಯಾಧುನಿಕ ವಿನ್ಯಾಸ ಭಾಷೆಯೊಂದಿಗೆ ಎಸ್‌ಯುವಿ ಪ್ರಿಯರನ್ನ ಸೆಳೆಯಲಿದೆ.

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿದ ಮಾರುತಿ ವ್ಯಾಗನ್ಆರ್ ಮತ್ತು ಆಲ್ಟೊ ಕೆ10

ಇನ್ನು ಹೊಸ ಸಿ3 ಏರ್ ಕ್ರಾಸ್ ಎಸ್‌ಯುವಿಯಲ್ಲಿ ಸಿಟ್ರನ್ ಕಂಪನಿಯು ಹಲವಾರು ವಿನೂತನ ಫೀಚರ್ಸ್ ಗಳನ್ನ ನೀಡಲಿದೆ. ಹೊಸ ಕಾರಿನ ಮುಂಭಾಗದಲ್ಲಿ ಸಿಗ್ನೇಚರ್ ಗ್ರಿಲ್, ವಿಭಜಿತ ಹೆಡ್‌ಲೈಟ್ ಗಳು, ಎಲ್ಇಡಿ ಡಿಆರ್ ಎಲ್ ಗಳನ್ನ ಜೋಡಿಸಲಿದೆ. ಹಾಗೆಯೇ ಹೊಸ ಕಾರಿನ ಒಳಭಾಗದಲ್ಲಿ 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಬಹುದಾಗಿದೆ.

ಇದರಲ್ಲಿ ಟಾಪ್ ಎಂಡ್ ಮಾದರಿಯು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಸೇರಿದಂತೆ ಹಲವು ಹೊಸ ಕಾರ್ ಟೆಕ್ ಕನೆಕ್ಟ್ ಸೌಲಭ್ಯಗಳಿರಲಿವೆ. ಈ ಮೂಲಕ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಇದು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Published On - 7:10 pm, Fri, 7 April 23

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Follow Us