ಭಾರತದಲ್ಲಿ ಕಚೇರಿ ತೆರೆದ ಎಲಾನ್ ಮಸ್ಕ್ ಟೆಸ್ಲಾ ಕಂಪನಿ, ಚೀನಾ ವಾಹನ ತಯಾರಕರಿಗೆ ಸಡ್ಡು ಹೊಡೆದ ಮೋದಿ ಸರ್ಕಾರ

Pune: ಟೆಸ್ಲಾ ಕಂಪನಿಯ ಜಾಗತಿಕ ಪ್ರತಿಸ್ಪರ್ಧಿಗಳಾದ ಗ್ರೇಟ್ ವಾಲ್ ಮೋಟಾರ್ಸ್ ಮತ್ತು BYD ಭಾರತದಲ್ಲಿ ಅನುಮೋದನೆಗಾಗಿ ಕಾದುಕುಳಿತಿರುವಾಗ, ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಮಯ ಅನುಕೂಲಕರವಾಗಿದೆ.

ಭಾರತದಲ್ಲಿ ಕಚೇರಿ ತೆರೆದ ಎಲಾನ್ ಮಸ್ಕ್ ಟೆಸ್ಲಾ ಕಂಪನಿ, ಚೀನಾ ವಾಹನ ತಯಾರಕರಿಗೆ ಸಡ್ಡು ಹೊಡೆದ ಮೋದಿ ಸರ್ಕಾರ
ಭಾರತದಲ್ಲಿ ಕಚೇರಿ ತೆರೆದ ಎಲಾನ್ ಮಸ್ಕ್ ಟೆಸ್ಲಾ ಕಂಪನಿ
Follow us
|

Updated on: Aug 04, 2023 | 10:15 AM

ಎಲಾನ್ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಕಂಪನಿ (Elon Musk, Tesla) ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಜ್ಜಾಗುತ್ತಿದೆ. ಇತ್ತೀಚಿನ ಬೆಳವಣಿಗೆಗಳಲ್ಲಿ, ರಿಯಲ್ ಎಸ್ಟೇಟ್ ಅನಾಲಿಟಿಕ್ಸ್ ಒಪ್ಪಂದದ ಪ್ರಕಾರ, ಪುಣೆಯ (Pune) ಪಂಚಶೀಲ್​ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಬಿ ವಿಂಗ್‌ನ ಮೊದಲ ಮಹಡಿಯಲ್ಲಿ 5,850 ಚದರ ಅಡಿ ಕಚೇರಿ ಸ್ಥಳಕ್ಕಾಗಿ EV ತಯಾರಕರು ಟೇಬಲ್‌ಸ್ಪೇಸ್ ಟೆಕ್ನಾಲಜೀಸ್‌ನೊಂದಿಗೆ ಐದು ವರ್ಷಗಳ ಗುತ್ತಿಗೆಗೆ ಸಹಿ ಹಾಕಿದ್ದಾರೆ. ಇತ್ತೀಚೆಗೆ ಅಮೆರಿಕ ಭೇಟಿಯ ಸಂದರ್ಭದಲ್ಲಿ ಟೆಸ್ಲಾ ಸಿಇಒ (Elon Reeve Musk) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿಯಾಗಿದ್ದರು ಎಂಬುದು ಗಮನಾರ್ಹ.

ಮಾಸಿಕ ಬಾಡಿಗೆ ರೂ 11.65 ಲಕ್ಷ ಎಂದು ವರದಿಯಾಗಿದೆ ಮತ್ತು 5 ವರ್ಷಗಳ ಗುತ್ತಿಗೆ ಅವಧಿಗೆ ಭದ್ರತಾ ಠೇವಣಿ ರೂ 34.95 ಲಕ್ಷ ನಿಗದಿಯಾಗಿದೆ. ಒಪ್ಪಂದವು ಐದು ಕಾರ್ ಪಾರ್ಕ್‌ಗಳು ಮತ್ತು ಹತ್ತು ಬೈಕ್ ಪಾರ್ಕ್‌ಗಳನ್ನು ಒಳಗೊಂಡಿದೆ. ಕೆಲ ದಿನಗಳ ಹಿಂದೆ ಟೆಸ್ಲಾದ ಇಬ್ಬರು ಹಿರಿಯ ಪ್ರತಿನಿಧಿಗಳು ಇವಿ ವಾಹನ ಘಟಕವನ್ನು ಸ್ಥಾಪಿಸಲು ಭಾರತದಲ್ಲಿ ಜಾಗಕ್ಕಾಗಿ ಅನ್ವೇಷಿಸುತ್ತಿದ್ದರು. ಇನ್ವೆಸ್ಟ್ ಇಂಡಿಯಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಇವಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ದೇಶದಲ್ಲಿ $ 1 ಬಿಲಿಯನ್ ಹೂಡಿಕೆ ಮಾಡುವ ಚೀನಾದ EV ತಯಾರಕ BYD’S (ಬಿಲ್ಡ್ ಯುವರ್ ಡ್ರೀಮ್ಸ್) ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ತಿರಸ್ಕರಿಸಿದೆ.

2020 ರಲ್ಲಿ ಇಂಡೋ-ಚೀನಾ ಗಡಿ ವಿವಾದ ತೀವ್ರವಾದ ನಂತರ ಬಿಗಿಯಾದ ಕಂಪನಿ ಸ್ಥಾಪನೆ ಅನುಮೋದನೆಯ ಅಗತ್ಯಗಳ ಹಿನ್ನೆಲೆಯಲ್ಲಿ ಟೆಸ್ಲಾದ ಈ ನಿರ್ಧಾರ ಗಮನಾರ್ಹವಾಗಿದೆ. ಈ ಹಿಂದೆ ಚೀನಾದ ಹೂಡಿಕೆಗಳನ್ನು ಸರ್ಕಾರ ತಿರಸ್ಕರಿಸಿರುವುದು ಇದೇ ಮೊದಲಲ್ಲ, ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಇದೇ ರೀತಿಯ ಅನುಭವ ಎದುರಿಸಿತು. ಭಾರತದಲ್ಲಿ ಅದರ ಇವಿ ವಾಹನ ಉತ್ಪಾದನೆಗೆ $ 1 ಬಿಲಿಯನ್ ವೆಚ್ಚದ ಘಟಕಕ್ಕೆ ಅನುಮತಿ ನೀಡಲಾಗಿಲ್ಲ.

ಹೆಚ್ಚುವರಿಯಾಗಿ, BYD ತನ್ನ ಚೆನ್ನೈ ಬಳಿಯ ಶ್ರೀಪೆರಂಬದೂರ್ ಸ್ಥಾವರದಲ್ಲಿ ಜೋಡಿಸುತ್ತಿರುವ ಕಾರುಗಳಿಗೆ ತೆರಿಗೆ ವಂಚನೆ ಆರೋಪಗಳನ್ನು ಎದುರಿಸಬೇಕಾದೀತು ಎಂದು ವರದಿಯಾಗಿದೆ. ಭಾರತದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್‌ನ ತನಿಖೆಯ ಪ್ರಕಾರ ವಾಹನ ತಯಾರಕರು $ 9 ಮಿಲಿಯನ್ ನಷ್ಟು ಕಡಿಮೆ ತೆರಿಗೆಯನ್ನು ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಸೂಕ್ತ ಆಯ್ಕೆ; ಟೆಸ್ಲಾ ಘಟಕ ಸ್ಥಾಪಿಸುವಂತೆ ಎಲಾನ್​ ಮಸ್ಕ್​ಗೆ ಎಂಬಿ ಪಾಟೀಲ್ ಮನವಿ

ಟೆಸ್ಲಾ ಕಂಪನಿಯ ಜಾಗತಿಕ ಪ್ರತಿಸ್ಪರ್ಧಿಗಳಾದ ಗ್ರೇಟ್ ವಾಲ್ ಮೋಟಾರ್ಸ್ ಮತ್ತು BYD ಭಾರತದಲ್ಲಿ ಅನುಮೋದನೆಗಾಗಿ ಕಾದುಕುಳಿತಿರುವಾಗ, ಟೆಸ್ಲಾ ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಮಯ ಅನುಕೂಲಕರವಾಗಿದೆ. ಕಳೆದ ತಿಂಗಳು ಮೋದಿ ಅವರೊಂದಿಗಿನ ಭೇಟಿಯ ನಂತರ ಮಸ್ಕ್, “ಅವರು (ಮೋದಿ) ನಿಜವಾಗಿಯೂ ಭಾರತದ ಬಗ್ಗೆ ಕಾಳಜಿ ವಹಿಸುತ್ತಾರೆ. ಏಕೆಂದರೆ ಅವರು ಭಾರತದಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ, ಇದನ್ನು ನಾವು ಮಾಡಲು ಉದ್ದೇಶಿಸಿದ್ದೇವೆ.” ಎಂದು ತಿಳಿಸಿದ್ದರು.

ಆಟೋಮೊಬೈಲ್ ಕ್ಷೇತ್ರದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು